21ರ ಹರೆಯದ ನೇಪಾಳ ಯುವತಿಯನ್ನು ಗುಂಡಿಟ್ಟು ಕೊಂದ ಪರಮನೀಚ
ದರೋಡೆಗೆಂದು ಅಪಾರ್ಟ್ಮೆಂಟ್ಗೆ ಬಂದವನು ಮೂರು ಬಾರಿ ಗುಂಡಿಕ್ಕಿದ
ಭವಿಷ್ಯ ಅರಸಿ ಅಮೆರಿಕಾಗೆ ಬಂದ ನೇಪಾಳದ ಯುವತಿಯ ಭೀಕರ ಅಂತ್ಯ
ವಾಷಿಂಗ್ಟನ್: ದರೋಡೆ ಮಾಡಲು ಅಂತ ಬಂದು 21 ವರ್ಷದ ನೇಪಾಳದ ವಿದ್ಯಾರ್ಥಿನಿಯನ್ನು ಭಾರತೀಯ ಮೂಲದ 52 ವರ್ಷದ ವ್ಯಕ್ತಿ ಹತ್ಯೆಗೈದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಹೌಸ್ಟನ್ ಅಪಾರ್ಟಮೆಂಟ್ನಲ್ಲಿ ವಾಸವಿದ್ದು ನೇಪಾಳ ಮೂಲದ 21 ವರ್ಷದ ಮುನಾ ಪಾಂಡ್ಯ ಎನ್ನುವ ವಿದ್ಯಾರ್ಥಿನಿ ತನ್ನ ಅಪಾರ್ಟ್ಮೆಂಟ್ನಲ್ಲಿದ್ದಾಗ, ದರೋಡೆಗೆಂದು ಬಂದ ಭಾರತದ ಮೂಲದ ಬಾಬಿ ಸಿನ್ಹಾ ಶಾ ಗುಂಡಿಟ್ಟು ಜೀವ ತೆಗೆದಿದ್ದಾನೆ.
ಇದನ್ನೂ ಓದಿ: ಯುವ ಜನತೆಗೆ ಬಂಪರ್ ಆಫರ್; ಮದುವೆಯಾದ್ರೆ ಸರ್ಕಾರದಿಂದ ಬರೋಬ್ಬರಿ 31 ಲಕ್ಷ ಘೋಷಣೆ
ಕಮ್ಯುನಿಟಿ ಕಾಲೇಜ್ ವಿದ್ಯಾರ್ಥಿನಿಯಾಗಿದ್ದ ಮುನಾ ಪಾಂಡ್ಯ ಜೀವ ಹೋಗಿದೆ ಎಂದು ಆಪಾರ್ಟ್ಮೆಂಟ್ನ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಸಿಬ್ಬಂದಿಗೆ ಯಾವುದೋ ಅನಾಮದೇಯ ಕರೆ ಮಾಡಿ ಮನೆಯಲ್ಲೊಂದು ಶವ ಬಿದ್ದಿದೆ ಎಂದು ಎಂದು ಹೇಳಿದ್ದಾರೆ. ಅದನ್ನೇ ಪೊಲೀಸರಿಗೆ ಅಪಾರ್ಟ್ಮೆಂಟ್ ಸಿಬ್ಬಂದಿ ಹೇಳಿದ್ದಾರೆ. ಮುನಾ ಇದ್ದ ಮನೆಗೆ ಹೋಗಿ ನೋಡಿದಾಗ ಒಟ್ಟು ಮೂರು ಗುಂಡು ಆಕೆಯ ದೇಹ ಹೊಕ್ಕಿದ್ದನ್ನು ಪೊಲೀಸರು ಗಮನಿಸಿದ್ದಾರೆ.
ಇದನ್ನೂ ಓದಿ: ಓಮನ್ ದೇಶದಲ್ಲಿ ಬೆಳಗಾವಿ ಮೂಲದ 4 ಮಂದಿ ದಾರುಣ ಸಾವು; ಆಗಿದ್ದೇನು?
ಕೊಲೆಯಾದ ಎರಡು ದಿನಗಳ ಬಳಿಕ ಆರೋಪಿಯ ಫೋಟೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈಗಾಗಲೇ 52 ವರ್ಷದ ಬಾಬಿ ಸಿನ್ಹಾ ಶಾನನ್ನು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಮುನಾ ಪಾಂಡ್ಯ 2021ರಲ್ಲಿ ಕಮ್ಯುನಿಕಟಿ ಕಾಲೇಜ್ಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದಳು. ಅವಳ ಕಳೆಬರಹ ಮನೆಯಲ್ಲಿ ಸಿಗುವವರೆಗೂ ಮುನಾಳ ತಾಯಿ ನಿರಂತರ ಕರೆ ಮಾಡಿದ್ದಾರೆ. ಆದ್ರೆ ಸ್ವಿಚ್ಡ್ ಆಫ್ ಬಂದಿದೆ. ಅವಳ ಫೋನ್ ಯಾವಗಲೂ ಆನ್ ಇರೋದು. ಕಳೆದ ಕೆಲವು ದಿನಗಳಿಂದ ಸ್ವಿಚ್ಡ್ ಆಫ್ ಬಂದಿರೋದಕ್ಕೆ ಆತಂಕಗೊಂಡಿದ್ದಾರೆ.
ಮುನಾ ಅವರ ತಾಯಿಗೆ ಒಬ್ಬಳೇ ಮಗಳು, ಹೀಗಾಗಿ ಮುನಾಳನ್ನು ಅವಳು ನೋಡಲೇಬೇಕು ಎಂದು ಹೌಸ್ಟನ್ನಲ್ಲಿರುವ ನೇಪಾಳಿ ಸಂಘ ಸಂಸ್ಥೆಗಳು ಮುನಾಳ ತಾಯಿ ಅಮೆರಿಕಾಗೆ ಕರೆತರಲು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ. ನಾವು ಈಗಾಗಲೇ ನಮ್ಮ ಸಮುದಾಯದ ಎಲ್ಲರನ್ನೂ ಸಂಪರ್ಕಸಿದ್ದೇವೆ. ಮುನಾಳ ತಾಯಿ ಅನಿತಾಗೆ ಅವಳ ಮಗಳ ಅಂತ್ಯಕ್ರಿಯೆ ನೋಡುವ ಹಕ್ಕಿದೆ ಹೀಗಾಗಿ ಅವರನ್ನು ಕರೆಸಿಕೊಳ್ಳುವ ಎಲ್ಲ ಏರ್ಪಾಡುಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ