/newsfirstlive-kannada/media/post_attachments/wp-content/uploads/2024/12/Rohit-sharma-1.jpg)
ಇಂಡೋ-ಆಸಿಸ್​ ಟೆಸ್ಟ್​ ಬ್ಯಾಟಲ್ ಕಾವು ಜೋರಾಗ್ತಿದೆ. ಪ್ರತೀಕಾರದ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕು ಅನ್ನೋ ಮಹಾದಾಸೆ ಅಭಿಮಾನಿಗಳದ್ದಾಗಿದೆ. ಈ ಟೆಸ್ಟ್​ ಗೆಲ್ಲಬೇಕಂದ್ರೆ ಕ್ಯಾಪ್ಟನ್​​ ರೋಹಿತ್ ಶರ್ಮಾನೇ ತಂಡದಲ್ಲಿ ಇರಬಾರದು ಅಂತಿದ್ದಾರೆ ಫ್ಯಾನ್ಸ್.
ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ವೈಫಲ್ಯ
ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್, ಅಡಿಲೇಡ್​ನ ಪಿಂಕ್ ಬಾಲ್​ ಟೆಸ್ಟ್​ಗೆ ಸಜ್ಜಾಗ್ತಿದ್ದಾರೆ. ಈ ಅಡಿಲೇಡ್ ಟೆಸ್ಟ್​ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಫೇಲಾಗಿದ್ದಾರೆ. 11 ಎಸೆತಗಳನ್ನ ಎದುರಿಸಿದ ಕ್ಯಾಪ್ಟನ್ ರೋಹಿತ್, ಕೇವಲ 3 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಇದೇ ಈಗ ರೋಹಿತ್​​​​​​ ಶರ್ಮಾ, ಅಡಿಲೇಡ್​ ಟೆಸ್ಟ್​ನಲ್ಲಿ ಆಡಬೇಕಾ..? ಬೇಡ್ವಾ.? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ರೋಹಿತ್ ಶರ್ಮಾ ಕಾಲೆಳೆದ ಅಭಿಮಾನಿಗಳು
ಅಭ್ಯಾಸ ಪಂದ್ಯದಲ್ಲಿ ರೋಹಿತ್, ವಿಫಲವಾದ ಬೆನ್ನಲ್ಲೇ ಫ್ಯಾನ್ಸ್ ಕೆಂಡ ಕಾರುತ್ತಿದ್ದಾರೆ. ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತ, ಮುಂದಿನ ಟೆಸ್ಟ್​ ಪಂದ್ಯದಲ್ಲಿ ಅವಕಾಶಕ್ಕೆ ರೋಹಿತ್ ಶರ್ಮಾ, ಅರ್ಹರಲ್ಲ ಎಂದಿದ್ದಾರೆ. ಜೊತೆಗೆ ಟೀಮ್ ಮ್ಯಾನೇಜ್​ಮೆಂಟ್​ ವಿನ್ನಿಂಗ್ ಕಾಂಬಿನೇಷನ್ ಬದಲಿಸುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.
ಬೌಲರ್ಸ್​ ಪಾಲಿಗೆ ರೋಹಿತ್​ ಸುಲಭದ ತುತ್ತು
ರೋಹಿತ್ ಶರ್ಮಾರನ್ನು ನಿಸ್ವಾರ್ಥಿ ಅಂತಾನೇ ಕರೀತಿದ್ದ ಫ್ಯಾನ್ಸ್​ ಈಗ ತಂಡಕ್ಕಿಂತ ಹೆಚ್ಚಾಗಿ ಎದುರಾಳಿ ಬೌಲರ್​​ಗಳಿಗೆ ವಿಕೆಟ್​ ಒಪ್ಪಿಸೋ ವಿಚಾರದಲ್ಲಿ ನಿಸ್ವಾರ್ಥಿ ಅನಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ವಿರಾಟ್​ ಕೊಹ್ಲಿ ಯುವ ಆಟಗಾರರಿಗೆ ಅಭ್ಯಾಸ ಪಂದ್ಯವನ್ನಾಡುವ ಅವಕಾಶ ನೀಡಿದ್ರೆ, ರೋಹಿತ್ ಶರ್ಮಾ ಯುವ ಆಟಗಾರರ ಬದಲಿಗೆ ತಮ್ಮ ಸೆಫ್ಟಿಗೆ ಒತ್ತು ನೀಡಿದ್ದಾರೆ ಎಂದೇ ಕಿಡಿ ಕಾರಿದ್ದಾರೆ.
ಇದನ್ನೂ ಓದಿ:ಅಂದು ಹೀನಾಯ ಸೋಲು, ಅವಮಾನ.. ಉತ್ತರ ಕೊಡುವ ಸಮಯ ರೋಹಿತ್​​ಗೆ ಬಂದಿದೆ..!
ಓಪನಿಂಗ್ ಬೇಡ.. ರೋಹಿತ್​​ಗೆ ಇನ್ಯಾವ ಸ್ಲಾಟ್​?
ವಿನ್ನಿಂಗ್ ಕಾಂಬಿನೇಷನ್​ ಬದಲಿಸುವುದು ಬೇಡ ಅಂತಿರುವ ಫ್ಯಾನ್ಸ್​, ಆರಂಭಿಕರಾಗಿ ಜೈಸ್ವಾಲ್, ಕೆ.ಎ.ಲ್.ರಾಹುಲ್ ಕಣಕ್ಕಿಳಿಯಲಿ ಎಂದು ಒತ್ತಾಯಿಸ್ತಿದ್ದಾರೆ. ರೋಹಿತ್​​ ತಂಡದಿಂದಲೇ ಹೊರಗಿರಲಿ ಅನ್ನೋ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಒಂದು ವೇಳೆ ಆಡೋದಾದ್ರೆ, ರೋಹಿತ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ ಅಂತಿದ್ದಾರೆ ಫ್ಯಾನ್ಸ್​. ಈ ಸ್ಲಾಟ್​ನಲ್ಲಿ ಆಡಿದ್ರೆ ರೋಹಿತ್​ ನ್ಯಾಯವನ್ನು ಒದಗಿಸಬಲ್ಲರು.
ವಿವಿಧ ಸ್ಲಾಟ್​ನಲ್ಲಿ ರೋಹಿತ್ ಸಾಧನೆ
ಓಪನರ್ ಆಗಿ ರೋಹಿತ್ 44ರ ಬ್ಯಾಟಿಂಗ್ ಅವರೇಜ್​ನಲ್ಲಿ 2685 ರನ್ ಗಳಿಸಿದ್ದಾರೆ. ನಂಬರ್​ 3 ಸ್ಲಾಟ್​ನಲ್ಲಿ 107 ರನ್ ಗಳಿಸಿರುವ ರೋಹಿತ್, 21.4ರ ಬ್ಯಾಟಿಂಗ್ ಅವರೇಜ್ ಹೊಂದಿದ್ದಾರೆ. ನಂಬರ್​ 4ರಲ್ಲಿ ಕೇವಲ 4 ರನ್ ಗಳಿಸಿರುವ ರೋಹಿತ್, 5ನೇ ಕ್ರಮಾಂಕದಲ್ಲಿ 29.1ರ ಬ್ಯಾಟಿಂಗ್ ಅವರೇಜ್​ನಲ್ಲಿ 432 ರನ್ ಗಳಿಸಿದ್ದಾರೆ. ನಂಬರ್​ 6ರಲ್ಲಿ 54.5ರ ಬ್ಯಾಟಿಂಗ್ ಅವರೇಜ್​ನಲ್ಲಿ 1037 ರನ್ ಗಳಿಸಿ ಉತ್ತಮ ರೆಕಾರ್ಡ್​ ಹೊಂದಿದ್ದಾರೆ.
ನಾಯಕ ರೋಹಿತ್ ಶರ್ಮಾ ಕಮ್​ಬ್ಯಾಕ್ ತಂಡಕ್ಕೆ ನೂರಾನೆಯ ಬಲ ತುಂಬಬೇಕಿತ್ತು. ಅಭ್ಯಾಸ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ ರೀತಿ ನೋಡಿದ್ರೆ ತಂಡದಿಂದ ಹೊರಗಿರುವುದೆ ಉತ್ತಮ ಡಿಸಿಷನ್ ಅನ್ನೋದು ಹಲವರ ಮಾತಾಗಿದೆ. ಈ ಹಿಂದಿನ ನ್ಯೂಜಿಲೆಂಡ್ ಸಿರೀಸ್​ನಲ್ಲೂ ರೋಹಿತ್ ಫ್ಲಾಪ್​ ಆಗಿದ್ರು. ಅಂತಿಮವಾಗಿ ಟೀಮ್ ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us