newsfirstkannada.com

ಶಿಸ್ತಿನ ಪಾಠ ಮಾಡೋರಿಗೆ ಲಾರಾ ಉತ್ತರ ಸಿಕ್ಕಾಪಟ್ಟೆ ಖಡಕ್ ಆಗಿರ್ತಿತ್ತು.. ಗಂಗೂಲಿ ಬಿಚ್ಚಿಟ್ರು ಸ್ಫೋಟಕ ಸತ್ಯ

Share :

02-08-2023

  ಕೆರಿಬಿಯನ್​ ಆಟಗಾರ ಬ್ರಯನ್ ಲಾರಾ ಬಿಗ್ ಬ್ಯಾಟರ್

  ಸೌರವ್​ ಗಂಗೂಲಿ, ಬ್ರಯನ್ ಲಾರಾ ಬಹುಕಾಲದ ಫ್ರೆಂಡ್ಸ್

  ಮ್ಯಾನೇಜರ್​ ಬಳಿ ಮಾತನಾಡೋಣ್ವಾ ಎಂದಿದ್ದ ಲಾರಾ

ಯಾರಾದ್ರೂ ಡಿಸಿಪ್ಲೀನ್​ ಪಾಠ ಮಾಡೋಕೆ ಹೋದ್ರೆ, ವಿಂಡೀಸ್​ ಲೆಜೆಂಡ್ ಬ್ರಯನ್​ ಲಾರಾ ಬ್ಯಾಟ್​ನಲ್ಲಿ ಉತ್ತರ ನೀಡ್ತಿದ್ರಂತೆ. ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಹೇಳಿರೋ ಈ ಇಂಟ್ರಸ್ಟಿಂಗ್​ ಕಥೆಯನ್ನ ನೋಡೋಣ ಇವತ್ತಿನ ಸಖತ್​ ಸ್ಟೋರಿಯಲ್ಲಿ..

ವೆಸ್ಟ್​ ಇಂಡೀಸ್​ ತಂಡದ ಮಾಜಿ ಕ್ರಿಕೆಟಿಗ ಬ್ರಯನ್​ ಲಾರಾ ಹಾಗೂ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಬಹುಕಾಲದ ಗೆಳೆಯರು. ಕ್ರಿಕೆಟ್​ ಆಡ್ತಿದ್ದ ದಿನದಿಂದ ಹಿಡಿದು ಕ್ರಿಕೆಟ್​ ಗುಡ್​ ಬೈ ಹೇಳಿ ಹಲವು ವರ್ಷಗಳ ಕಳೆದರೂ ಈಗಲೂ ಇಬ್ಬರ ಭಾಂದ್ಯವ್ಯ ಹಾಗೆ ಇದೆ. ಗೆಳೆಯ ಲಾರಾ ಬಗ್ಗೆ ಒಂದು ಇಂಟ್ರಸ್ಟಿಂಗ್​ ಮಾಹಿತಿಯನ್ನ ಗೆಳೆಯ ಗಂಗೂಲಿ ಈಗ ಹೇಳಿಕೊಂಡಿದ್ದಾರೆ. ಇದು ಲೆಜೆಂಡ್​ ಲಾರಾರ ಸಾಧನೆಯ ಕಥೆಯಲ್ಲ.. ಇನ್​ಡಿಸಿಪ್ಲೀನ್​ನ ಸ್ಟೋರಿ.

ವಿಂಡೀಸ್​ ಲೆಜೆಂಡ್ ಬ್ರಯನ್​ ಲಾರಾ

2002ರಲ್ಲಿ ಸೌರವ್​ ಗಂಗೂಲಿ ನಾಯಕತ್ವದ ಟೀಮ್​ ಇಂಡಿಯಾ ವೆಸ್ಟ್​ ಇಂಡೀಸ್​ ಟೂರ್​​ಗೆ ತೆರಳಿತ್ತು. ಆ ಸಮಯದಲ್ಲಿ ಬ್ರಯನ್​ ಲಾರಾರ ಅಶಿಸ್ತಿನ ಬಗ್ಗೆ ಕ್ರಿಕೆಟ್​ ಮಂಡಳಿ ಹಾಗೂ ಟೀಮ್​ ಮ್ಯಾನೇಜರ್​ಗೆ ಅಸಮಾಧಾನವಿತ್ತು. ಇದು ದೊಡ್ಡ ಸುದ್ದಿ ಕೂಡ ಆಗಿತ್ತು. ಆಗ ಗಂಗೂಲಿ, ಲಾರಾ ಬಳಿ ಇದನ್ನ ಹೇಗೆ ಹ್ಯಾಂಡೆಲ್​ ಮಾಡ್ತೀರಿ ಎಂದು ಕೇಳಿದ್ರಂತೆ. ಆಗ ಉತ್ತರಿಸಿದ್ದ ಲಾರಾ, ಒಂದು ಟೆಸ್ಟ್​ ಪಂದ್ಯಕ್ಕೂ ಮುನ್ನಾದಿನ ನಾನು ರಾತ್ರಿ ಒಂದು ಗಂಟೆಗೆ ರೂಮ್​ಗೆ ವಾಪಾಸ್​ ಆದೆ. ಆಗ ಕರೆ ಮಾಡಿದ್ದ ಮ್ಯಾನೇಜರ್​, ನೀವು ಹೀಗಿರಬೇಕು.. ಹಾಗಿರಬೇಕು ಎಂದು ಹೇಳ್ತಾ ಇದ್ರು.

ನಾಳೆ ಟೆಸ್ಟ್​ ಇದೆ ಇಷ್ಟು ಲೇಟಾಗಿ ಬಂದ್ರೆ ಹೇಗೆ ಎಂದೆಲ್ಲ ಕೇಳಿದ್ರು. ಅದಕ್ಕೆ ನೀವು ರೆಡಿಯಾದಾಗ ಕರೆಯಿರಿ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದೆ. ಆ ಬಳಿಕ ಮರುದಿನ ಟೆಸ್ಟ್​ ಪಂದ್ಯದಲ್ಲಿ ನಾನು ತ್ರಿಶತಕ ಸಿಡಿಸಿದೆ. ಆ ಬಳಿಕ ಮ್ಯಾನೇಜರ್​ ಬಳಿ ತೆರಳಿ ಈಗ ನಾವು ಮಾತನಾಡೋಣ್ವಾ ಅಂತಾ ಕೇಳಿದೆ ಎಂದು ಹೇಳಿದ್ರಂತೆ. ಇದನ್ನೆ ಗಂಗೂಲಿ ಲಾರಾಗೆ ಡಿಸಿಪ್ಲೀನ್​ ಪಾಠ ಮಾಡೋಕೆ ಹೋದ್ರೆ, ಬ್ಯಾಟ್​ನಲ್ಲಿ ಉತ್ತರ ನೀಡ್ತಾರೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಸ್ತಿನ ಪಾಠ ಮಾಡೋರಿಗೆ ಲಾರಾ ಉತ್ತರ ಸಿಕ್ಕಾಪಟ್ಟೆ ಖಡಕ್ ಆಗಿರ್ತಿತ್ತು.. ಗಂಗೂಲಿ ಬಿಚ್ಚಿಟ್ರು ಸ್ಫೋಟಕ ಸತ್ಯ

https://newsfirstlive.com/wp-content/uploads/2023/08/Sourav_Ganguly.jpg

Load More