newsfirstkannada.com

ಭಾರತೀಯ ವಿಜ್ಞಾನಿಗಳ ಸಂಶೋಧನೆಯಲ್ಲಿ ಗುರುಗ್ರಹಕ್ಕಿಂತ 13 ಪಟ್ಟು ದೊಡ್ಡ ಗ್ರಹ ಪತ್ತೆ; ಏನಿದರ ವಿಶೇಷ?

Share :

Published May 31, 2023 at 12:05pm

Update May 31, 2023 at 12:16pm

    ಸೌರವ್ಯೂಹದಲ್ಲೇ ಅತಿ ದೊಡ್ಡ ಗ್ರಹವೇ ಗುರುಗ್ರಹ

    ಪತ್ತೆಯಾದ ಹೊಸ ಗ್ರಹವೂ ಗುರುಗಿಂತ ದೊಡ್ಡದು

    ಪ್ರತಿ 7.24 ದಿನಗಳಿಗೊಮ್ಮೆ ತನ್ನ ನಕ್ಷತ್ರ ಸುತ್ತಾಟ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ತಂಡ ನಡೆಸಿರೋ ಸಂಶೋಧನೆಯಲ್ಲಿ ಗುರುಗ್ರಹಕ್ಕಿಂತ 13 ಪಟ್ಟು ದೊಡ್ಡದಾದ ಅನ್ಯಗ್ರಹವೊಂದು ಪತ್ತೆಯಾಗಿದೆ. ಭೂಮಿಗಿಂತಲೂ ಗುರು ಗ್ರಹ 11 ಪಟ್ಟು ದೊಡ್ಡದಿದೆ. ಸೌರಮಂಡಲದ ಅತಿ ದೊಡ್ಡ ಗ್ರಹವೇ ಗುರು ಗ್ರಹ. ಇದೀಗ ಗುರು ಗ್ರಹಕ್ಕಿಂತಲೂ 13 ಪಟ್ಟು ದೊಡ್ಡ ಗ್ರಹ ಪತ್ತೆಯಾಗಿರೋದು ವೈಜ್ಞಾನಿಕ ಲೋಕದಲ್ಲೇ ಅಚ್ಚರಿಗೆ ಕಾರಣವಾಗಿದೆ.

ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ಪ್ರೊಫೆಸರ್ ಅಭಿಜಿತ್ ಚಕ್ರವರ್ತಿ ನೇತೃತ್ವದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ವಿಜ್ಞಾನಿಗಳ ತಂಡದಲ್ಲಿ ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಅಮೆರಿಕಾದ ವಿಜ್ಞಾನಿಗಳು ಭಾಗಿಯಾಗಿದ್ದಾರೆ. ಕಂಡು ಹಿಡಿಯಲಾಗಿರುವ ಈ ಗ್ರಹವು ಭೂಮಿಗಿಂತಲೂ 731 ಜ್ಯೋತಿರ್ವರ್ಷ ದೂರದಲ್ಲಿದೆ. ಈ ಗ್ರಹದ ತಾಪಮಾನ 1396 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಅಂದಾಜಿಸಲಾಗಿದೆ.

ಹೊಸದಾಗಿ ಪತ್ತೆಯಾದ ಗ್ರಹಕ್ಕೆ TOI4603 ಅಥವಾ HD 245134 ಎಂದು ಹೆಸರಿಸಲಾಗಿದೆ. ಇದು ಅತ್ಯಂತ ಬೃಹತ್ ಮತ್ತು ದಟ್ಟವಾದ ದೈತ್ಯ ಗ್ರಹಗಳಲ್ಲಿ ಒಂದಾಗಿದೆ. ಅದು ನಮ್ಮ ಸೂರ್ಯ ಮತ್ತು ಭೂಮಿಯ ನಡುವಿನ ಅಂತರಕ್ಕಿಂತ 1/10 ನೇ ದೂರದಲ್ಲಿ ಅದರ ನಕ್ಷತ್ರಕ್ಕೆ ಬಹಳ ಹತ್ತಿರದಲ್ಲಿದೆ.

ಈ ಗ್ರಹವು ಬೃಹತ್ ದೈತ್ಯ ಗ್ರಹಗಳು ಮತ್ತು ಕಡಿಮೆ ದ್ರವ್ಯರಾಶಿಯ ಕಂದು ಕುಬ್ಜಗಳ ಪರಿವರ್ತನಾ ಸಮೂಹಕ್ಕೆ ಬೀಳುತ್ತದೆ. ಗ್ರಹಗಳ ದ್ರವ್ಯರಾಶಿಯು ಗುರುಗ್ರಹದ ದ್ರವ್ಯರಾಶಿಯ 11 ರಿಂದ 16 ಪಟ್ಟು ಹೆಚ್ಚಾಗುತ್ತದೆ. ಈ ಗ್ರಹವು ಪ್ರತಿ 7.24 ದಿನಗಳಿಗೊಮ್ಮೆ ತನ್ನ ನಕ್ಷತ್ರವನ್ನು ಸುತ್ತುತ್ತದೆ. ಗ್ರಹವು 1396 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಬಿಸಿಯಾಗಿರುತ್ತದೆ ಎನ್ನಲಾಗಿದೆ.

ಭಾರತ ಮತ್ತು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಕಂಡುಹಿಡಿದ ಮೂರನೇ ಎಕ್ಸೋಪ್ಲಾನೆಟ್ ಇದಾಗಿದೆ. ಸಂಶೋಧನೆಯ ವಿವರಗಳನ್ನು ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ ಲೆಟರ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಭಾರತೀಯ ವಿಜ್ಞಾನಿಗಳ ಸಂಶೋಧನೆಯಲ್ಲಿ ಗುರುಗ್ರಹಕ್ಕಿಂತ 13 ಪಟ್ಟು ದೊಡ್ಡ ಗ್ರಹ ಪತ್ತೆ; ಏನಿದರ ವಿಶೇಷ?

https://newsfirstlive.com/wp-content/uploads/2023/05/New-Planet.jpg

Load More