newsfirstkannada.com

ಭಾರತ ಚಾಂಪಿಯನ್​ ಪಟ್ಟಕ್ಕೇರಿದ​ ಬೆನ್ನಲ್ಲೇ ಮೊಳಗಿತು ‘ವಂದೇ ಮಾತರಂ’.. ಇದು ನೀಲಿ ಹುಲಿಗಳ ಸರ್ವೋಚ್ಛ ಆಳ್ವಿಕೆ ಎಂದ ಮೋದಿ

Share :

05-07-2023

    SAFF Championshipನಲ್ಲಿ 2ನೇ ಬಾರಿ​ ಜಯಭೇರಿ ಬಾರಿಸಿದ ಭಾರತ

    ಭಾರತ ಜಯದ ಬೆನ್ನಲ್ಲೇ ಒಟ್ಟಾಗಿ ‘ವಂದೇ ಮಾತರಂ’ ಹಾಡಿದ ಪ್ರೇಕ್ಷಕರು

    ಇದು ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ಎಂದು ಕರೆದ ಮೋದಿ

ಭಾರತದ ಫುಟ್​ಬಾಲ್​ ತಂಡ 2023ರ SAFF ಚಾಂಪಿಯನ್​ನಲ್ಲಿ 2ನೇ ಬಾರಿ​ ಜಯಭೇರಿ ಬಾರಿಸಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಭಾರತ ಕುವೈತ್​ ತಂಡವನ್ನು ಸೋಲಿಸುವ ಮೂಲಕ ಜಯ ತಮ್ಮದಾಗಿಸಿಕೊಂಡಿದೆ.

ಸುನಿಲ್​ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡ ಜಯಭೇರಿ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಅಚ್ಚರಿ ಘಟನೆಯೊಂದು ಸಾಕ್ಷಿಯಾಯಿತು, ಪೆವಿಲಿಯನ್​ನಲ್ಲಿ ಕುಳಿತು ತಂಡದ ಜಯವನ್ನು ಕಣ್ಣಾರೆ ಕಂಡ ಅಭಿಮಾನಿಗಳ ಬಾಯಲ್ಲಿ ಏಕಕಾಲದಲ್ಲಿ ‘ವಂದೇ ಮಾತರಂ’ ಮತ್ತು ‘ಮಾ ತುಜೆ ಸಲಾ’ ಗೀತೆ ಮೊಳಗಿತು. ಇತ್ತ ಮೈದಾನದಲ್ಲಿದ್ದ ಭಾರತ ತಂಡ ಆಟಗಾರರು ಪೆವಿಲಿಯನ್​ ಸುತ್ತಲೂ ಕೇಳಿಬರುತ್ತಿರುವ ಗೀತೆಗೆ ದಿಗ್ಭ್ರಮೆಗೊಂಡರು.

ಕಂಠೀರವ ಸ್ಟೇಡಿಯಂ ತುಂಬೆಲ್ಲಾ ಸೇರಿದ್ದ 26 ಸಾವಿರ ಜನರು ವಂದೇ ಮಾತರಂ ಗೀತೆ ಹಾಡಿದ್ದಾರೆ. ಸದ್ಯ ಈ ವಿಡಿಯೋ ಅನೇಕರ ಸ್ಮಾರ್ಟ್​ಫೋನ್​ನಲ್ಲಿ ಸೆರೆಹಿಡಿಯಲಾಗಿದೆ. ಅತ್ತ ಭಾರತ ತಂಡದ ಜಯದ ಜೊತೆಗೆ ಈ ಅಚ್ಚರಿಯ ದೃಶ್ಯ ಸಾಕ್ಷಿಯಾಗಿದ್ದನ್ನು ಕಂಡು ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿದ್ದಾರೆ.

ನೀಲಿ ಹುಲಿಗಳೆಂದ ಪ್ರಧಾನಿ  ಮೋದಿ

ಸುನಿಲ್​ ಛೆಟ್ರಿ ನಾಯಕತ್ವದಲ್ಲಿ ಭಾರತದ ಫುಟ್​ಬಾಲ್​ ತಂಡ 2023ರ SAFF ಚಾಂಪಿಯನ್​ನಲ್ಲಿ ಜಯಭೇರಿ ಬಾರಿಸಿದ ವಿಚಾರವಾಗಿ ಟ್ವೀಟ್​​ ಮಾಡಿದ್ದಾರೆ. ಟ್ವೀಟ್​​ನಲ್ಲಿ ಭಾರತಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ. #SAFFCchampionship2023 ನಲ್ಲಿ ನೀಲಿ ಹುಲಿಗಳು ಸರ್ವೋಚ್ಚ ಆಳ್ವಿಕೆ ನಡೆಸುತ್ತವೆ. ನಮ್ಮ ಆಟಗಾರರಿಗೆ ಅಭಿನಂದನೆಗಳು. ಈ ಅಥ್ಲೀಟ್‌ಗಳ ಸಂಕಲ್ಪ ಮತ್ತು ದೃಢತೆಯಿಂದ ನಡೆಸಲ್ಪಡುವ ಭಾರತೀಯ ತಂಡದ ಗಮನಾರ್ಹ ಪ್ರಯಾಣವು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳುವ ಮೂಲಕ ಆಟಗಾರರಿಗೆ ಶುಭಾಶಯ ಹೇಳಿದ್ದಾರೆ.

2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಕೂಡ ಚಾಂಪಿಯನ್​ ಆಗುವಾಗ ಇದೇ ರೀತಿವ ‘ವಂದೇ ಮಾತರಂ’ ಗೀತೆ ಮೊಳಗಿತ್ತು. ಈ ಘಟನೆ ಧೋನಿ ಮಾತ್ರವಲ್ಲ ಕ್ರೀಡಾ ಪ್ರೇಮಿಗಳ ನೆನಪಲ್ಲಿ ಅಚ್ಚಳಿಯಾಗಿ ಉಳಿದಿದೆ. ಅನೇಕರು ಈ ಘಟನೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ ಚಾಂಪಿಯನ್​ ಪಟ್ಟಕ್ಕೇರಿದ​ ಬೆನ್ನಲ್ಲೇ ಮೊಳಗಿತು ‘ವಂದೇ ಮಾತರಂ’.. ಇದು ನೀಲಿ ಹುಲಿಗಳ ಸರ್ವೋಚ್ಛ ಆಳ್ವಿಕೆ ಎಂದ ಮೋದಿ

https://newsfirstlive.com/wp-content/uploads/2023/07/SAFF-2023.jpg

Load More