newsfirstkannada.com

ವಿರಾಟ್ ಕೊಹ್ಲಿ ಅಲ್ಲ, ಆರ್​. ಅಶ್ವಿನ್​ ಅಲ್ಲ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಮತ್ಯಾರಿಗೆ? ಈ ಸ್ಟಾರ್​ ಆಟಗಾರನಿಗೆ ಸಿಗುತ್ತಾ ಚಾನ್ಸ್‌?

Share :

23-06-2023

  ಭವಿಷ್ಯದ ದೃಷ್ಟಿಯಿಂದ ಈ ಯಂಗ್​ ಪ್ಲೇಯರ್​ಗೆ ಪಟ್ಟ ಕಟ್ಟುವುದು ಪಕ್ಕನಾ?

  ಧೋನಿ ನಾಯಕತ್ವಗಿಂತ ಮೊದಲಿದ್ದ ಪರಿಸ್ಥಿತಿ ಈಗ ಟೀಮ್​ ಇಂಡಿಯಾಲ್ಲಿದೆ

  ಪಾಂಡ್ಯ ಟಿ20 ಕ್ಯಾಪ್ಟನ್​ ಆದ್ರೆ, ಟೆಸ್ಟ್​, ಒನ್​ಡೇಗೆ ಕ್ಯಾಪ್ಟನ್​ ಈ ಆಟಗಾರನಾ?

ಸದ್ಯಕ್ಕೆ ಟೀಮ್​ ಇಂಡಿಯಾದ ನಾಯಕತ್ವ ಬದಲಾವಣೆಯಾಗೋದು ಅನುಮಾನ. ಆದ್ರೆ, 3 ತಿಂಗಳ ಬಳಿಕ ನಡೆಯೋ ಏಕದಿನ ವಿಶ್ವಕಪ್ ಬಳಿಕ ಟೀಮ್​ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆ ಕನ್​ಫರ್ಮ್​. ಪಟ್ಟದಿಂದ ರೋಹಿತ್​ ಶರ್ಮಾರನ್ನ ಕೆಳಗಿಳಿಸೋಕೆ ಸದ್ದಿಲ್ಲದೇ ಸಿದ್ಧತೆ ಆರಂಭವಾಗಿದೆ. ನ್ಯೂ ಪ್ರಿನ್ಸ್​​ಗೆ ಪಟ್ಟ ಕಟ್ಟೋಕೆ ಬಿಸಿಸಿಐ ವಲಯದಲ್ಲಿ ಪ್ಲಾನ್​ ರೆಡಿಯಾಗಿದೆ.

ಭಾರತೀಯ ಕ್ರಿಕೆಟ್​ನಲ್ಲೀಗ ಬದಲಾವಣೆಯದ್ದೆ ಸುದ್ದಿ. ಸೀನಿಯರ್​ ಆಟಗಾರರಿಗೆ ಕೊಕ್​ ಕೊಡಬೇಕು. ಯುವ ಆಟಗಾರರಿಗೆ ಅವಕಾಶ ನೀಡಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ನಾಯಕತ್ವ ಬದಲಾವಣೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಆದ್ರೆ, ಬಿಸಿಸಿಐ ಬಾಸ್​​ಗಳು ಮಾತ್ರ, ಈ ವಿಚಾರದಲ್ಲಿ ಸೈಲೆಂಟ್​ ಆಗಿದ್ದಾರೆ. ಹಾಗಂತ ಸುಮ್ಮನೆ ಕುಳಿತ್ತಿಲ್ಲ. ಭವಿಷ್ಯಕ್ಕಾಗಿ ಪ್ಲಾನ್​ ರೂಪಿಸಿದ್ದಾರೆ.

ಸೈಲೆಂಟಾಗಿರೋ ಬಿಗ್​ಬಾಸ್​​ಗಳ ಮಾಸ್ಟರ್​ ಪ್ಲಾನ್​.!

ವಿಶ್ವಕಪ್​ಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹಾಗಾಗಿ ಸದ್ಯಕ್ಕಂತೂ ಟೀಮ್​ ಇಂಡಿಯಾ ನಾಯಕತ್ವ ಬದಲಾವಣೆಗೆ ಬಿಸಿಸಿಐ ಬಾಸ್​ಗಳು ಕೈ ಹಾಕಲ್ಲ. ಆದ್ರೆ, ವಿಶ್ವಕಪ್​ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಖಚಿತ. ಭವಿಷ್ಯದ ದೃಷ್ಟಿಯಿಂದ ಅದು ಅನಿವಾರ್ಯವೂ ಆಗಿದೆ. ಹೀಗಾಗಿ ಹಳೆ ಸೂತ್ರವೊಂದರ ಮೊರೆ ಹೋಗಿದ್ದಾರೆ. ಇದ್ರಿಂದ ಸಕ್ಸಸ್​ ಸಿಕ್ಕೇ ಸಿಗುತ್ತೆ ಅನ್ನೋದು ಬಾಸ್​ಗಳ ಲೆಕ್ಕಾಚಾರ.

ಹಳೆ ಫಾರ್ಮುಲಾ ಮೊರೆ ಹೋದ ಬಾಸ್​ಗಳು.!

ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿಯ ಬರ ಟೀಮ್​ ಇಂಡಿಯಾವನ್ನ ಕಾಡ್ತಿದೆ. ಧೋನಿ ಬಳಿಕ ಭಾರತಕ್ಕೆ ಟ್ರೋಫಿ ಗೆದ್ದು ಕೊಡುವರು ಇಲ್ಲದಂತಾಗಿದೆ. ಅಸಲಿಗೆ ಧೋನಿ ನಾಯಕನ ಪಟ್ಟ ಅಲಂಕರಿಸೋಕು ಮುನ್ನ ಈಗ ಹೇಗಿದಿಯೋ ಅಂತದ್ದೇ ಪರಿಸ್ಥಿತಿಯಿತ್ತು. 2007ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲುಂಡು ತವರಿಗೆ ವಾಪಾಸ್ಸಾಗಿತ್ತು. ಆ ಮುಖಭಂಗ ಇಡೀ ಭಾರತದಲ್ಲಿ ಆಕ್ರೋಶದ ಕಿಚ್ಚನ್ನ ಹಚ್ಚಿತ್ತು. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಬಿಸಿಸಿಐ ಒಂದು ಖಡಕ್​ ನಿರ್ಧಾರ ಕೈಗೊಳ್ತು. ಸೀನಿಯರ್​ಗಳನ್ನ ಸೈಡ್​​ಲೈನ್​ ಮಾಡಿ ಯಂಗ್​ಗನ್​ ಧೋನಿಗೆ ನಾಯಕನ ಪಟ್ಟ ಕಟ್ಟಿತ್ತು.

ಅಂದು ಘಟಾನುಘಟಿಗಳೇ ತಂಡದಲ್ಲಿದ್ರು. ಸಚಿನ್​ ತೆಂಡುಲ್ಕರ್, ವೀರೆಂದ್ರ ಸೆಹ್ವಾಗ್​, ಯುವರಾಜ್​ ಸಿಂಗ್​, ಅನಿಲ್​ ಕುಂಬ್ಳೆ, ಹರ್ಭಜನ್​ ಸಿಂಗ್​ ಹೀಗೆ ಅದಾಗಲೇ ಕ್ರಿಕೆಟ್​ ಲೋಕದಲ್ಲಿ ಸೂಪರ್​ ಸ್ಟಾರ್​ಗಳಾಗಿದ್ದ ಅನುಭವಿ ಆಟಗಾರರು ತಂಡದಲ್ಲಿದ್ರು. ಆದ್ರೆ, ಇದು ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ಧೋನಿಗೆ ಪಟ್ಟ ಕಟ್ಟಲಾಯಿತು. ಜವಾಬ್ದಾರಿ ಹೊತ್ತ ಧೋನಿ, ಟೀಮ್​ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದರು.

ಅಂದು ಧೋನಿ, ಇಂದು ಶುಭಮನ್​ ಸಾರಥಿ.?

ಧೋನಿ ಜವಾಬ್ದಾರಿ ಹೊತ್ತಾಗ ಏನಿತ್ತೋ ಅಂತದ್ದೇ ಸಂದರ್ಭ​ ಈಗ ಎದುರಾಗಿದೆ. ಸೀನಿಯರ್ಸ್​ಗಳನ್ನ ಸೈಡ್​ಲೈನ್​ ಮಾಡಿ ಯಂಗ್​ ಟೀಮ್​ ಕಟ್ಟೋ ಸವಾಲು ಬಿಸಿಸಿಐ ಮುಂದಿದೆ. ಹೀಗಾಗಿ ಮತ್ತೊಂದು ಬೋಲ್ಡ್​ ಡಿಸಿಷನ್​ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಸಿಸಿಐಯಿದೆ. ಅಂದು ಧೋನಿಗೆ ನೀಡಿದಂತೆ, ಈಗ ಯುವ ಕ್ರಿಕೆಟಿಗ ಶುಭಮನ್​ ಗಿಲ್​ಗೆ​ ತಂಡದ ಸಾರಥ್ಯ ನೀಡಲು ಪ್ಲಾನ್​ ಸಿದ್ಧಗೊಂಡಿದೆ.

ಟೀಮ್​ನ ಭವಿಷ್ಯದ ದೃಷ್ಟಿಯಿಂದ ಶುಭಮನ್​​ ಗಿಲ್​ಗೆ​ ಪಟ್ಟ ಕಟ್ಟೋದು ಬೆಸ್ಟ್​. ಯುವ ಕ್ರಿಕೆಟಿಗ ಈಗಾಗಲೇ 3 ಮಾದರಿಯಲ್ಲಿ ತನ್ನ ಖದರ್​ ತೋರಿಸಿದ್ದಾನೆ. ಕನ್ಸಿಸ್ಟೆಂಟ್​ ಬ್ಯಾಟಿಂಗ್​ ನೋಡಿ ಶುಭ್​ಮನ್, ಲೆಜೆಂಡ್​ ವಿರಾಟ್​ ಕೊಹ್ಲಿಯ ಉತ್ತರಾಧಿಕಾರಿ ಎಂದು ಫ್ಯಾನ್ಸ್​​ ಫಿಕ್ಸ್​​​​ ಆಗಿದ್ದಾರೆ. ತನ್ನ ಕ್ಲಾಸಿಕ್​ ಆಟದಿಂದ ಕಮಾಲ್​ ಮಾಡಿರೋ ಗಿಲ್​ ನಾಯಕತ್ವಕ್ಕೆ ಉತ್ತಮ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಟೆಸ್ಟ್​- ಏಕದಿನಕ್ಕೆ ಗಿಲ್​, ಟಿ20ಗೆ ಹಾರ್ದಿಕ್​.?

ಆಲ್​​ರೌಂಡರ್​ ಹಾರ್ದಿಕ್​​ ಪಾಂಡ್ಯ ಈಗಾಗಲೇ ಟಿ20 ತಂಡದ ಕ್ಯಾಪ್ಟನ್​ ಎಂದು ಬಿಂಬಿತವಾಗಿದ್ದಾರೆ. ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸ್ತಿದ್ದಾರೆ. ಹೀಗಾಗಿ ಹಾರ್ದಿಕ್​ರನ್ನ ಡಿಸ್ಟರ್ಬ್​ ಮಾಡೋದು ಅನುಮಾನ. ಹೀಗಾಗಿ ವಿಶ್ವಕಪ್​ ಬಳಿಕ ಟೆಸ್ಟ್​, ಏಕದಿನ ತಂಡದಿಂದ ರೋಹಿತ್​ರನ್ನ ಕೆಳಗಿಳಿಸಿ ಶುಭಮನ್​ಗೆ ಪಟ್ಟಾಭಿಷೇಕ ಮಾಡುವ ಪ್ಲಾನ್​ ಬಿಸಿಸಿಐದ್ದಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ ಅಲ್ಲ, ಆರ್​. ಅಶ್ವಿನ್​ ಅಲ್ಲ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಮತ್ಯಾರಿಗೆ? ಈ ಸ್ಟಾರ್​ ಆಟಗಾರನಿಗೆ ಸಿಗುತ್ತಾ ಚಾನ್ಸ್‌?

https://newsfirstlive.com/wp-content/uploads/2023/06/SHUBMAN_GILL_VIRAT.jpg

Load More