newsfirstkannada.com

ಇಸ್ರೇಲ್ ಪರ ಪೋಸ್ಟ್ ಬಹ್ರೇನ್​ನಲ್ಲಿ ಕೆಲಸ ಕಳೆದುಕೊಂಡ ಕನ್ನಡಿಗ; ಮತ್ತಷ್ಟು ರಣಾಂಗಣ ಆಗ್ತಿದೆ ಯುದ್ಧದ ನಾಡು..!

Share :

22-10-2023

  ಇಸ್ರೇಲ್, ಹಮಾಸ್ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದೆ

  ಯುದ್ಧದ ನಡುವೆಯೂ ಗಾಜಾ ತಲುಪಿದ ಮಾನವೀಯ ನೆರವು

  ಗೆಲ್ಲುವ ತನಕ ವಿರಮಿಸಲ್ಲ.. ಇಸ್ರೇಲ್​ ಪ್ರಧಾನಿ ನೆತನ್ಯಾಹು ಪ್ರತಿಜ್ಞೆ

ಇಸ್ರೇಲ್, ಹಮಾಸ್ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರಿಂದ ಶುರುವಾದ ಸಮರವನ್ನು ಇಸ್ರೇಲ್ ಸೇನೆ ತೀವ್ರವಾಗಿ ಮುಂದುವರೆಸ್ತಿದೆ. ಈಗಾಗಲೇ ಭಾಗಶಃ ಗಾಜಾ ಪಟ್ಟಿಯನ್ನು ಧ್ವಂಸ ಮಾಡಿದ್ದು ಗೆಲುವಿನ ತನಕ ವಿರಮಿಸುವುದಿಲ್ಲ ಅಂತ ಇಸ್ರೇಲ್​ ಪ್ರಧಾನಿ ಪ್ರತಿಜ್ಞೆಗೈದಿದ್ದಾರೆ. ಇಸ್ರೇಲ್​ನ ನಿರ್ಬಂಧದ ನಡುವೆಯೂ, ಗಾಜಾ ಜನರಿಗೆ ಮಾನವೀಯ ನೆರವು ಸಿಕ್ಕಿದೆ.

ಇಸ್ರೇಲ್, ಹಮಾಸ್ ನಡುವಿನ ಯುದ್ಧ ದಿನೇ ದಿನೇ ಭೀಕರವಾಗ್ತಿದೆ. ಈಗಾಗಲೇ ಅರ್ಧ ತಿಂಗಳು ಎರಡೂ ಕಡೆಯಿಂದಲೂ ಯುದ್ಧ ನಡೆಸಿದ್ದು ಸಾವಿರಾರು ಮಂದಿ ಪ್ರಾಣ ಕಳೆದುಕೊಂಡು ಸಾವಿರಾರು ಮಂದಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಇಸ್ರೇಲ್​ನ ಕ್ಷಿಪಣಿಗಳ ಹೊಡೆತಕ್ಕೆ ಗಾಜಾಪಟ್ಟಿ, ನಾಮಾವಶೇಷವಾಗುತ್ತಿದೆ. ಸದ್ಯ 16ನೇ ದಿನಕ್ಕೆ ಯುದ್ಧ ಕಾಲಿಟ್ಟಿದ್ದು ಮತ್ತಷ್ಟು ಭೀಕರವಾಗುವ ಸಾಧ್ಯತೆ ಇದೆ.

ಇಸ್ರೇಲ್​ ನಡೆಸಿದ ದಾಳಿಯಲ್ಲಿ ಕಟ್ಟಡಗಳು ಧ್ವಂಸಗೊಂಡಿವೆ. ಜನರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಓಡುತ್ತಿದ್ದ ದೃಶ್ಯಗಳು ಕಂಡುಬಂದ್ವು. ಮತ್ತೊಂದೆಡೆ, ಗಾಜಾಗೆ ಇಂಧನ ಪೂರೈಕೆ ಸ್ಥಗಿತಗೊಂಡು ವಾರಗಳು ಕಳೆದಿದ್ದು ಆಸ್ಪತ್ರೆಗಳ ಪರಿಸ್ಥಿತಿ ಮತ್ತಷ್ಟು ಭೀಕರವಾಗಿವೆ. ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮಗಳ ನೋವಿನ ದೃಶ್ಯಗಳನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತೆ.

ಯುದ್ಧದ ನಡುವೆಯೂ ಗಾಜಾ ತಲುಪಿದ ಮಾನವೀಯ ನೆರವು

ಹಮಾಸ್​ ಉಗ್ರರ ಸಂಹಾರಕ್ಕೆ ಪಣತೊಟ್ಟಿರುವ ಇಸ್ರೇಲ್​, ಗಾಜಾಪಟ್ಟಿಗೆ ಅಷ್ಟ ದಿಗ್ಭಂಧನ ಹಾಕಿತ್ತು. ಆಹಾರ ಪದಾರ್ಥ, ನೀರು ಪೂರೈಕೆ, ಇಂಧನ, ವಿದ್ಯುತ್​ ಸರಬರಾಜು ಎಲ್ಲವನ್ನೂ ಸ್ಟಾಫ್​ ಮಾಡಿತ್ತು. ಇದರಿಂದ ಗಾಜಾಪಟ್ಟಿಯ ಜನರು ಅನ್ನ-ನೀರಿಗಾಗಿ ಅಲೆದಾಡುವ ದೃಶ್ಯಗಳು ಮನಕಲಕುವಂತಿದ್ವು. ಈ ನಡುವೆ ಅಮೆರಿಕದ​ ಮನವಿ ಮೇರೆಗೆ ಇಸ್ರೇಲ್​ ನೆರವಿಗೆ ಅವಕಾಶ ನೀಡಿದ್ದು ಮಾನವೀಯ ನೆರವು ಗಾಜಾಪಟ್ಟಿಯನ್ನು ತಲುಪಿದೆ.

ಈಜಿಪ್ಟ್‌ನಿಂದ ರಫಾ ಗಡಿಯ ಮೂಲಕ ಮಾನವೀಯ ನೆರವು ಹೊತ್ತ 20 ಟ್ರಕ್​ಗಳು ಗಾಜಾ ತಲುಪಿವೆ. ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್‌ ಕಚೇರಿ ಹೊತ್ತಿದ್ದು, 20 ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಪ್ರವೇಶಿಸಿದ್ದವು. ಈಗ 4 ಆ್ಯಂಬುಲೆನ್ಸ್​, ವಿಶ್ವಸಂಸ್ಥೆಯ ಎರಡು ವಾಹನ ಮತ್ತು ಎರಡು ರೆಡ್​ಕ್ರಾಸ್​ ವಾಹನಗಳು ಕೂಡ ಗಾಜಾ ತಲುಪಿವೆ. 13 ಟ್ರಕ್​ಗಳಲ್ಲಿ ಔಷಧಿ, 5 ಟ್ರಕ್​ಗಳಲ್ಲಿ ಆಹಾರ, 2 ಟ್ರಕ್​ಗಳಲ್ಲಿ ನೀರನ್ನು ಹೊತ್ತು ತಂದಿವೆ. ಆದ್ರೆ, ಗಾಜಾಗೆ ಇಂಧನ ತಲುಪಿಸಲು ಇಸ್ರೇಲ್​ ಸೇನೆ ಅವಕಾಶ ನೀಡಿಲ್ಲ. 20 ಟ್ರಕ್​ಗಳನ್ನು ಗಾಜಾ ಗಡಿಗೆ ಕಳಿಸಿದ್ರೂ ಈ ಆಹಾರ ಅಲ್ಲಿರುವ ಜನರಿಗೆ ಸಾಲ್ತಿಲ್ಲ ಅಂತ ವರದಿಯಾಗಿದೆ. ಟ್ರಕ್​ಗಳಲ್ಲಿರುವ ಆಹಾರ ಇಲ್ಲಿನ ಒಂದು ಶಾಲೆಗೂ ಸಾಕಾಗುವಷ್ಟಿಲ್ಲ ಅಂತ ಪ್ಯಾಲೆಸ್ತೀನ್ ತಿಳಿಸಿದೆ.

ಪ್ಯಾಲೆಸ್ತೀನ್​ಗಳಿಗೆ ಆಶ್ರಯ ನೀಡದ ನೆರೆಯ ದೇಶಗಳು

ಇನ್ನು ಗಾಜಾ ಪಟ್ಟಿ ಮೇಲೆ ಇಸ್ರೇಲ್ ಇನ್ನಿಲ್ಲದಂತೆ ದಾಳಿ ನಡೆಸುತ್ತಿದೆ. ಭೂ ಸೇನೆ ಕೂಡ ಗಡಿಯಲ್ಲಿ ಬೀಡುಬಿಟ್ಟಿದೆ. ಹೀಗಾಗಿ ಜನರು ಬೇರೆ ಕಡೆ ಸ್ಥಳಾಂತರವಾಗುತ್ತಿದ್ದಾರೆ. ಆದ್ರೆ ಪ್ಯಾಲೆಸ್ತೀನ್ ಜನರಿಗೆ ಆಶ್ರಯ ನೀಡಲು ನೆರೆಯ ಮುಸ್ಲಿಂ ದೇಶಗಳೇ ನಿರಾಕರಿಸುತ್ತಿವೆ. ಈಗಾಗಲೇ ನಾವು ಬಹಳಷ್ಟು ಜನರಿಗೆ ಆಶ್ರಯ ನೀಡಿದ್ದೇವೆ. ಇನ್ನೂ ಆಶ್ರಯ ನೀಡಲು ಸಾಧ್ಯವಿಲ್ಲ. ಇಸ್ರೇಲ್ ಜನರನ್ನು ಹೊರದಬ್ಬುವ ಪ್ರಯತ್ನ ಮಾಡಬಾರದು ಅಂತ ಜೊರ್ಡಾನ್, ಈಜಿಪ್ಟ್‌, ಸಿರಿಯಾ ದೇಶಗಳ ಮುಖ್ಯಸ್ಥರು ಹೇಳಿದ್ದಾರೆ.

ಗೆಲ್ಲುವ ತನಕ ವಿರಮಿಸಲ್ಲ.. ಇಸ್ರೇಲ್​ ಪ್ರಧಾನಿ ಪ್ರತಿಜ್ಞೆ

ಹಮಾಸ್​ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಸುಳಿವನ್ನು ಇಸ್ರೇಲ್​ ಪ್ರಧಾನಿ ನೀಡಿದ್ದಾರೆ. ಹಮಾಸ್​ ವಿರುದ್ಧ ಗೆಲುವು ಸಿಗೋವರೆಗೂ ವಿರಮಿಸಲ್ಲ ಎಂದು ಇಸ್ರೇಲ್​ ಪ್ರಧಾನಿ, ಪ್ರತಿಜ್ಞೆಗೈದಿದ್ದರು. ಇದು ಮುಂದಿನ ದಿನಗಳಲ್ಲಿ ಯುದ್ಧದ ಭೀಕರ ಮತ್ತಷ್ಟು ಕರಾಳವಾಗುವ ಸೂಚನೆಯನ್ನು ನೀಡಿದೆ. ನಿನ್ನೆ ಹಮಾಸ್​ ಉಗ್ರರು ಒತ್ತೆ ಇಟ್ಟುಕೊಂಡಿದ್ದ ಅಮೆರಿಕ ಮೂಲದ ತಾಯಿ ಮತ್ತು ಮಗಳನ್ನು ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ, ಕಳೆದ ರಾತ್ರಿ ಇಸ್ರೇಲ್​ ಗಾಜಾ ಮೇಲೆ ಏರ್​ಸ್ಟ್ರೈಕ್​ ನಡೆಸಿದ್ದು ಅದರ ದೃಶ್ಯಗಳನ್ನು ಬಿಡುಗಡೆ ಮಾಡಿದೆ.

ಗಾಜಾ ಪರವಾಗಿ ನಿಂತ ಗ್ರೇಟಾ ವಿರುದ್ಧ ಇಸ್ರೇಲ್ ಕೆಂಡ

ಇನ್ನು ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್​ ಇಸ್ರೇಲ್​ ವಿರುದ್ಧ ಹಾಗೂ ಗಾಜಾ ಪರ ಪೋಸ್ಟ್​ ಮಾಡಿದ್ದರು. ಇಂದು ನಾವು ಪ್ಯಾಲೆಸ್ತೀನ್ ಮತ್ತು ಗಾಜಾದೊಂದಿಗೆ ಹೋರಾಟ ಮಾಡುತ್ತೇವೆ. ಪ್ಯಾಲೆಸ್ತೀನಿಯರು ಮತ್ತು ಎಲ್ಲಾ ನಾಗರಿಕರ ಪರವಾಗಿ ತಕ್ಷಣ ಕದನ ವಿರಾಮ ಘೋಷಿಸಬೇಕು. ಈ ಬಗ್ಗೆ ಜಗತ್ತು ಮಾತನಾಡಬೇಕು ಅಂತ ಪೋಸ್ಟ್​ ಮಾಡಿದ್ರು. ಇದಕ್ಕೆ ಪ್ರತಿಕ್ರಿಸಿರುವ ಇಸ್ರೇಲ್​, ಹಮಾಸ್ ಉಗ್ರರು ಅಮಾಯಕ ಇಸ್ರೇಲಿಗಳನ್ನು ಕೊಂದು ಹಾಕಿದ್ದಾರೆ. ಹಮಾಸ್ ಹತ್ಯಾಕಾಂಡದ ಬಲಿಪಶುಗಳು ನಿಮ್ಮ ಸ್ನೇಹಿತರೂ ಆಗಿರಬಹುದು. ಇದರ ಬಗ್ಗೆಯೂ ಮಾತಾಡು ಅಂತ ತಿರುಗೇಟು ಕೊಟ್ಟಿದೆ.

ಪ್ಯಾಲೆಸ್ತೀನ್​ಗೆ ಬೆಂಬಲ ಘೋಷಿಸಿದ ಮೆಹಬೂಬ ಮುಫ್ತಿ

ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧಕ್ಕೆ ವಿವಿಧ ದೇಶಗಳನ್ನು ಪರ-ವಿರೋಧ ಬೆಂಬಲ ವ್ಯಕ್ತವಾಗ್ತಿದೆ. ಕೆಲವರು ಇಸ್ರೇಲ್​ ಬೆಂಬಲಿಸಿದ್ರೆ, ಇನ್ನೂ ಕೆಲವರು ಪ್ಯಾಲೆಸ್ತೈನ್​ ಪರ ಬೀದಿಗಿಳಿದು ಪ್ರತಿಭಟನೆ ಮಾಡ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಪ್ಯಾಲಿಸ್ತೀನ್ ಪರ ಪ್ರತಿಭಟನೆ ಮಾಡಲಾಗುತ್ತಿದೆ. ಜಮ್ಮುವಿನ ಮಾಜಿ ಸಿಎಂ ಮೆಹಬೂಬ್ ಮಫ್ತಿ ನೇತೃತ್ವದಲ್ಲಿ ಪ್ಯಾಲಿಸ್ತೈನ್ ಬಾವುಟ ಹಿಡಿದು ಗೋ ಬ್ಯಾಕ್ ಇಸ್ರೇಲ್ ಎಂದು ಘೋಷ ವಾಕ್ಯ ಕೂಗಿದ್ದಾರೆ. ಆದ್ರೆ ಬಹ್ರೇನ್​ನಲ್ಲಿ ಪ್ಯಾಲಿಸ್ತೀನ್ ವಿರೋಧಿ ಟ್ವೀಟ್​ಗಳನ್ನು ಪೋಸ್ಟ್ ಮಾಡಿದ ಕರ್ನಾಟಕದ ಮೂಲದ ವೈದ್ಯ ಡಾ.ಸುನಿಲ್ ರಾವ್ ಅವರನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

ಒಟ್ಟಾರೆ ಹಮಾಸ್​ ಸಂಹಾರಕ್ಕೆ ಇಸ್ರೇಲ್ ಪಣತೊಟ್ಟು ನಿಂತಿದೆ. ​ಮತ್ತೊಂದೆಡೆ ಇಸ್ರೇಲ್​ಗೆ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ತಿರುಗೇಟು ನೀಡಿದ್ದು. ನಾವು ಬಿಡುವುದಿಲ್ಲ, ನಮ್ಮ ನೆಲದಲ್ಲೇ ಇರುತ್ತೇವೆ ಎಂದಿದ್ದಾರೆ. ಇನ್ನು ಗಾಜಾ ಪರವಾಗಿ ಈಜಿಫ್ಟ್​, ನೆದರ್​ಲ್ಯಾಂಡ್​, ಸ್ಕಾಟ್ಲೆಂಡ್​, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾವಿರಾರು ಮಂದಿ ಬೀದಿಗಿಳಿಯುತ್ತಿದ್ದಾರೆ. ಈ ನಡುವೆ ಮುಸ್ಲಿಂ ರಾಷ್ಟ್ರಗಳಿಗೆ ಇಸ್ರೇಲಿಗರು ತೆರಳದಂತೆ, ಇಸ್ರೇಲ್​ನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ರೇಲ್ ಪರ ಪೋಸ್ಟ್ ಬಹ್ರೇನ್​ನಲ್ಲಿ ಕೆಲಸ ಕಳೆದುಕೊಂಡ ಕನ್ನಡಿಗ; ಮತ್ತಷ್ಟು ರಣಾಂಗಣ ಆಗ್ತಿದೆ ಯುದ್ಧದ ನಾಡು..!

https://newsfirstlive.com/wp-content/uploads/2023/10/DR-sunil.jpg

Load More