newsfirstkannada.com

ಬಾಲಸೋರ್​ ರೈಲು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನೆರವಾದ ಫುಟ್ಬಾಲ್​ ಟೀಮ್.. ಎಷ್ಟು ಲಕ್ಷ ಪರಿಹಾರ ನೀಡಿತು?

Share :

20-06-2023

    ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯ

    ಲೆಬನಾನ್‌ ಟೀಂ ಅನ್ನು ಮಣಿಸುವ ಮೂಲಕ 2ನೇ ಬಾರಿ ಕಪ್​ ಗೆದ್ದ ತಂಡ

    ರೈಲುಗಳ ಭೀಕರ ದುರಂತದ ಘಟನೆಯಲ್ಲಿ 291 ಜನ ಸಾವನ್ನಪ್ಪಿದ್ದರು

ಒಡಿಶಾದ ಬಾಲಸೋರ್​ ಬಳಿ ನಡೆದ 3 ರೈಲುಗಳ ಭೀಕರ ಅಪಘಾತದ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗಾಗಿ 20 ಲಕ್ಷ ರೂಪಾಯಿಗಳನ್ನು ಭಾರತದ ಫುಟ್ಬಾಲ್​ ಟೀಮ್​ ಪರಿಹಾರವಾಗಿ ನೀಡಿದೆ. ಭುವನೇಶ್ವರದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಕ್ಕೆ ಒಡಿಶಾ ಸರ್ಕಾರ 1 ಕೋಟಿ ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಣೆ ಮಾಡಿತ್ತು. ಸದ್ಯ ಇದರಲ್ಲಿ 20 ಲಕ್ಷ ರೂ.ಗಳನ್ನು ರೈಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ನೆರವಾಗಲೆಂದು ನೀಡಲಾಗಿದೆ ಎನ್ನಲಾಗಿದೆ.

ಬಾಲಸೋರ್‌ನಲ್ಲಿ ನಡೆದ ರೈಲುಗಳ ಭೀಕರ ದುರಂತದಲ್ಲಿ 291 ಮಂದಿ ಜೀವ ಕಳೆದುಕೊಂಡಿದ್ದರು. ಈ ಘಟನೆಯು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸ್ವತಹ ರಾಜಕಾರಣಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಅವಲೋಕನ ಮಾಡಿದ್ದರು. ಈ ನೋವಿನಲ್ಲೂ ಭುವನೇಶ್ವರದಲ್ಲಿ ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿ ಆಯೋಜನೆ ಮಾಡಲಾಗಿತ್ತು. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಲೆಬನಾನ್‌ ಟೀಂನ್ನು 2-0 ಗೋಲುಗಳಿಂದ ಮಣಿಸುವ ಮೂಲಕ ಭಾರತ ಫುಟ್‌ಬಾಲ್‌ ತಂಡ ಗೆಲುವಿನ ನಗೆ ಬೀರಿತ್ತು. ಭಾರತ ತಂಡ ಇಲ್ಲಿವರೆಗೆ 3 ಬಾರಿ ಫೈನಲ್​ನಲ್ಲಿ ಪೈಪೋಟಿ ನಡೆಸಿ 2ನೇ ಬಾರಿ ಕಪ್​ಗೆ ಮುತ್ತಿಕ್ಕಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಂಡದ ಎಲ್ಲ ಪ್ಲೇಯರ್ಸ್​ಗೆ 1 ಕೋಟಿ ರೂ.ಗಳನ್ನು ಬಹುಮಾನವಾಗಿ ಘೋಷಣೆ ಮಾಡಿದ್ದರು. ಇದರಲ್ಲಿ 20 ಲಕ್ಷ ರೂ.ಗಳನ್ನು ರೈಲು ಅಪಘಾತದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರವಾಗಿ ನೀಡಬೇಕು ಎಂದು ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ ನೇತೃತ್ವದಲ್ಲಿ ಎಲ್ಲ ಆಟಗಾರರು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಈ 1 ಕೋಟಿ ರೂ. ಬಹುಮಾನದಲ್ಲಿ 20 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿ ಎಂದು ಒಡಿಶಾ ಸರ್ಕಾರಕ್ಕೆ ಫುಟ್ಬಾಲ್​ ಟೀಮ್ ಮನವಿ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಾಲಸೋರ್​ ರೈಲು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನೆರವಾದ ಫುಟ್ಬಾಲ್​ ಟೀಮ್.. ಎಷ್ಟು ಲಕ್ಷ ಪರಿಹಾರ ನೀಡಿತು?

https://newsfirstlive.com/wp-content/uploads/2023/06/FOOTBALL_TEAM_1.jpg

Load More