ಸರಳತೆಯ ಮಹಿಳೆ ಟ್ರೋಲ್ ಆಗುತ್ತಿರೋದ್ಯಾಕೆ?
ಸುಧಾ ಮೂರ್ತಿ ಹೇಳಿಕೆಯೇ ಇದೆಕ್ಕೆಲ್ಲಾ ಕಾರಣವೇ?
ಖಾನ ಮೈ ಕ್ಯಾ ಹೈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಧಾ ಮೂರ್ತಿ
ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅರ್ಧಾಂಗಿ ಸುಧಾ ಮೂರ್ತಿ ಬಗ್ಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ಸಾಫ್ಟ್ವೇರ್ ಕಂಪೆನಿ ಸ್ಥಾಪಿಸಿದಾತನ ಮಡದಿಯಾದರು ಅವರ ಸಿಂಪ್ಲಿಸಿಟಿ ಹಾಗೂ ಅವರ ಮಾತಿಗೆ ಎಲ್ಲರೂ ತಲೆಬಾಗಿದವರೇ ಹೆಚ್ಚು. ಆದರೀಗ ಇದ್ದಕ್ಕಿದ್ದಂತೆಯೇ ಸುಧಾ ಮೂರ್ತಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅದು ಕೂಡ ಆಹಾರದ ವಿಚಾರಕ್ಕೆ ಎಂದರೆ ನಂಬುತ್ತೀರಾ?
ಹೌದು. ಸುಧಾ ಮೂರ್ತಿ ಇತ್ತೀಚೆಗೆ ‘ಖಾನ ಮೈ ಕ್ಯಾ ಹೈ’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕುನಾಲ್ ವಿಜಯಾಕರ್ ಈ ಕಾರ್ಯಕ್ರವನ್ನು ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಸುಧಾ ಮೂರ್ತಿ, ‘ನಾನು ಪೂರ್ಣ ಸಸ್ಯಹಾರಿ. ಮೊಟ್ಟೆ ಮತ್ತು ಬೆಳ್ಳುಳ್ಳಿಯನ್ನು ಸಹ ತಿನ್ನುವುದಿಲ್ಲ. ವಿದೇಶಕ್ಕೆ ಹೋದಾಗ ಆಹಾರವನ್ನು ಕೊಂಡೊಯ್ಯುತ್ತೇನೆ. ತನಗೆ ಬೇಕಾದಷ್ಟು ಒಯ್ಯುತ್ತೇನೆ. ಜೊತೆಗೆ ಸ್ಫೂನ್ ಕೂಡ ಇರುತ್ತದೆ’ ಎಂದು ಹೇಳಿದ್ದರು. ಆದರೀಗ ಇದೇ ವಿಚಾರವನ್ನಿಟ್ಟುಕೊಂಡು ಟ್ರೋಲಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಟ್ರೋಲ್ ಆದ್ರು ಸುಧಾ ಮೂರ್ತಿ
ಅದರಲ್ಲೊಬ್ಬ ವ್ಯಕ್ತಿ ‘ಸುಧಾ ಮೂರ್ತಿಯವರ ಸರಳತೆ ನಿಜಕ್ಕೂ ಬೇಸರ ತರಿಸಿದೆ ಎಂದು ಬರೆದರೆ’. ಮತ್ತೊಬ್ಬ ‘ಸುಧಾ ಮೂರ್ತಿ ವಿದೇಶಿ ಪ್ರವಾಸ ಮಾಡುವಾಗ ತನ್ನ ಮನೆಯನ್ನೇ ಕೊಂಡೊಯ್ಯುತ್ತಾಳೆ, ಇನ್ನು ಬೇರೆಯವರು ಬಳಸಿದ ಹೊಟೇಲ್ ಕೋಣೆ?’ ಎಂದು ಬರೆದಿದ್ದಾರೆ. ಮಗದೊಬ್ಬ ‘ಸುಧಾಮೂರ್ತಿ ವಿಮಾನದಲ್ಲಿ ತನ್ನದೇ ಆದ ಕುರ್ಚಿಯನ್ನು ತೆಗೆದುಕೊಂಡು ಹೋಗುತ್ತಾರೆ’ ಎಂದು ಕಾಮೆಂಟ್ ಬರೆದಿದ್ದಾನೆ.
ಇದರ ಜೊತೆಗೆ ಟ್ರೋಲಿಗರು ಬ್ರಿಟನ್ ಅಧ್ಯಕರು ಮತ್ತು ಅವರ ಅಳಿಯ ರಿಷಿ ಸುನಕ್ ನಾನ್ ವೆಜ್ ಹಿಡಿದುಕೊಂಡಿರುವ ಫೋಟೋವನ್ನು ಟ್ರೋಲಿಗನೊಬ್ಬ ಹಂಚಿಕೊಂಡಿದ್ದಾನೆ. ಅದರ ಜೊತೆಗೆ ‘ನೀವು ನಿಮ್ಮ ತಾಯಿಗೆ ಪ್ರತ್ಯೇಕ ಆಹಾರ ಮಾಡುತ್ತೀರಾ? ನಿಮ್ಮ ಮಕ್ಕಳನ್ನು ಅಜ್ಜಿ ಮುಟ್ಟುದಿಲ್ಲವೇ?’ ಎಂದು ಪ್ರಶ್ನೆ ಹಾಕುವ ಮೂಲಕ ಟ್ರೋಲ್ ಮಾಡಿದ್ದಾನೆ.
Someone tell Sudha Murthy not to touch her son-in-law, daughter and their kids. pic.twitter.com/rIdqOnIeL5
— Grouchy Maxx (@softgrowl) July 25, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ