newsfirstkannada.com

ಪ್ರತೀಕಾರಕ್ಕೆ ಪ್ರತ್ಯುತ್ತರ.. ಭಾರತ ಬಿಟ್ಟು ಹೋಗಲು ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಖಡಕ್‌ ಸೂಚನೆ

Share :

19-09-2023

  ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತೀಕಾರದ ಹೇಳಿಕೆಗೆ ಪ್ರತ್ಯುತ್ತರ

  ಭಾರತ ಬಿಟ್ಟು ಹೇಳಲು ಕೆನಡಾಗೆ 5 ದಿನಗಳ ಗಡುವು ಕೊಟ್ಟ ಸರ್ಕಾರ

  ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಆರೋಪ ತಿರಸ್ಕಾರ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತೀಕಾರದ ಹೇಳಿಕೆಗೆ ಭಾರತ ಸರ್ಕಾರ ತಕ್ಕ ಉತ್ತರವನ್ನೇ ಕೊಟ್ಟಿದೆ. ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಕೂಡಲೇ ಭಾರತ ಬಿಟ್ಟು ಹೋಗಲು ಸೂಚನೆ ನೀಡಲಾಗಿದೆ. ಭಾರತಕ್ಕೆ ಗುಡ್‌ಬೈ ಹೇಳಲು ಮುಂದಿನ 5 ದಿನಗಳ ಗಡುವನ್ನು ನೀಡಲಾಗಿದೆ. ದೆಹಲಿಯಲ್ಲಿರುವ ಕೆನಡಾ ರಾಯಭಾರ ಕಚೇರಿಗೆ ವಿದೇಶಾಂಗ ಇಲಾಖೆಯಿಂದ ಸಮನ್ಸ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ‘ಖಲಿಸ್ತಾನಿ ಉಗ್ರನ ಹತ್ಯೆ ಆರೋಪ ಅಸಂಬದ್ಧ, ನಿಮ್ಮ ಸಹಾನುಭೂತಿ ಕಳವಳಕಾರಿ’ ಕೆನಡಾಗೆ ತಿರುಗೇಟು ಕೊಟ್ಟ ಭಾರತ..!

ವಿದೇಶಾಂಗ ಇಲಾಖೆಯ ಕಚೇರಿಗೆ ಭಾರತದ ಕೆನಡಾ ರಾಯಭಾರಿ ಕ್ಯಾಮರೂನ್ ಮೆಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಮನ್ಸ್ ನೀಡಿದ ಭಾರತದ ವಿದೇಶಾಂಗ ಇಲಾಖೆ, ದೆಹಲಿಯಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಬಿಟ್ಟು ಹೋಗಲು ಸೂಚನೆ ನೀಡಿದೆ. ಕೆನಡಾದ ರಾಜತಾಂತ್ರಿಕ ಅಧಿಕಾರಿಯೂ ಭಾರತ ವಿರೋಧಿ ಚಟುವಟಿಕೆ ನಡೆಿಸಿದ್ದಾರೆ. ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಿದ್ದಾರೆೆ ಎಂದು ಭಾರತ ಹೇಳಿದೆ. ಕೇಂದ್ರ ಸರ್ಕಾರ ಭಾರತದ ತೀರ್ಮಾನವನ್ನು ಕೆನಡಾ ರಾಯಭಾರಿಗೆ ತಿಳಿಸಿದೆ.

ಭಾರತದ ರಾಯಭಾರಿಯನ್ನು ಹೊರ ಹಾಕಿದ್ದ ಕೆನಡಾ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಪ್ರತಿನಿಧಿಯ ಪಾತ್ರ ಇದೆ ಎಂದು ಆರೋಪಿಸಿದ್ದರು. ಬಳಿಕ ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಅಲ್ಲಿನ ಸರ್ಕಾರ ಹೊರ ಹಾಕಿತ್ತು. ಈ ಪ್ರತೀಕಾರದ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಬಿಟ್ಟು ಹೋಗಲು ಸೂಚನೆ ನೀಡಲಾಗಿದೆ. ಕೆನಡಾ ಪ್ರಧಾನಿ ಆರೋಪವನ್ನು ತಳ್ಳಿ ಹಾಕಿರುವ ಭಾರತ, ಖಲಿಸ್ತಾನಿ ಉಗ್ರನ ಹತ್ಯೆ ಆರೋಪ ಅಸಂಬದ್ಧ, ನಿಮ್ಮ ಸಹಾನುಭೂತಿ ಕಳವಳಕಾರಿ ಎಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತೀಕಾರಕ್ಕೆ ಪ್ರತ್ಯುತ್ತರ.. ಭಾರತ ಬಿಟ್ಟು ಹೋಗಲು ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಖಡಕ್‌ ಸೂಚನೆ

https://newsfirstlive.com/wp-content/uploads/2023/09/PM-Modi-11.jpg

Load More