newsfirstkannada.com

VIDEO: ಎಲ್ಲಾ ಕ್ರಿಕೆಟರ್ಸ್​​ ಇಮಿಟೇಟ್ ಮಾಡೋದ್ರಲ್ಲಿ ವಿರಾಟ್ ನಂ.1​; ಕೊಹ್ಲಿ ಸ್ಪೆಷಲ್ ಟ್ಯಾಲೆಂಟ್ ಇಲ್ಲಿದೆ ನೋಡಿ

Share :

04-07-2023

    ಶಿಖರ್​ ಧವನ್​ರಂತೆ ಬ್ಯಾಟಿಂಗ್ ಮಾಡುತ್ತಾರೆ ವಿರಾಟ್ ಕೊಹ್ಲಿ

    ಮೈದಾನದಲ್ಲೇ ಹರ್ಭಜನ್​ ಸಿಂಗ್​ ಬೌಲಿಂಗ್​ ಆ್ಯಕ್ಷನ್​​ ತೋರಿಸಿದ್ರು

    ವಿಶ್ವದ ಯಾವ ಆಟಗಾರರನ್ನು ಕ್ಷಣಾರ್ಧದಲ್ಲಿ ಇಮಿಟೇಟ್ ಮಾಡ್ತಾರೆ

ಬಹುಶಃ ವಿರಾಟ್ ಕೊಹ್ಲಿ ಕ್ರಿಕೆಟರ್ ಆಗದೇ ಹೋಗಿದ್ದರೆ ಏನು ಆಗಿರುತ್ತಿದ್ದರು? ಡೆಫಿನೆಟ್ಲಿ ಅವರೊಬ್ಬ ಆ್ಯಕ್ಟರ್ ಆಗಿರುತ್ತಿದ್ದರು. ಅದ್ರಲ್ಲಿ ಎರಡು ಮಾತೇ ಇಲ್ಲ. ನಾವ್ಯಾಕೆ ಇಷ್ಟೊಂದು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀವಿ ಅಂತೀರಾ? ಕೊಹ್ಲಿ ಓರ್ವ ದಾಖಲೆಗಳ ದಮನಕಾರ, ಸೆಂಚುರಿ ಸರದಾರ ಮಾತ್ರವಲ್ಲ. ಮಲ್ಟಿ ಟ್ಯಾಲೆಂಡೆಡ್ ಪರ್ಸನ್​​​. ಸೂಪರ್ ಸ್ಟಾರ್ ಆಟಗಾರನೊಳಗೊಬ್ಬ ಅದ್ಭುತ ಕಲಾವಿದನಿದ್ದಾನೆ. ಇಮಿಟೇಟ್ ವಿಚಾರಕ್ಕೆ ಬಂದ ವಿರಾಟ್, ಆಫ್​ ದಿ ಫೀಲ್ಡ್​​ ಟ್ಯಾಲೆಂಟ್​​ ಏನು ಅನ್ನೋದು ಗೊತ್ತಾಗುತ್ತೆ. ಇತರೆ ಕ್ರಿಕೆಟಿಗರನ್ನ ಅನುಕರಣೆ ಮಾಡೋದ್ರಲ್ಲಿ ಕಿಂಗ್ ಕೊಹ್ಲಿಯನ್ನ ಮೀರಿಸುವ ಮತ್ತೊಬ್ಬ ಕ್ರಿಕೆಟರ್ ಇಲ್ಲ.

ಕೊಹ್ಲಿ ಈ ಪರಿ ಇಮಿಟೇಟ್ ಮಾಡಬಲ್ಲರು ಅಂತಾ ಯಾರು ಊಹಿಸೋಕು ಸಾಧ್ಯವಿಲ್ಲ. ಹಾಗಾದ್ರೆ ಮಾಡ್ರನ್ ಕ್ರಿಕೆಟ್ ದೊರೆ ಯಾವೆಲ್ಲ ಆಟಗಾರರನ್ನ ಹೇಗೆಲ್ಲಾ ಅನುಕರಣೆ ಮಾಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಷ್ಯ ಇಲ್ಲಿದೆ.

ಇಮಿಟೇಟ್ ನಂ.1: ಹರ್ಭಜನ್ ಸಿಂಗ್

ದೂಸ್ರಾ.. ಈ ಹೆಸರು ಕೇಳಿದಾಕ್ಷಣ ಹರ್ಭಜನ್ ಸಿಂಗ್ ನೆನಪಾಗ್ತಾರೆ. ಭಜ್ಜಿಯ ಯುನಿಕ್​ ಬೌಲಿಂಗ್​ ಶೈಲಿ ಕಣ್ಣೆದುರಿಗೆ ಬರುತ್ತೆ. ಆ ಬೌಲಿಂಗ್​ ಸ್ಟೈಲ್​ ಕಾಪಿ ಮಾಡೋದು ಸುಲಭವಲ್ಲ. ಭಜ್ಜಿಯ ಬೌಲಿಂಗ್​ ಸ್ಟೈಲ್​​​ಗೆ ಫಿದಾ ಆಗಿದ್ದ ಕೊಹ್ಲಿ, ಥೇಟ್​​​ ಅವರಂತೆ ಬೌಲಿಂಗ್​​​ ಅನುಕರಣೆ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಇದನ್ನ ಕಂಡ ಭಜ್ಜಿ ಕೂಡ ನಗೆಗಡಲಲ್ಲಿ ತೇಲಿದ್ರು.

ಇಮಿಟೇಟ್ ನಂ.2 : ಜಸ್ಟ್​ಪ್ರೀತ್​​ ಬುಮ್ರಾ

ಇನ್ನು ಮಾಜಿ ಅಷ್ಟೇ ಅಲ್ಲ, ಹಾಲಿ ತಂಡದ ಸಹ ಆಟಗಾರರನ್ನ ಅನುಕರಣೆ ಮಾಡೋದಲ್ಲೂ ಕೊಹ್ಲಿ ಎತ್ತಿದ ಕೈ. ಟೆಸ್ಟ್​​​​ ಪಂದ್ಯವೊಂದರ ವೇಳೆ ಸ್ಟಾರ್​​​ ವೇಗಿ ಜಸ್​ಪ್ರಿತ್ ಬುಮ್ರಾ ಹೇಗೆ ಬೌಲಿಂಗ್​​​​​ ಮಾಡ್ತಾರೆ ಅನ್ನೋದನ್ನ ಆಟಗಾರರಿಗೆ ಕೊಹ್ಲಿ ತೋರಿಸಿದ್ರು.

ಇಮಿಟೇಟ್ ನಂ.3: ಇಶಾಂತ್ ಶರ್ಮಾ & ಯುವಿ

ಕಪಿಲ್​ ಶರ್ಮಾ ಜೊತೆಗಿನ ಕಾಮಿಡಿ ಶೋನಲ್ಲಿ ಕೊಹ್ಲಿ, ಇಶಾಂತ್ ಶರ್ಮಾ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್​​​ರ ಇಮಿಟೇಟ್ ಮಾಡಿದ್ದರು. ಇದನ್ನ ನೋಡಿದ ಜಡ್ಜಸ್​​ ನಕ್ಕು ನಕ್ಕು ಸುಸ್ತಾಗಿದ್ದರು.

ಇಮಿಟೇಟ್ ನಂ.4: ಶಿಖರ್ ಧವನ್

ಶಿಖರ್​ ಧವನ್​​​​​​​​​​​ ರನ್​​​​​​​​​ ಶಿಖರ್​ ಕಟ್ಟೋದ್ರ ಜೊತೆ ಫನ್ ಮಾಡೋದ್ರಲ್ಲೂ ಸದಾ ಮುಂದು. ಅಂತಾ ಧವನ್​ರನ್ನ ಒಮ್ಮೆ ಕೊಹ್ಲಿ ಅನುಕರಿಸಿದರು. ಧವನ್ ಹೇಗೆ ಬ್ಯಾಟಿಂಗ್ ಮಾಡ್ತಾರೆ ಅನ್ನೋದನ್ನ ಇಮಿಟೇಟ್ ಮಾಡಿದ್ದರು.

ಇಮಿಟೇಟ್ ನಂ.5: ಫಾಫ್​​ ಡುಪ್ಲೆಸಿ

2023ರ ಐಪಿಎಲ್​​ನಲ್ಲಿ ಕಿಂಗ್ ಕೊಹ್ಲಿ , ಆರ್​​ಸಿಬಿ ಕ್ಯಾಪ್ಟನ್​​ ಫಾಫ್ ಡುಪ್ಲೆಸಿಸ್​​​ ಅವರ ಬ್ಯಾಟಿಂಗ್ ಅನ್ನ ಪರ್ಫೆಕ್ಟ್ ಆಗಿ ಕಾಪಿ ಮಾಡಿದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇಮಿಟೇಟ್ ನಂ.6: ರೋಹಿತ್ ಶರ್ಮಾ

ರೋಹಿತ್ ಶರ್ಮಾ ಫುಲ್​ ಶಾಟ್​​​​ ಹೊಡೆಯೋದ್ರಲ್ಲಿ ಪಂಟರ್​​​. ಹಿಟ್​ಮ್ಯಾನ್​​​ರ ಈ ಸಿಗ್ನೇಚರ್​ ಶಾಟನ್ನ ಅನುಕರಣೆ ಮಾಡಿ ಕೊಹ್ಲಿ ಸೈ ಅನ್ನಿಸಿಕೊಂಡಿದ್ರು.

ಇವನ್ನೆಲ್ಲ ನೋಡಿದ್ಮೇಲೆ ಒಂದು ಅಂತೂ ಅರ್ಥ ಆಗುತ್ತೆ. ಕಿಂಗ್ ಕೊಹ್ಲಿ ಬ್ಯಾಟ್ ಹಿಡಿದು ಅಬ್ಬರಿಸೋಕು ಸೈ, ಮಿಮಿಕ್ರಿ ಮಾಡಿ ಅಭಿಮಾನಿಗಳನ್ನ ರಂಜಿಸೋ ಸೈ ಅನ್ನೋದು.. ಇಷ್ಟಾದ ಮೇಲೆ ಕ್ರಿಕೆಟ್ ಕಾ ಸುಲ್ತಾನ್​​​​ ಕೊಹ್ಲಿ ಟ್ಯಾಲೆಂಟೆಡ್​ ಆ್ಯಕ್ಟರ್​ ಕೂಡ ಹೌದು​ ಅನ್ನದೇ ಇರೋಕಾಗುತ್ತಾ.?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಎಲ್ಲಾ ಕ್ರಿಕೆಟರ್ಸ್​​ ಇಮಿಟೇಟ್ ಮಾಡೋದ್ರಲ್ಲಿ ವಿರಾಟ್ ನಂ.1​; ಕೊಹ್ಲಿ ಸ್ಪೆಷಲ್ ಟ್ಯಾಲೆಂಟ್ ಇಲ್ಲಿದೆ ನೋಡಿ

https://newsfirstlive.com/wp-content/uploads/2023/07/VIRAT_KOHLI_IMITAION.jpg

Load More