newsfirstkannada.com

ಒಂದು ಕಾಲದಲ್ಲಿ ಸಚಿನ್​.. ಈಗ ವಿರಾಟ್​ ಕೊಹ್ಲಿ ಮೇಲೆ ಅವಲಂಬಿತವಾದ ಟೀಮ್​ ಇಂಡಿಯಾ; ಹೀಗಂದಿದ್ದೇಕೆ ಮಾಜಿ ಕ್ರಿಕೆಟರ್​

Share :

20-06-2023

  ವಿರಾಟ್ ಕೊಹ್ಲಿ ಈಗ ಮಾಡ್ರನ್​ ಡೇ ಕ್ರಿಕೆಟ್​​ನ ಲೆಜೆಂಡ್​ ಆಟಗಾರ

  ಟೀಮ್ ಇಂಡಿಯಾ ಕಂಪ್ಲೀಟ್​ ಆಗಿ ವಿರಾಟ್​ ಮೇಲೆ ಡಿಪೆಂಡ್..!

  13 ವರ್ಷಗಳ ಟ್ರ್ಯಾಕ್ ರೆಕಾರ್ಡ್​ ಬ್ಯಾಟಿಂಗ್​ ನೋಡಿದ್ರೆ ಕೊಹ್ಲಿ ಕಿಂಗ್​

ಕ್ರಿಕೆಟ್​ ಇದು ಟೀಮ್ ಗೇಮ್. ಇಲ್ಲಿ 11 ಮಂದಿಯ ಆಟವೂ ಮೋಸ್ಟ್​ ಇಂಪಾರ್ಟೆಂಟ್​. ಒಬ್ಬ ಸಣ್ಣ ಎಡವಟ್ಟು ಮಾಡಿದರೂ ಮ್ಯಾಚ್​ ಖತಂ ಆಗೋದು ಗ್ಯಾರಂಟಿ. ಅಂಥದ್ರಲ್ಲಿ ಇಡೀ ಟೀಮ್ ಒಬ್ಬ ಆಟಗಾರನ ಮೇಲೆ ಡಿಪೆಂಡ್ ಆಗ್ಬಿಟ್ರೆ, ಅದನ್ನ ಟೀಮ್​ ಗೇಮ್​ ಎನ್ನುವರೇ?

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್​ನ ಅಗ್ರಜ. ವಿಶ್ವದ ಎಲ್ಲ ತಂಡಗಳಿಗಿಂತ ಶ್ರೀಮಂತ ಬೋರ್ಡ್​ ನಮ್ದು. ವಿಶ್ವ ಕ್ರಿಕೆಟ್​ನ ಅಧಿಪತಿಯಾಗಿ ಮರೆಯುತ್ತಿರುವ ಟೀಮ್ ಇಂಡಿಯಾದಲ್ಲಿ ಸ್ಟಾರ್​ ಆಟಗಾರರ ದಂಡೇ ಇದೆ. ಆಟವೂ ಚನ್ನಾಗಿದೆ. ಆದ್ರೆ, ಐಸಿಸಿ ಟೂರ್ನಿ ಬಂದ್ರೆ ಅದೇನಾಗುತ್ತೋ ಗೊತ್ತಿಲ್ಲ. ಆರಂಭದಲ್ಲಿ ನಿರೀಕ್ಷೆ ಡಬಲ್​ ಇರುತ್ತೆ. ಆದ್ರೆ, ಅಂತ್ಯದಲ್ಲಿ ಎಲ್ಲವೂ ಠುಸ್​ ಪಟಾಕಿ ಆಗುತ್ತೆ.

90ರ ದಶಕದಲ್ಲಿ ಸಂಪೂರ್ಣ ಸಚಿನ್ ಮಯವಾಗಿದ್ದ ಟೀಮ್ ಇಂಡಿಯಾ ಅಂದು ಗೆಲುವಿಗಾಗಿ ಸದಾಕಾಲ ಸಚಿನ್​ ಮಂತ್ರ ಜಪಿಸ್ತಾ ಇತ್ತು. ಸಚಿನ್ ವಿಕೆಟ್ ಒಪ್ಪಿಸಿದ್ರೆ, ಟೀಮ್ ಇಂಡಿಯಾ ಕಥೆ ಮುಗಿಯಿತು ಎಂದು ಎಲ್ರೂ ಫಿಕ್ಸ್​ ಆಗ್ತಿದ್ರು. ಹೀಗೆ ಸೋಲು ಪಕ್ಕಾ ಅಂತಾ ಭವಿಷ್ಯ ನುಡಿದು ಟಿವಿ ಆಫ್ ಮಾಡಿ ಬೇಸರದಿಂದಲೇ ಹೊರ ನಡೀತಿದ್ದಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಈಗ ಆ ಕಾಲ ಬದಲಾಗಿದೆ. ಸಚಿನ್​ ಕೂಡ ಕ್ರಿಕೆಟ್​ ಗುಡ್​ ಬೈ ಹೇಳಿ ಆಗಿದೆ. ಆದ್ರೆ, ಟೀಮ್ ಇಂಡಿಯಾ ಪರಿಸ್ಥಿತಿ ಮಾತ್ರ ಹಾಗೆಯಿದೆ.

ಅಂದು ಸಚಿನ್.. ಇಂದು ವಿರಾಟ್​ ಕೊಹ್ಲಿ!
ಸಚಿನ್ ಯುಗಾಂತ್ಯದ ಬಳಿಕ ಯಾರಪ್ಪಾ ಎಂದು ಹುಟ್ಟಿದ ಪ್ರಶ್ನೆಗೆ ಉತ್ತರವೇ ವಿರಾಟ್​ ಕೊಹ್ಲಿ. ಸಚಿನ್ ಸಂಧ್ಯಾಕಾಲದ ವೇಳೆ ಉದಯಿಸಿದ ವಿರಾಟ್​, ಈಗ ಮಾಡ್ರನ್​ ಡೇ ಕ್ರಿಕೆಟ್​​ನ ಲೆಜೆಂಡ್​ ಅನ್ನಿಸಿಕೊಂಡಿದ್ದಾರೆ. ಅಂದು ಸಚಿನ್​ ಹೇಗೆ ಟೀಮ್​ ಇಂಡಿಯಾದ ಗೆಲುವಿನ ರೂವಾರಿಯಾಗಿದ್ರೋ, ಆ ಬಳಿಕ ವಿರಾಟ್​ ಆ ಕೆಲಸವನ್ನ ನಿಭಾಯಿಸ್ತಿದ್ದಾರೆ. ವಿರಾಟ್ ಆಡಿದ್ರೆ ಮಾತ್ರ ಗೆಲುವು ಎಂಬಷ್ಟರ ಮಟ್ಟಿಗೆ ನಿರೀಕ್ಷೆ ಹುಟ್ಟಿದೆ. ಟೀಮ್ ಇಂಡಿಯಾ ಕಂಪ್ಲೀಟ್​ ವಿರಾಟ್​ ಮೇಲೆ ಡಿಪೆಂಡ್ ಆಗಿದೆ. ಇದನ್ನ ಸ್ವತಃ ಬಿಸಿಸಿಐ ಮಾಜಿ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ.

‘ಭಾರತ ವಿರಾಟ್​ ಮೇಲೆ ಅವಲಂಬಿತ’
ವಿರಾಟ್ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಬಾಂಗ್ಲಾ, ಶ್ರೀಲಂಕಾ ಸೇರಿದಂತೆ ಎಲ್ಲ ದೇಶಗಳ ಎದುರು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್​ ಕೊಹ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು. ಏಕೆಂದರೆ ಇಂಡಿಯಾ ಸಂಪೂರ್ಣ ವಿರಾಟ್​ ಕೊಹ್ಲಿ ಮೇಲೆಯೇ ಅವಲಂಬಿತವಾಗಿದೆ.

ಸೌರವ್ ಗಂಗೂಲಿ, ಮಾಜಿ ಬಿಸಿಸಿಐ ಅಧ್ಯಕ್ಷ

ಸೌರವ್​ ಗಂಗೂಲಿ ಹೇಳಿರೋ ಮಾತು ಅಕ್ಷರಶಃ ಸತ್ಯ. ಕಳೆದೊಂದು ದಶಕದಿಂದ ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾಗೆ ನೀಡಿರುವ ಕೊಡುಗೆಯೆ ಇದಕ್ಕೆ ಸಾಕ್ಷಿಯಾಗಿದೆ. ಬಿಗ್​​ಸ್ಟೇಜ್​ಗಳಲ್ಲಿ, ಹೈ ಪ್ರೆಶರ್​ನಲ್ಲಿ ವಿರಾಟ್​ ಲೀಲಾಜಾಲವಾಗಿ ಬ್ಯಾಟ್​ ಬೀಸಿ ಅದೆಷ್ಟೋ ಪಂದ್ಯಗಳಲ್ಲಿ ಗೆಲುವಿನ ಉಡುಗೊರೆ ನೀಡಿದ್ದಾರೆ.

ಮೂರು ಫಾರ್ಮೆಟ್​ನಲ್ಲೂ ಅದ್ಭುತ ಪರ್ಫಾಮೆನ್ಸ್!
ಸದ್ಯ ಕ್ರಿಕೆಟ್​ನಲ್ಲಿ ಒಬ್ಬ ಆಟಗಾರ ಒಂದು ಫಾರ್ಮೆಟ್​ನ ಸ್ಪೆಷಲಿಸ್ಟ್​ ಅನ್ನೋ ಕಾನ್ಸೆಪ್ಟ್​ ಇದೆ. ಸಮಕಾಲಿನ ಶ್ರೇಷ್ಠ ಆಟಗಾರರಾದ ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್.. ಇವರೆಲ್ಲರ ಆಟ ಒಂದು ಫಾರ್ಮೆಟ್​ಗೆ ಮಾತ್ರ ಸಿಮೀತವಾಗಿದೆ. ಆದ್ರೆ, ಈ ವಿಚಾರದಲ್ಲಿ ಕೊಹ್ಲಿಗೆ ಯಾವುದೇ ಗಡಿಯಿಲ್ಲ. ಟೆಸ್ಟ್​, ಏಕದಿನ, ಟಿ20 ಹೀಗೆ ಯಾವುದೇ ಫಾರ್ಮೆಟ್​ ಆಗಿರಲಿ ಅಲ್ಲಿ ವಿರಾಟ್​ ಧಮ್ ತೋರಿಸ್ತಾರೆ.

ಬಲಾಢ್ಯ ತಂಡಗಳ ಅಂದ್ರೆ ತೊಡೆ ತಟ್ತಾರೆ.!
ಕ್ರಿಕೆಟರ್ಸ್​ ಅಂದ್ರೆ, ಬಲಾಢ್ಯ ತಂಡಗಳ ಎದುರು ಮಕಾಡೆ ಮಲಗ್ತಾರೆ. ಆದ್ರೆ, ಈ ವಿಚಾರವನ್ನ ವಿರಾಟ್​, ಚಾಲೆಂಜ್​ ಆಗಿ ಸ್ವೀಕರಿಸುತ್ತಾರೆ. ಪಿಚ್, ಬೌಲರ್, ಎದುರಾಳಿ ಯಾರೇ ಆಗಿರಲಿ ರಣ ಬೇಟೆಗಾರನಂತೆ ಮುನ್ನುಗ್ಗಿ ಹೊಡೆಯೋ ಖಯಾಲಿ ಕೊಹ್ಲಿಯದ್ದು.

ಕನ್ಸಿಸ್ಟೆನ್ಸಿಯಲ್ಲಿ ಕಿಂಗ್ ಕೊಹ್ಲಿಯೇ ಕಿಂಗ್..!
ಕಳೆದ 13 ವರ್ಷಗಳ ಟ್ರ್ಯಾಕ್ ರೆಕಾರ್ಡ್​ ನೋಡಿದ್ರೆ ವಿರಾಟ್​ ಕೊಹ್ಲಿಯಂತೆ ಸ್ಥಿರ ಪ್ರದರ್ಶನ ನೀಡಿದ ಮತ್ತೊಬ್ಬ ಆಟಗಾರ ಟೀಮ್ ಇಂಡಿಯಾದಲ್ಲೇ ಅಲ್ಲ, ವಿಶ್ವದಲ್ಲಿ ಸಿಗಲ್ಲ. ಹೀಗಾಗಿಯೇ ವಿರಾಟ್​ ವಿಶ್ವ ಸಾಮ್ರಾಟನಾಗಿ ಮೆರೆಯುತ್ತಿರುವುದು. 3 ವರ್ಷಗಳ ಕಾಲ ವಿರಾಟ್​, ಸೆಂಚೂರಿ ಲೆಸ್ ಆಗಿದ್ರೂ, ಟಾಪ್ ರನ್ ಸ್ಕೋರರ್​ ಲಿಸ್ಟ್​ನಲ್ಲಿ ಹೆಸರು ರಾರಾಜಿಸುತ್ತಿತ್ತು.

ಕೊಹ್ಲಿಗೆ ಕಂಡೀಷನ್​ ಅಪ್ಲೈ ಆಗಲ್ಲ.!
ಇಂಡಿಯಾ ಆಟಗಾರರು ಸ್ವದೇಶದಲ್ಲಿ ಹುಲಿಗಳು, ವಿದೇಶದಲ್ಲಿ ಇಲಿಗಳು ಅನ್ನೋ ಮಾತಿದೆ. ಪೇಪರ್​ ಮೇಲಿನ ಹುಲಿಗಳು ಅಂತಾನೂ ಕರೆಯೋದೂ ಉಂಟು. ಆದ್ರೆ, ವಿರಾಟ್​ ಕೊಹ್ಲಿ ಇದಕ್ಕೆ ವ್ಯತಿರಿಕ್ತ. ದೇಶ, ವಿದೇಶ ಎನ್ನದೆ ಬ್ಯಾಟ್ ಝಳಪಿಸಿದ್ದಾರೆ. ಇಂಗ್ಲೆಂಡ್, ಆಸಿಸ್​​ನಂತಹ ಟಫ್ ಕಂಡೀಷನ್ಸ್​ನಲ್ಲಿ ಸಿಡಲಿಮರಿಯಂತೆ ಸಿಡಿದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​. ವಿರಾಟ್​ ಕೊಹ್ಲಿ ವಿದೇಶದಲ್ಲಿ ಸಿಡಿಸಿರೋ 10,753 ರನ್ ಹಾಗೂ 35 ಶತಕಗಳು.

ಈಗಲೂ ಟೀಮ್​ ವಿರಾಟ್​ ಕೊಹ್ಲಿ ಮೇಲೆ ಡಿಪೆಂಡ್​ ಆಗೇ ಇದೆ. ಇದಕ್ಕೆ ಕಳೆದ ವರ್ಷ ಮುಕ್ತಾಯವಾದ ವಿಶ್ವಕಪ್​ ಟೂರ್ನಿಯೇ ಬೆಸ್ಟ್​ ಎಕ್ಸಾಂಪಲ್​. ಅದ್ರಲ್ಲೂ ಪಾಕ್​ ವಿರುದ್ಧ ಕೊಹ್ಲಿ ಆಡದೇ ಇದ್ದಿದ್ರೆ, ಇಂಡಿಯಾ ಹೀನಾಯ ಸೋಲಿಗೆ ಶರಣಾಗ್ತಿತ್ತು. ಇದೆಲ್ಲದರ ಹೊರತಾಗಿ ಸದ್ಯ ಕೊಹ್ಲಿಯ ಸ್ಥಾನಕ್ಕೇ ಬಂದಿರೋದು ಸುಳ್ಳಲ್ಲ. ಇಂಡೀಸ್​ ಸರಣಿಯಲ್ಲಿ ಕೊಹ್ಲಿ ಪರ್ಫಾಮ್ ಮಾಡಲಿ. ಸ್ಥಾನ ಭದ್ರಪಡಿಸಿಕೊಳ್ಳಲಿ ಅನ್ನೋದೆ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಒಂದು ಕಾಲದಲ್ಲಿ ಸಚಿನ್​.. ಈಗ ವಿರಾಟ್​ ಕೊಹ್ಲಿ ಮೇಲೆ ಅವಲಂಬಿತವಾದ ಟೀಮ್​ ಇಂಡಿಯಾ; ಹೀಗಂದಿದ್ದೇಕೆ ಮಾಜಿ ಕ್ರಿಕೆಟರ್​

https://newsfirstlive.com/wp-content/uploads/2023/06/VIRAT_KOHLI_PANDYA.jpg

Load More