Advertisment

ಅಯ್ಯಪ್ಪ ಭಕ್ತರಿಗೆ ರೈಲ್ವೆ ಸಿಹಿಸುದ್ದಿ.. ಶಬರಿಮಲೆಗೆ ವಿಶೇಷ ರೈಲುಗಳು

author-image
Ganesh
Updated On
ಅಯ್ಯಪ್ಪ ಭಕ್ತರಿಗೆ ರೈಲ್ವೆ ಸಿಹಿಸುದ್ದಿ.. ಶಬರಿಮಲೆಗೆ ವಿಶೇಷ ರೈಲುಗಳು
Advertisment
  • ಶನಿವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ
  • 4 ವಿಶೇಷ ರೈಲುಗಳ ವ್ಯವಸ್ಥೆ ಮಾಡಿರುವ ರೈಲ್ವೇ ಇಲಾಖೆ
  • ಕರ್ನಾಟಕದ ಭಕ್ತರಿಗೆ ಕೆಎಸ್​ಆರ್​ಟಿಸಿ ಸಿಹಿ ಸುದ್ದಿ

ಅಯ್ಯಪ್ಪನ ಭಕ್ತರು ಶಬರಿಮಲೆಗೆ ತೆರಳಲು ಸಿದ್ಧತೆ ನಡೆಸ್ತಿದ್ದಾರೆ. ಮಂಡಲ-ಮಕರವಿಳಕ್ಕು ಋತುವಿನ ಅಂಗವಾಗಿ ಶಬರಿಮಲೆ ದೇವಸ್ಥಾನದ ಈಗಾಗಲೇ ತೆರೆಯಲಾಗಿದೆ. ನಿನ್ನೆ ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಶಬರಿಮಲೆ ಅಯ್ಯಪ್ಪನ ಭಕ್ತರಿಗಾಗಿ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈದರಾಬಾದ್​ನಿಂದ ಕೊಲ್ಲಂಗೆ ರೈಲುಗಳು ಸಂಚಾರ ಮಾಡಲಿವೆ.

Advertisment

ಕಾಚಿಗುಡದಿಂದ ಕಡಪ ಮೂಲಕ ಕೊಲ್ಲಂಗೆ 4 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸಂಖ್ಯೆ 07133, 07134, 07141, 07140. ಈ ನಂಬರ್​ನ ಟ್ರೈನ್​​ ಅಯ್ಯಪ್ಪನ ಭಕ್ತರಿಗಾಗಿ ಓಡಾಟ ನಡೆಸಲಿವೆ. ರೈಲು ಸಂಖ್ಯೆ 07133 ಈ ತಿಂಗಳ 14, 21 ಮತ್ತು 28 ರಂದು ಭಕ್ತರಿಗೆ ಲಭ್ಯವಿರುತ್ತದೆ. ರೈಲು ಸಂಖ್ಯೆ 07134 ಈ ತಿಂಗಳ 15, 22 ಮತ್ತು 29 ರಂದು ಓಡಾಟ ನಡೆಸಲಿದೆ. ರೈಲು ಸಂಖ್ಯೆ 07139 ಈ ತಿಂಗಳ 16 ರಂದು ಓಡಾಟ ನಡೆಸಲಿದೆ.

ಇದನ್ನೂ ಓದಿ:ಅಯ್ಯಪ್ಪನ ಭಕ್ತರಿಗೆ KSRTC ಗುಡ್​ನ್ಯೂಸ್; ಶಬರಿಮಲೆಗೆ ಹೋಗಲು ವಿಶೇಷ ವ್ಯವಸ್ಥೆ..!

ಇನ್ನು, ಕರ್ನಾಟಕದ ಭಕ್ತರಿಗೆ ಕೆಎಸ್​ಆರ್​ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಬಿಡಲಿದೆ. ನವೆಂಬರ್‌ 29 ರಿಂದ ಬೆಂಗಳೂರು ಟು ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ. ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್​ಗೆ ಬಸ್ ಪ್ರಯಾಣ ಬೆಳಸಲಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್​ನಿಂದ ಶಾಂತಿನಗರಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಬೆಳಗ್ಗೆ 6.40ಕ್ಕೆ ನೀಲಕ್ಕಲ್ ತಲುಪಲಿದೆ.

Advertisment

ಇದನ್ನೂ ಓದಿ:ಸಿಕ್ಕ ಜೀವದಾನ ಎರಡೂ ಕೈಗಳಿಂದ ಬಾಚಿಕೊಂಡ ಯಂಗ್​ಗನ್​.. ರನ್ ಹೊಳೆ ಶುರುವಾಗಿದ್ದೇ ಆಗ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment