ಯಂಗ್ಸ್ಟರ್ಸ್ಗೆ ಮಣೆ ಹಾಕಿದ ಬಿಸಿಸಿಐ, ಸೀನಿಯರ್ಸ್ಗೆ ಸಂಕಷ್ಟ
ಟಾಪ್ ಆರ್ಡರ್ನಲ್ಲಿ ರನ್ ಗಳಿಸಬೇಕಾದ ಅನಿವಾರ್ಯ ಕೊಹ್ಲಿಗಿದೆ
ಕೆರಿಬಿಯನ್ ಟೂರ್ನಿ ವಿರಾಟ್ ಕೊಹ್ಲಿಗೆ ತುಂಬಾ ಇಂಪಾರ್ಟೆಂಟ್..!
ವೆಸ್ಟ್ ಇಂಡೀಸ್ ಪ್ರವಾಸದ ಕಿಕ್ ಸ್ಟಾರ್ಟ್ಗೆ ಜಸ್ಟ್ ಮೂರೇ 3 ದಿನ ಬಾಕಿಯಿದೆ. ಅರ್ಹತಾ ಸುತ್ತಿನಿಂದ ಹೊರಬಿದ್ದ ಕೆರಿಬಿಯನ್ ಎದುರು ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆ ಅಭಿಮಾನಿಗಳಲ್ಲಿದೆ. ಆದ್ರೆ, ಈ ಸಿರೀಸ್ ವಿರಾಟ್ ಕೊಹ್ಲಿ ಮೋಸ್ಟ್ ಪ್ರೆಸ್ಟೀಜಿಯಸ್ ಸಿರೀಸ್ ಆಗಿದೆ. ಈ ಒಂದು ಸಿರೀಸ್ ಮೇಲೆ ಕೊಹ್ಲಿಯ ಭವಿಷ್ಯವೇ ಅಡಗಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರೋ ಟೀಮ್ ಇಂಡಿಯಾ, ಜುಲೈ 12ರಿಂದ ಆರಂಭವಾಗಲಿರೋ ಟೆಸ್ಟ್ ಸರಣಿಗೆ ಸಕಲ ಸಿದ್ಧತೆ ನಡೆಸ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸುಲಭ ಗೆಲುವನ್ನೇ ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಆದ್ರೆ, ಇದೇ ಪ್ರವಾಸ ವಿಶ್ವ ಸಾಮ್ರಾಟ ಕೊಹ್ಲಿ ಪಾಲಿಗೆ ಪ್ರತಿಷ್ಠೆಯ ಸರಣಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಯಂಗ್ ಸ್ಟರ್ಸ್ ಪೈಪೋಟಿ.
ವಿಶ್ವಕಪ್ಗೂ ಮುನ್ನ ಫ್ರೂವ್ ಮಾಡ್ಬೇಕಿದೆ ಸಾಮಾರ್ಥ್ಯ
ಸದ್ಯ ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗ್ತಿರುವ ವಿರಾಟ್ಗೆ, ಕೆರಿಬಿಯನ್ ಟೂರ್ ಅಗ್ನಿ ಪರೀಕ್ಷೆಯ ಕಣವಾಗಿದೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರೀ ಮಹತ್ವವನ್ನೇ ಪಡೆದುಕೊಂಡಿರುವ ಕೆರಿಬಿಯನ್ ಪ್ರವಾಸ ಕೊಹ್ಲಿ, ಕರಿಯರ್ನ ದಿಕ್ಕು ದೆಸೆಯನ್ನೇ ಬದಲಿಸುವ ಸರಣಿ. ಹೀಗಾಗಿ ಏಕದಿನ ವಿಶ್ವಕಪ್ಗೂ ಮುನ್ನ ವಿರಾಟ್, ವೀರಾವೇಶದ ಬ್ಯಾಟಿಂಗ್ ಮೂಲಕ ಹಳೆಯ ಖದರ್ಗೆ ಮರಳಬೇಕಾದ ಅನಿವಾರ್ಯತೆ ಇದ್ದೇ ಇದೆ.
ಅಷ್ಟೇ ಅಲ್ಲ, ಯುವ ತಂಡದೊಂದಿಗೆ ಶಿಕಾರಿಗೆ ಹೊರಟಿರುವ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಎಂಬ ಅಪದ್ಭಾಂದವ ಇದ್ದಾನೆ, ಅನ್ನೋದನ್ನ ಫ್ರೂವ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಫಾರ್ಮ್ ಕಂಡುಕೊಳ್ಳುವ ಅಗತ್ಯತೆ ಇದ್ದೇ ಇದೆ.
ಅಪಾಯದಲ್ಲಿದೆ ವಿರಾಟ್ ಕೊಹ್ಲಿಯ ಭವಿಷ್ಯ..!
ಈಗಾಗಲೇ ಚುಟುಕು ಫಾರ್ಮೆಟ್ನಿಂದ ದೂರವಾಗಿರೋ ಕೊಹ್ಲಿ, ಸದ್ಯ ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್ಗೆ ಮಾತ್ರವೇ ಸಿಮೀತವಾಗಿದ್ದಾರೆ. ಮತ್ತೊಂದೆಡೆ ಭವಿಷ್ಯದ ತಂಡ ಕಟ್ಟುವತ್ತ ಹೆಜ್ಜೆ ಇಟ್ಟಿರುವ ಬಿಸಿಸಿಐ, ಈಗಾಗಲೇ ಬದಲವಣೆಯ ಪರ್ವಕ್ಕೆ ನಾಂದಿ ಹಾಡಿದೆ. ಇದಕ್ಕೆ ಪುಷ್ಠಿ ಎಂಬಂತೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಿರೋ ಭಾರತ ತಂಡ ಅನ್ನೋದನ್ನ ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ. ಇಂಥಹ ಸಂದರ್ಭದಲ್ಲಿ ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್ನಲ್ಲಿ ವೈಫಲ್ಯ ಅನುಭವಿಸಿದರೆ, ಕೊಹ್ಲಿ ಭವಿಷ್ಯ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.
ಕೆರಿಬಿಯನ್ ಸರಣಿ ಬಳಿಕ ಮತ್ತಷ್ಟು ಬದಲಾವಣೆ ಖಚಿತ..!
ಈಗಾಗಲೇ ಯಂಗ್ಸ್ಟರ್ಸ್ಗೆ ಮಣೆ ಹಾಕಿರೋ ಬಿಸಿಸಿಐ, ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಲ್ಲಿ ಮತ್ತಷ್ಟು ಬದಲಾವಣೆ ಮಾಡೋ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ವಿರಾಟ್, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಡಿಯಲೇಬೇಕಿದೆ. ಇಲ್ದಿದ್ರೆ, ವಿರಾಟ್ ಕೊಹ್ಲಿ ಟೆಸ್ಟ್ ಅಥವಾ ಏಕದಿನ ಫಾರ್ಮೆಟ್ನ ಭವಿಷ್ಯ ತೂಗುಯೂಯ್ಯಲೆಗೆ ಸಿಲುಕಲಿದೆ.
ವಿಶ್ವಕಪ್ಗೂ ಮುನ್ನ ವೃದ್ದಿಸಿಕೊಳ್ಳಬೇಕಿದೆ ಆತ್ಮವಿಶ್ವಾಸ..!
ಒಂದ್ಕಡೆ ಕಾಂಪಿಟೇಟರ್ಗಳ ಸವಾಲಾದರೆ, ಮತ್ತೊಂದೆಡೆ ವಿಶ್ವಕಪ್ಗೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆ ಕೊಹ್ಲಿ ಮುಂದಿದೆ. ಯಾಕಂದ್ರೆ, ಭಾರತದ ಅತಿಥ್ಯದಲ್ಲೇ ನಡೆಯುತ್ತಿರೋ ವಿಶ್ವಕಪ್ ಮೆಗಾ ಟೂರ್ನಿ ಗೆಲ್ಲಬೇಕಾದ್ರೆ, ವಿರಾಟ್ ಕೊಹ್ಲಿಯ ವೀರಾವೇಶದ ಬ್ಯಾಟಿಂಗ್ ಮೋಸ್ಟ್ ಇಂಪಾರ್ಟೆಂಟ್. ಟೀಮ್ ಇಂಡಿಯಾದ ಕೀ ಬ್ಯಾಟರ್ ಆಗಿ ಟಾಪ್ ಆರ್ಡರ್ನಲ್ಲಿ ರನ್ ಗಳಿಸಬೇಕಾದ ಅನಿವಾರ್ಯತೆ ಇದ್ದೇ ಇದೆ. ಈ ನಿಟ್ಟಿನಲ್ಲಿ ವಿರಾಟ್, ರನ್ ಗಳಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ. ಇಲ್ದಿದ್ರೆ, ವಿಶ್ವಕಪ್ ಬಳಿಕ ಗೇಟ್ಪಾಸ್ ಮಾತ್ರ ತಪ್ಪಿದ್ದಲ್ಲ.
ಅದೇನೇ ಆಗಲಿ. ವೆಸ್ಟ್ ಇಂಡೀಸ್ ಟೂರ್ ವಿರಾಟ್ ಪಾಲಿಗೆ ಮೋಸ್ಟ್ ಪ್ರೆಸ್ಟೇಜಿಯಸ್ ಟೂರ್ ಆಗಿದ್ದು, ಯಾವ ಮಟ್ಟಕ್ಕೆ ಅಬ್ಬರಿಸಿ ಬೊಬ್ಬೆರೆಯುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ