ವಿಶ್ವಕಪ್ ಫೈನಲ್ ಪಂದ್ಯಕ್ಕೆ ನಮೋ ಮೈದಾನ ಸಜ್ಜು
ವಿಶ್ವಕಪ್ ಗೆಲ್ಲಲು ವಿಶ್ವದ 2 ಬಲಿಷ್ಟ ತಂಡಗಳ ಕಾದಾಟ
ಟೀಮ್ ಇಂಡಿಯಾ ಗೆಲ್ಲೋಕೆ ಇರೋ ಚಾನ್ಸ್ ಏನು..?
ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾಯ್ತಿದ್ದ ಟೈಮ್ ಬಂದೇ ಬಿಡ್ತು. ರಣರೋಚಕ ವಿಶ್ವಕಪ್ ಫೈನಲ್ ಪಂದ್ಯದ ಕ್ಲೈಮ್ಯಾಕ್ಸ್ಗೆ ಕ್ಷಣಗಣನೆ ಶುರುವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಫೈಟ್ಗೆ ಹೇಗೆ ಸಿದ್ಧತೆ ನಡೆಸಿಕೊಂಡಿದೆ.
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಗ್ರೌಂಡ್ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವಕಪ್ ಫೈನಲ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಈ ಪಂದ್ಯ ಭಾರತ-ಆಸ್ಟ್ರೇಲಿಯಾ ತಂಡಗಳಿಗೆ ಮಾತ್ರ ಪ್ರತಿಷ್ಟೆಯ ಪಂದ್ಯವಲ್ಲ. ಉಭಯ ತಂಡಗಳ ಸೂಪರ್ಸ್ಟಾರ್ ಆಟಗಾರರಿಗೆ, ಡು ಆರ್ ಡೈ ಪಂದ್ಯವಾಗಿದೆ. ಹಾಗಾಗೇ ಈ ಪಂದ್ಯ ಜಿದ್ದಾಜಿದ್ದಿ ಪಡೆದುಕೊಂಡಿದೆ. ಇನ್ನಿಲ್ಲದ ನಿರೀಕ್ಷೆ ಹುಟ್ಟಿಕೊಂಡಿದೆ.
ಅಹ್ಮದಾಬಾದ್ನಲ್ಲಿ ಕೊಹ್ಲಿಯಿಂದ ಶತಕ ನಿರೀಕ್ಷೆ..!
ವಿಶ್ವಕಪ್ನಲ್ಲಿ ರನ್ ಬೇಟೆಯಾಡ್ತಿರುವ ಕಿಂಗ್ ಕೊಹ್ಲಿ ಮೇಲೆ, ಎಕ್ಸ್ಪೆಕ್ಟೇಶನ್ ಹೆಚ್ಚಾಗಿದೆ. ಈಗಾಗಲೇ ಮೆಗಾ ಟೂರ್ನಿಯಲ್ಲಿ 3 ಶತಕಗಳನ್ನ ಸಿಡಿಸಿರುವ ವಿರಾಟ್, ಫೈನಲ್ನಲ್ಲೂ ಶತಕ ಸಿಡಿಸ್ತಾರೆ ಅನ್ನೋದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ತಂಡಕ್ಕೆ ಶಕ್ತಿ ತುಂಬ್ತಾರಾ ಗೇಮ್ ಚೇಂಜರ್ಸ್..?
ನಾಯಕ ರೋಹಿತ್ ಶರ್ಮಾ, ಈ ವಿಶ್ವಕಪ್ನಲ್ಲಿ ತಂಡದ ಗೇಮ್ಚೇಂಜರ್. ಆರಂಭದಲ್ಲೇ ಅಗ್ರೆಸಿವ್ ಬ್ಯಾಟಿಂಗ್ ನಡೆಸೋ ರೋಹಿತ್, ಪವರ್ಪ್ಲೇನಲ್ಲಿ ತಂಡಕ್ಕೆ ಪವರ್ ತುಂಬ್ತಿದ್ದಾರೆ. ಮಿಡಲ್ ಆರ್ಡರ್ನಲ್ಲಿ ರಾಹುಲ್ ಮತ್ತು ಶ್ರೇಯಸ್ ತಂಡಕ್ಕೆ ಶಕ್ತಿ ತುಂಬಿದ್ರೆ ಫೈನಲ್ ಪಂದ್ಯ ಗೆಲ್ಲೋದ್ರಲ್ಲಿ ಅನುಮಾನವೇ ಬೇಡ.
ಶಮಿ, ಕುಲ್ದೀಪ್, ಜಡೇಜಾ ಮ್ಯಾಚ್ ವಿನ್ನರ್ಸ್ ಆಗ್ತಾರಾ?
ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್ ಸೂಪರ್ಬ್ ಆಗಿದೆ. ಅದ್ರಲ್ಲೂ ವೇಗಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ, ತಂಡಕ್ಕೆ ರೈಟ್ ಟೈಮ್ನಲ್ಲಿ ಬ್ರೇಕ್ ಕೊಟ್ರೆ, ತಂಡಕ್ಕೆ ಮುನ್ನಡೆ ಅಗೋದ್ರಲ್ಲಿ ಡೌಟೇ ಬೇಡ.
ಆಸ್ಟ್ರೇಲಿಯಾ ತಂಡಕ್ಕೆ ಫೈವ್ ಸ್ಟಾರ್ ಬಲ..!
ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಮಿಚೆಲ್ ಸ್ಟಾರ್ಕ್, ಌಡಂ ಝಾಂಪ, ಆಸ್ಟ್ರೇಲಿಯಾ ತಂಡದ ಫೈವ್ ಸ್ಟಾರ್ ಮ್ಯಾಚ್ವಿನ್ನರ್ಸ್. ಈ 5 ಮಂದಿ ಆಟಗಾರರ ವಿರುದ್ಧ ಪಕ್ಕಾ ಪ್ಲಾನ್ ಮಾಡಿದ್ರೆ, ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕೋದ್ರಲ್ಲಿ ಅನುಮಾನವೇ ಇಲ್ಲ.
ಬಿಗ್ ಮ್ಯಾಚ್ ವಿನ್ನರ್ಸ್ ಈ ಕಾಂಗರೂಸ್
8 ಬಾರಿ ವಿಶ್ವಕಪ್ ಫೈನಲ್ಸ್ ಪ್ರವೇಶ, 5 ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ, ಬಿಗ್ ಮ್ಯಾಚ್ ವಿನ್ನಿಂಗ್ ಟೀಮ್. ಈಗಾಗಲೇ ನಾಕೌಟ್ ಪಂದ್ಯಗಳಲ್ಲಿ ಧಮ್ ತೋರಿಸಿರೋ ಆಸಿಸ್, ಇಂದಿನ ಫೈನಲ್ಸ್ ಪಂದ್ಯವನ್ನೂ ಗೆಲ್ಲೋ ವಿಶ್ವಾಸದಲ್ಲಿದೆ.
ಅಭಿಮಾನಿಗಳಿಗೆ ಕ್ರಿಕೆಟ್ ಜೊತೆ ಎಂಟರ್ಟೈನ್ಮೆಂಟ್ ಪಕ್ಕಾ
ಇಂದು ಅಹ್ಮದಾಬಾದ್ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಫ್ಯಾನ್ಸ್ಗೆ, ಬಾಲಿವುಡ್ ಸಿಂಗರ್ಸ್, ಌಕ್ಟರ್ಸ್ನಿಂದ ಮನರಂಜನೆ ಸಿಗಲಿದೆ. ಹಾಗೆಯೇ ಇದುವರೆಗೂ ವಿಶ್ವಕಪ್ ಗೆದ್ದ ಎಲ್ಲಾ ದೇಶಗಳ ನಾಯಕರನ್ನೂ ಒಂದೇ ವೇದಿಕೆಯಲ್ಲಿ ನೋಡೋ ಸುವರ್ಣಾವಕಾಶವೂ ಅಭಿಮಾನಿಗಳಿಗೆ ಸಿಗಲಿದೆ. ಒಟ್ನಲ್ಲಿ.. ಇಂದಿನ ಫೈನಲ್ ಫೈಟ್ನಲ್ಲಿ ಗೆಲ್ಲೋ ತಂಡ ಯಾವುದು ಅಂತ ಹೇಳೋದು ಕಷ್ಟ. ಆದ್ರೆ ಯಾವ ತಂಡ 1 ಲಕ್ಷ 30 ಸಾವಿರ ಕ್ರಿಕೆಟ್ ಅಭಿಮಾನಿಗಳ ಮುಂದೆ ಪ್ರಶರ್ ಹ್ಯಾಂಡಲ್ ಮಾಡುತ್ತೋ, ಆ ತಂಡ ವಿಶ್ವಚಾಂಪಿಯನ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್