newsfirstkannada.com

ಒಂದೇ ನಿಮಿಷದಲ್ಲಿ ಗಿನ್ನಿಸ್​​ ದಾಖಲೆ ಬರೆದ ಭಾರತೀಯ; ಯಾರು ಈ ಸಾಧಕ?

Share :

05-08-2023

    ತನ್ನ ತಲೆಯಿಂದಲೇ ವಾಲ್‌ನಟ್ಸ್‌ ಒಡೆದು ಗಿನ್ನಿಸ್​​ ದಾಖಲೆ

    ಗಿನ್ನೆಸ್ ದಾಖಲೆಯ ಪಟ್ಟಿಯಲ್ಲಿ ಭಾರತೀಯ ವ್ಯಕ್ತಿಯ ಹೆಸರು!

    ಒಂದು ನಿಮಿಷದಲ್ಲಿ 273 ವಾಲ್‌ನಟ್ಸ್​​ಗಳನ್ನು ಒಡೆದ ನವೀನ್

ಸಾಕಷ್ಟು ಜನರು ಗಿನ್ನಿಸ್ ದಾಖಲೆ ಮಾಡಬೇಕೆಂದು ಹೊಸ, ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಗಿನ್ನಿಸ್ ದಾಖಲೆಯ ಪಟ್ಟಿಯಲ್ಲಿ ನನ್ನ ಹೆಸರು ಬರಬೇಕು ಎಂಬ ಮಹದಾಸೆಯನ್ನು ಇಟ್ಟಿಕೊಂಡಿರುತ್ತಾರೆ. ಹಾಗಾಗಿ ವಿಶ್ವ ದಾಖಲೆ ಮಾಡಲು ಎಂತಹ ಸಾಹಸವನ್ನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಇದೀಗ ಭಾರತೀಯ ವ್ಯಕ್ತಿಯೊಬ್ಬರು ಗಿನ್ನಿಸ್ ದಾಖಲೆ ಮಾಡಿದ್ದಾನೆ.

ಅಡಿಕೆಯನ್ನು ಒಡೆಯುವುದು ಎಷ್ಟು ಕಷ್ಟ ಅಂತಾ ಎಲ್ಲರಿಗೂ ತಿಳಿದಿದೆ. ವಾಲ್‌ನಟ್ಸ್‌ಗಳನ್ನು ಒಡೆಯಲು ಜನರು ಭಿನ್ನ ವಿಭಿನ್ನ ತಂತ್ರಗಳನ್ನು ಬಳಸುತ್ತಾರೆ. ಆದರೆ ತಮ್ಮ ತಲೆಯನ್ನು ಬಳಸಿಕೊಂಡು ವಾಲ್‌ನಟ್ಸ್‌ ಒಡೆಯುವುದನ್ನು ಎಲ್ಲಾದರೂ ನೋಡಿದ್ದೀರಾ? ಹೌದು, ಕೇವಲ ಒಂದೇ ಒಂದು ನಿಮಿಷದಲ್ಲಿ ತನ್ನ ತಲೆಯಿಂದಲೇ ವಾಲ್‌ನಟ್ಸ್‌ ಒಡೆದು ಹಾಕಿದ್ದಾರೆ. ಇಂತಹ ಸಾಹಸಕ್ಕೆ ಮುಂದಾಗಿದ್ದು ಭಾರತೀಯ ಮೂಲದ ನವೀನ್​ ಕುಮಾರ್​​ ಎಸ್​​.

ಒಂದೇ ನಿಮಿಷದಲ್ಲಿ ವಾಲ್‌ನಟ್ಸ್‌ಗಳನ್ನು ತನ್ನ ತಲೆಯಿಂದಲೇ ಒಡೆದು ಹಾಕುವ ಮೂಲಕ ಗಿನ್ನಿಸ್​​​ ದಾಖಲೆ ಮಾಡಿದ್ದಾರೆ. 27 ವರ್ಷದ ಮಾರ್ಷಲ್ ಆರ್ಟಿಸ್ಟ್ ಭಾರತದ ನವೀನ್ ಕುಮಾರ್ ಅವರು ವಿಶ್ವ ದಾಖಲೆ ಬರೆದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನವೀನ್​ ಕುಮಾರ್​ ಅವರು ಒಂದು ನಿಮಿಷದಲ್ಲಿ 273 ವಾಲ್‌ನಟ್ಸ್​​ಗಳನ್ನು ಒಡೆದಿದ್ದಾರೆ.

ಇದನ್ನು ಓದಿ: ಅತ್ತೂ, ಅತ್ತೂ, ಅತ್ತೂ ಗಿನ್ನೆಸ್ ದಾಖಲೆ ಮಾಡುವ ಹುಚ್ಚು; 7 ದಿನ ಸತತ ಕಣ್ಣೀರು ಸುರಿಸಿದವನಿಗೆ ಏನಾಯ್ತು ಗೊತ್ತಾ?

ಇನ್ನು, ಈ ಹಿಂದಿನ ಪಾಕಿಸ್ತಾನದ ಸೀರಿಯಲ್ ರೆಕಾರ್ಡ್ ಬ್ರೇಕರ್ ಮುಹಮ್ಮದ್ ರಶೀದ್ ಎಂಬುವವರು ಹಲವು ವರ್ಷಗಳಿಂದ ದಾಖಲೆ ಮಾಡಬೇಕೆಂದು ಹೋರಾಡುತ್ತಿದ್ದಾರೆ. ಗಿನ್ನಿಸ್ ವರದಿ ಪ್ರಕಾರ, ರಶೀದ್ ಅವರು 2014 ರಲ್ಲಿ ಒಟ್ಟು 150 ವಾಲ್‌ನಟ್‌ಗಳನ್ನು ಒಡೆದು ದಾಖಲೆಯನ್ನು ಸಾಧಿಸಿದ್ದರು. ಆದರೆ 2016 ರಲ್ಲಿ ಒಟ್ಟು 181ರೊಂದಿಗೆ ಅದನ್ನು ನಿಲ್ಲಿಸಿದ್ದರು. ನವೀನ್​ ಕುಮಾರ್ ಅವರು 2017ರಲ್ಲಿ 217 ವಾಲ್‌ನಟ್ಸ್​​ಗಳನ್ನು ಒಡೆಯುವ ಮೂಲಕ ರಶೀದ್ ಅವರ ದಾಖಲೆಯನ್ನು ಮುರಿದರು. ಒಂದು ವರ್ಷದ ನಂತರ, ಇಟಲಿಯಲ್ಲಿ ಲಾ ನೊಟ್ಟೆ ಡೀ ರೆಕಾರ್ಡ್‌ನ ಸೆಟ್‌ನಲ್ಲಿ ಕಾಯಿ ಒಡೆಯುವ ಸ್ಪರ್ಧೆಯಲ್ಲಿ ಜೋಡಿಯು ಮುಖಾಮುಖಿಯಾಯಿತು. ಅವರಿಬ್ಬರೂ ಸ್ಪರ್ಧಿಯಾಗಿ ದಾಖಲೆಯನ್ನು ಮೀರಿಸಿದರು. ಆದರೆ ನವೀನ್​ ಕುಮಾರ್ 239 ವಾಲ್‌ನಟ್ಸ್​ಗಳಿಗೆ ಹೋಲಿಸಿದರೆ ರಶೀದ್ 254 ವಾಲ್‌ನಟ್ಸ್​ಗಳನ್ನು ಒಡೆಯುವ ಮೂಲಕ ಅಗ್ರಸ್ಥಾನ ಪಡೆದರು. ಇದೀಗ ಐದು ವರ್ಷಗಳ ನಂತರ, ಕುಮಾರ್ ಅವರು ವಿಶ್ವದ ಅಗ್ರಗಣ್ಯ ವಾಲ್ನಟ್ ಕ್ರ್ಯಾಕರ್ ಎಂದು ಪುನಃ ಪ್ರತಿಪಾದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ನಿಮಿಷದಲ್ಲಿ ಗಿನ್ನಿಸ್​​ ದಾಖಲೆ ಬರೆದ ಭಾರತೀಯ; ಯಾರು ಈ ಸಾಧಕ?

https://newsfirstlive.com/wp-content/uploads/2023/08/Guinness-World-Records-1.jpg

Load More