newsfirstkannada.com

×

ವಿರಾಟ್ ಕೊಹ್ಲಿ ಬಾಲ್ಯದ ಜೀವನ ಹೇಗಿತ್ತು? ಯಾರಿಗೂ ಗೊತ್ತಿರದ ವಿಚಾರ ರಿವೀಲ್..!

Share :

Published May 23, 2023 at 11:04am

Update September 25, 2023 at 10:22pm

    ವಿರಾಟ್ ಕೊಹ್ಲಿ ಬಾಲ್ಯದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿದೆ

    ಕೊಹ್ಲಿ ಬದುಕಿನ ಪ್ರತಿಯೊಂದು ಚಾಪ್ಟರ್​​​​​​​​​ ನಿಜಕ್ಕೂ ಬಲು ರೋಚಕ

    ವಿರಾಟ್ ಕೊಹ್ಲಿ ಚಿಕ್ಕಂದಿನಿಂದಲೇ ಸಿಕ್ಕಾಪಟ್ಟೆ ಚುರುಕು

    1. ಕಿಂಗ್ ಕೊಹ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಸಾಧನೆ ಬಗ್ಗೆ ಅಭಿಮಾನಿಗಳು ಪಟಾಪಟ್​ ಅಂತ ಹೇಳ್ತಾರೆ. ಯಾಕಂದ್ರೆ ವಿಶ್ವಕ್ರಿಕೆಟ್ ಲೋಕಕ್ಕೆ ಸೆಂಚುರಿ ಸ್ಪೆಷಲಿಸ್ಟ್ ಅಷ್ಟೊಂದು ಚಿರಪರಿಚಿತ. ಬಟ್​​, ಕೊಹ್ಲಿಯ ಬಾಲ್ಯದ ಮೆಮರೀಸ್​​​​ ಆದೆಷ್ಟು ಜನರಿಗೆ ಗೊತ್ತು? ನಾವೀಗ ನಿಮಗೆ ಗೊತ್ತಿರದ ಕೊಹ್ಲಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿದೆ.

ಆಗಸ್ಟ್​ 18, 2008. ರನ್​ ಮಾಸ್ಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಾಲಿಟ್ಟ ದಿನ. 16 ವರ್ಷಗಳಲ್ಲಿ ಅದ್ವೀತಿಯ ಸಾಧನೆ ಗೈದಿದ್ದಾರೆ. 75 ಶತಕಗಳ ಒಡೆಯ. ಕಿಂಗ್​​ ಆಫ್​ ಮಾಡ್ರನ್ ಕ್ರಿಕೆಟ್​​. ದಾಖಲೆಗಳ ದಮನಕಾರ. ಮನೋಜ್ಞ ಬ್ಯಾಟಿಂಗ್​ನಿಂದ ತನ್ನದೇ ಸಾಮ್ರಾಜ್ಯವನ್ನ ಕಟ್ಟಿ ಮೆರೆದಾಡುತ್ತಿದ್ದಾರೆ.
ಕೊಹ್ಲಿ ಬದುಕಿನ ಪ್ರತಿಯೊಂದು ಚಾಪ್ಟರ್​​​​​​​​​ ನಿಜಕ್ಕೂ ಬಲು ರೋಚಕ. ನಿಮಗೆ 2008ರ ನಂತರದ ಕೊಹ್ಲಿಯ ಕ್ರಿಕೆಟ್ ಅಧ್ಯಾಯ ಗೊತ್ತಿದೆ. ಆದ್ರೆ ಅದಕ್ಕೂ ಮೊದಲು? ಅದು ಅನ್​ರೀಡ್ ಚಾಪ್ಟರ್​. ವಿರಾಟ್ ಬಾಲ್ಯ, ಕ್ರಿಕೆಟ್ ಬದ್ಧತೆ, ಬಾಲ್ಯದ ಕನಸು ಹಾಗೂ ಜೀವನದ ಗುರಿ ಏನಾಗಿತ್ತು ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಚಿಕ್ಕಂದಿನಿಂದಲೇ ಸಿಕ್ಕಾಪಟ್ಟೆ ಹೈಪರ್​​​, ಡಾಮಿನೇಟ್​​​​ ಕ್ವಾಲಿಟಿ
1988 ರಲ್ಲಿ ದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಚಿಕ್ಕಂದಿನಿಂದಲೇ ಸಿಕ್ಕಾಪಟ್ಟೆ ಚುರುಕು. 9 ವರ್ಷದವನಾಗಿದ್ದಗಲೇ ಕ್ರಿಕೆಟ್ ಆಟದ ಬಗ್ಗೆ ಅಪಾರ ಛಲವಿತ್ತು.

ವಿರಾಟ್ ಕೊಹ್ಲಿ ಚಿಕ್ಕಂದಿನಲ್ಲಿ ಎಲ್ಲರಿಗಿಂತ ಭಿನ್ನವಾಗಿ ಕಾಣಿಸುತ್ತಿದ್ದರು. ತುಂಬಾ ಚುರುಕು ಮತ್ತು ನಾಚಿಕೆ ಸ್ವಭಾವಿ. ಆರಂಭದಿಂದಲೇ ಕಠಿಣ ಪರಿಶ್ರಮ. ಹೇಳಿದ್ದನ್ನು ಬೇಗನೆ ಗ್ರಹಿಸುತ್ತಿದ್ದರು. ಅಲ್ಲದೇ ಅಚಲವಾದ ಆತ್ಮವಿಶ್ವಾಸ ಹೊಂದಿದ್ದ.

ಕೊಹ್ಲಿ ನನ್ನ ಬಳಿ ಬಂದಾಗ ತನ್ನ ಸಮಾನ ವಯ್ಕಸರ ಜೊತೆ ಆಡುವಂತೆ ಹೇಳಿದೆ. ಆದರೆ ವಿರಾಟ್ ಅದಕ್ಕೆ ಒಪ್ಪಲಿಲ್ಲ. ಜೂನಿಯರ್ಸ್​ ನನ್ನನ್ನ ಔಟ್ ಮಾಡಲ್ಲ. ನಾನು ಸೀನಿಯರ್ ಜೊತೆನೇ ಆಡುತ್ತೇನೆ ಎಂದು ಹೇಳಿದ. ಒಮ್ಮೆ ಹಿರಿಯರ ಜೊತೆ ಆಡುವಾಗ ಎದೆಗೆ ಚೆಂಡು ಬಡಿಯಿತು. ಇದನ್ನು ತಿಳಿದ ಅವರ ತಾಯಿ ಜೂನಿಯರ್ಸ್​ ಆಡಿಸಿ ಎಂದು ಕೇಳಿಕೊಂಡರು. ಆದ್ರೆ ಕೊಹ್ಲಿ ಅದನ್ನ ತಿರಸ್ಕರಿಸಿದ್ರು. ಕೊಹ್ಲಿ ನಿಜಕ್ಕೂ ವಿಶೇಷ ಪ್ರತಿಭಾನ್ವಿತ ಮತ್ತು ದೇವರ ಉಡುಗೊರೆ.

ರಾಜ್​ಕುಮಾರ್ ಶರ್ಮಾ, ಕೊಹ್ಲಿ ಬಾಲ್ಯದ ಕೋಚ್​

ಆಲೂಗಡ್ಡೆ ತಿನಿಸು ಪ್ರಿಯ.. ಹಂಚಿಕೊಂಡು ತಿನ್ನುವ ಸ್ವಭಾವ..!

ಚಿಕ್ಕಂದಿನಲ್ಲೇ ಮಕ್ಕಳಿಗೆ ತಿನಿಸುಗಳೆಂದ್ರೆ ತುಂಬಾನೇ ಇಷ್ಟ. ಹಾಗೇನೆ ಕೊಹ್ಲಿಗೆ ಸಣ್ಣವರಾಗಿದ್ದಾಗ ಬಟಾಟೆ ತಿನಿಸುಗಳೆಂದ್ರೆ ಬಲು ಇಷ್ಟ. ಈ ಬಗ್ಗೆ ಕೊಹ್ಲಿ ಸ್ನೇಹಿತನ ತಾಯಿ ನೇಹಾ ಸೋಂದಿ ಹೇಳುತ್ತಾರೆ.

ಕೊಹ್ಲಿ ನಮ್ಮ ಮನೆಗೆ ಬಂದು ಆಂಟಿ ಏನು ಮಾಡ್ತಿದ್ದಿರಾ ಅಂತ ಅಡುಗೆ ಮನೆಗೆ ಬರುತ್ತಿದ್ದ. ಅವನಿಗೆ ಬಟಾಟೆ ತಿನಿಸು ತುಂಬಾನೇ ಇಷ್ಟ. ಅದನ್ನ ಒಂದು ಬಾಕ್ಸ್​​​ ಹಾಕಿಕೊಳ್ತಿದ್ದ. ನಂತರ ಹೊರಗಡೆ ಹೋಗಿ ಎಲ್ಲರ ಹುಡುಗರಿಗೂ ಹಂಚಿ ತಿನ್ನುತ್ತಿದ್ದ.

ನೇಹಾ ಸೋಂದಿ, ಕೊಹ್ಲಿ ಸ್ನೇಹಿತನ ತಾಯಿ

9ನೇ ವಯಸ್ಸಿನಲ್ಲೇ ಭಾರತ ಪರ ಆಡುವ ಕನಸು ಹೊತ್ತಿದ್ದ ಕೊಹ್ಲಿ
ಎಲ್ಲಾ ಕ್ರಿಕೆಟಿಗರ ಅಲ್ಟಿಮೇಟ್ ಗೇಮ್​​​ ಟೀಮ್ ಇಂಡಿಯಾ ಪ್ರತಿನಿಧಿಸೋದು. ಅಂತೆಯೇ ಕೊಹ್ಲಿಯ ಬಿಗ್ ಡ್ರೀಮ್ ಕೂಡ ಇದೇ ಆಗಿತ್ತು. ಆ ವಿಚಾರವನ್ನ ಕೊಹ್ಲಿ ಫ್ರೆಂಡ್​​ ಶಲಾಜ್ ಮೆಲುಕು ಹಾಕಿದ್ದಾರೆ.

ನನ್ನ ಹುಟ್ಟು ಹಬ್ಬದ ಸಲುವಾಗಿ ವಿರಾಟ್ ಕೊಹ್ಲಿಗೆ ಅಟೋಗ್ರಾಫ್​​​​ ಬರೆದುಕೊಡುವಂತೆ ಕೇಳಿದ್ದೆ. ಗುರಿ ಅನ್ನುವ ಲೈನ್​ ಮುಂದೆ ಭವಿಷ್ಯದಲ್ಲಿ ನಾನು ಭಾರತ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಬೇಕು ಎಂದು ಬರೆದುಕೊಟ್ಟಿದ್ದ.
ಶಲಾಜ್​​​​ ಸೋಂದಿ, ಕೊಹ್ಲಿ ಬಾಲ್ಯದ ಸ್ನೇಹಿತ

ಕನಸು ಕಂಡಂತೆ ಸ್ಟಾರ್ ನಟಿಯನ್ನೇ ವರಿಸಿದ ಟ್ರೂ ಡ್ರೀಮರ್​​..!
ವಿರಾಟ್ ಕೊಹ್ಲಿ ಎಂತಹ ಪರ್ಫೆಕ್ಷನಿಸ್ಟ್ ಅನ್ನೋದಕ್ಕೆ ಈ ಮಾತುಗಳು ಸಾಕ್ಷಿ. ಸಣ್ಣ ವಯಸ್ಸಿನಲ್ಲೇ ಕೊಹ್ಲಿ ದೊಡ್ಡ ನಟಿಯನ್ನ ಮದುವೆ ಆಗಬೇಕು ಅಂತ ಕನಸು ಕಂಡಿದ್ದರು.

ಮದನ್​ಲಾಕ್ ಅಕಾಡೆಮಿ ಹತ್ತಿರ ಒಂದು ಚಿತ್ರದ ಒಂದು ದೊಡ್ಡ ಪೋಸ್ಟರ್ ಕಾಣಿಸ್ತಿತ್ತು. ಅದನ್ನ ನೋಡಿದ ಕೊಹ್ಲಿ ನಾನು ಮುಂದೊಂದು ದಿನ ದೊಡ್ಡ ವ್ಯಕ್ತಿ ಆಗುತ್ತೀನಿ ಮತ್ತು ದೊಡ್ಡ ನಟಿಯನ್ನ ಮದುವೆ ಆಗುತ್ತೀನಿ ಎಂದು ಹೇಳಿದ್ದರು. ಕೊಹ್ಲಿ ಕನಸು ಸಾಕಾಗೊಂಡಿರುವುದಕ್ಕೆ ಖುಷಿ ತಂದಿದೆ.
ನೇಹಾ ಸೋಂದಿ, ಕೊಹ್ಲಿ ಸ್ನೇಹಿತನ ತಾಯಿ

ಏನೇಹೇಳಿ ಕೊಹ್ಲಿ ಬಾಲ್ಯದ ನೆನಪುಗಳು ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ. ಇನ್ನೂ ಕ್ರಿಕೆಟ್​ ಅಚೀವ್​ಮೆಂಟ್ ಚಾಪ್ಟರ್ ಅಂತೂ ವರ್ಣರಂಜಿತ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ ಬಾಲ್ಯದ ಜೀವನ ಹೇಗಿತ್ತು? ಯಾರಿಗೂ ಗೊತ್ತಿರದ ವಿಚಾರ ರಿವೀಲ್..!

https://newsfirstlive.com/wp-content/uploads/2023/05/VIRAT.jpg

Load More