M.S ಧೋನಿ ದತ್ತು ಪಡೆದುಕೊಂಡಿದ್ದ ಹುಲಿಯ ಹೆಸರು ಏನು..?
ಮೈಸೂರಿನಲ್ಲಿ 390 ಪ್ರಾಣಿಗಳನ್ನ ದತ್ತು ಪಡೆದುಕೊಂಡಿದ್ದ ಜನ
ಉತ್ತಪ್ಪ ಮನೆಯಿಂದ ನಾಯಿಮರಿ ಹೊಯ್ದಿದ್ದ MS ಧೋನಿ
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟರ್ ಅನ್ನೋದು ಗೊತ್ತೇ ಇದೆ. ಕ್ರಿಕೆಟರ್ ಹೊರತಾಗಿ ಧೋನಿ ಒಬ್ಬ ಪ್ರಾಣಿ ಪ್ರಿಯ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ವನ್ಯಜೀವಿ ಸಂರಕ್ಷಣೆಯಲ್ಲಿ ಧೋನಿಗೂ ಕರ್ನಾಟಕ್ಕೂ ಅವಿನಾಭಾವ ಸಂಬಂಧವು ಇದೆ. ಅದೇನಪ್ಪಾ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿರುವ ಧೋನಿ, ರಾಂಚಿಯ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ನೆಚ್ಚಿನ ಶ್ವಾನಗಳ ಜೊತೆ ಆಟವಾಡುತ್ತಾ ದಿನ ಕಳೆಯುತ್ತಿದ್ದಾರೆ. ಆದ್ರೆ ಈ ಶ್ವಾನ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ್ಕೂ ಧೋನಿಗೂ ಅವಿಭಾವ ಸಂಬಂಧ ಇದೆ.
ಹೌದು! 2009ರಲ್ಲಿ ಮಹೇಂದ್ರ ಸಿಂಗ್ ಧೋನಿ, ಕೊಡಗಿನ ಸುಂಟಿಕೊಪ್ಪದಲ್ಲಿದ್ದ ರಾಬಿನ್ ಉತ್ತಪ್ಪ ಮನೆಗೆ ಆಗಮಿಸಿದ್ದರು. 2 ದಿನಗಳ ಕಾಲ ರಾಬಿನ್ ಉತ್ತಪ್ಪ ಅವರ ಎಸ್ಟೇಟ್ನಲ್ಲೇ ಕಾಲ ಕಳೆದಿದ್ದ ಶ್ವಾನ ಪ್ರೇಮಿ ಮಾಹಿ ಹಿಂತಿರುಗುವಾಗ ನಾಯಿ ಮರಿಯೊಂದರನ್ನ ಮನೆಗೆ ಕೊಂಡೊಯ್ದಿದ್ದರು.
ಇನ್ನು 2011ರಲ್ಲಿ ಇದೇ ಧೋನಿ ಹುಲಿ ಸಂರಕ್ಷಣಾ ರಾಯಭಾರಿಯಾದರು. ಆಗ ಮೈಸೂರಿನ ಮೃಗಾಲಯದಲ್ಲಿದ್ದ ಹುಲಿ ಮರಿಯನ್ನ ದತ್ತು ಪಡೆದುಕೊಂಡಿದ್ದರು. 1 ವರ್ಷದ ಅವಧಿಗೆ 1 ಲಕ್ಷ ರೂಪಾಯಿ ನೀಡಿ ದತ್ತು ಪಡೆದುಕೊಂಡಿದ್ದ ಆ ಹುಲಿ ಮರಿಯ ಹೆಸರು ಅಗಸ್ತ್ಯ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ದತ್ತು ಪಡೆದುಕೊಂಡ ಬಳಿಕ ಮೈಸೂರು ಮೃಗಾಲಯಕ್ಕೆ ಬರೋಬ್ಬರಿ 31 ಲಕ್ಷ ರೂಪಾಯಿ ಹರಿದು ಬಂದಿದ್ದಲ್ಲದೇ 390 ಪ್ರಾಣಿಗಳನ್ನ ಜನರು ದತ್ತು ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ