ಏಷ್ಯನ್ ಗೇಮ್ಸ್ ಟೂರ್ನಿ ಮುನ್ನಡೆಸುತ್ತಾರಾ ಕನ್ನಡಿಗ?
ಪ್ರ್ಯಾಕ್ಟೀಸ್ ಶುರು ಮಾಡಿದ ಕೆ.ಎಲ್.ರಾಹುಲ್
ರಾಹುಲ್ ಶೇ.100 ರಷ್ಟು ಫಿಟ್ ಎಂದಿರುವ NCA
ಏಷ್ಯನ್ ಗೇಮ್ಸ್ ಸಮೀಪಿಸಿದ ಹೊತ್ತಿನಲ್ಲೇ ಭಾರತ ತಂಡಕ್ಕೆ ಶುಭ ಸುದ್ದಿ ಕೇಳಿ ಬಂದಿದೆ. ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ನೆಟ್ಸ್ನಲ್ಲಿ ಕೀಪಿಂಗ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಗೆ ಮರಳಲು ತಯಾರಿ ನಡೆಸಿದ್ದಾರೆ. ಬ್ಯಾಟಿಂಗ್ ಜೊತೆ ಕೀಪಿಂಗ್ ಸಹ ನಡೆಸ್ತಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಮುಂದಿನ ವಾರಗಳಲ್ಲಿ ಕೆ.ಎಲ್.ರಾಹುಲ್ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡೋದು ಸ್ಪಷ್ಟವಾಗಿ ಗೊತ್ತಾಗಲಿದೆ. ಬೆಂಗಳೂರಲ್ಲಿ ಬ್ಯಾಟರ್ಸ್ಗಳಿಗಾಗಿ ಪ್ರ್ಯಾಕ್ಟೀಸ್ ಮ್ಯಾಚ್ ಆಯೋಜನೆಗೊಳ್ಳಲಿದೆ. ಇಲ್ಲಿ ಕೆಎಲ್ ರಾಹುಲ್ ಕೂಡ ಬ್ಯಾಟ್ ಬೀಸಲಿದ್ದಾರೆ.
ಸದ್ಯ ರಾಹುಲ್ ಶೇಕಡಾ 100 ರಷ್ಟು ಫಿಟ್ ಆಗಿದ್ದಾರೆ. ಈ ಬಗ್ಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯೇ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದೆ. ಇನ್ನೊಂದು ವಿಚಾರ ಏನೆಂದರೆ ಕೆ.ಎಲ್.ರಾಹುಲ್, ಏಷ್ಯನ್ ಗೇಮ್ಸ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಫಿಟ್ ಆಗಿರುವ ಹಿನ್ನೆಲೆಯಲ್ಲಿ ಗಾಯಕ್ವಾಡ್ ನೇತೃತ್ವದಲ್ಲಿ ಏಷ್ಯಾ ಕಪ್ ಟೀಂನಲ್ಲಿ ಕೊಂಚ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ. ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್