ಆ ಜಾಹೀರಾತಿಗಾಗಿ ದ್ರಾವಿಡ್ ಹೀಗೆಲ್ಲಾ ಮಾಡಿಬಿಟ್ಟಿದ್ದರು
ಮುಂಬೈ ರಸ್ತೆ ಮಧ್ಯೆ ನಿಂತು ಕೂಗಾಡುವುದು ನಿಜಕ್ಕೂ ಮುಜುಗರ
ಟೀಮ್ ಇಂಡಿಯಾದಲ್ಲಿ ದ್ರಾವಿಡ್ ವ್ಯಕ್ತಿತ್ವ ಇಂದಿಗೂ ಮೇರು ಶಿಖರದಲ್ಲಿದೆ
ಮನುಷ್ಯ ಒಂದಿಲ್ಲೊಂದು ಕೆಲಸಕ್ಕೆ ಪಶ್ಚಾತ್ತಾಪ ಪಡೋದು ಕಾಮನ್. ಆದರೆ, ವ್ಯಕ್ತಿತ್ವದಲ್ಲಿ ಮೇರು ಶಿಖರ ಎನಿಸಿಕೊಳ್ಳುವ ದ್ರಾವಿಡ್, ಹಿಟ್ ಆಗಿರೋ ಜಾಹಿರಾತಿನಿಂದ ಈಗ ಪಶ್ಚಾತ್ತಾಪ ಪಡ್ತಿದ್ದಾರೆ ಅಂತೆ. ಅದ್ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ರಾಹುಲ್ ದ್ರಾವಿಡ್ ಅಂದ್ರೆ, ಮೊದಲಿಗೆ ನೆನಪಾಗೋದೇ ವ್ಯಕ್ತಿತ್ವ. ಕ್ರಿಕೆಟ್ ಎಂಬ ಜಂಟಲ್ಮೆನ್ ಗೇಮ್ನ ರಿಯಲ್ ಜಂಟಲಮನ್. ಕ್ರಿಕೆಟ್ ಹೊರತಾಗಿಯೂ ರಾಹುಲ್ ದ್ರಾವಿಡ್ರ ವ್ಯಕ್ತಿತ್ವ ಮೇರು ಶಿಖರದಲ್ಲಿತ್ತು. ಆದ್ರೆ, ದ್ರಾವಿಡ್ ಮಾಡಿದ್ದ ಖಾಸಗಿ ಜಾಹೀರಾತಿನಲ್ಲಿ ಇಂದಿರಾನಗರ್ ಕಾ ಗೂಂಡಾ ನಡೆದುಕೊಂಡ ರೀತಿ ನಂಬಲಾಸಾದ್ಯವಾಗಿತ್ತು. ನಿಜಕ್ಕೂ ಇದು ದ್ರಾವಿಡ್ ಮಾಡಿದ್ರಾ ಎಂಬ ಅಚ್ಚರಿಯ ಜೊತೆಗೆ ಪ್ರಶ್ನೆ ಹುಟ್ಟಿಹಾಕಿತ್ತು. ಆದ್ರೀಗ ಆ ಜಾಹೀರಾತು ಮಾಡಿದಕ್ಕೆ ಸ್ವತಃ ದ್ರಾವಿಡ್ ಪಶ್ಚಾತ್ತಾಪ ಪಡ್ತಿದ್ದಾರೆ.
ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿರುವ ರಾಹುಲ್ ದ್ರಾವಿಡ್, ತಾವು ಮಾಡಿರೋ ಅತ್ಯಂತ ಮುಜುಗರ ಕೆಲಸ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ. ಆ ಖಾಸಗಿ ಜಾಹೀರಾತಿನಿಂದ ದ್ರಾವಿಡ್ , ತಮ್ಮ ತಾಯಿಯಿಂದ ಪಾಸಿಟಿವ್ ಕಾಮೆಂಟ್ ಎಕ್ಸ್ಪೆಕ್ಟ್ ಮಾಡಿದ್ರಂತೆ. ಆದರೆ ದ್ರಾವಿಡ್ ತಾಯಿ ಇಂದಿಗೂ, ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಬ್ಯಾಟ್ನಿಂದ ಕಾರಿನ ಗಾಜು ಪುಡಿಗಟ್ಟಿದ್ದಾರೆ ಅನ್ನೋದನ್ನ ಒಪ್ಪಿಕೊಳ್ಳುತ್ತಲೇ ಇಲ್ವಂತೆ. ಅದರಲ್ಲೂ ಬಾಂಬೆ ಸ್ಟ್ರೀಟ್ನ ಮಧ್ಯೆ ನಿಂತು ಕಿರುಚಾಡುವುದು, ಕೂಗಾಡುವುದು ನಿಜಕ್ಕೂ ಮುಜುಗರ ಅಂತ ಹೇಳಿಕೊಂಡಿದ್ದಾರೆ ದ್ರಾವಿಡ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ