newsfirstkannada.com

ರಿಷಬ್, KL ರಾಹುಲ್​, ಇಶಾನ್, ಸಂಜು ಇವರಲ್ಲಿ ತಂಡದ ಕೀಪರ್​ ಯಾರು?, ಇವರಿಗೆಲ್ಲ ಇದೆ ಒಂದೊಂದು ಪ್ರಾಬ್ಲಂ

Share :

03-07-2023

    ಪಂತ್​ ಫಿಟ್​ ಆಗ್ತಾರೆ​, ಕೀಪಿಂಗ್​ ಮಾಡಲ್ಲ ಅಂದ್ರೂ ಸಿಗುತ್ತಾ ಸ್ಥಾನ?

    ಇಶಾನ್​ ಕಿಶನ್​ -ಸಂಜು ಸ್ಯಾಮ್ಸನ್​ ನಡುವೆ ಯಾರಾಗ್ತಾರೆ ಕೀಪರ್

    ಟೀಮ್​ ಇಂಡಿಯಾಗೆ ವಿಕೆಟ್​ ಕೀಪರ್​ ಸ್ಥಾನದ್ದೆ ಚಿಂತೆ.. ಯಾಕೆ..?

ತವರಲ್ಲೇ ನಡೆಯುವ ಟೂರ್ನಿಯ ಶೆಡ್ಯೂಲ್​ ಅನೌನ್ಸ್​ ಆದ ಬೆನ್ನಲ್ಲೇ ಭರದ ಸಿದ್ಧತೆಗೆ ಅಣಿಯಾದ ಟೀಮ್​ ಇಂಡಿಯಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಸಿದ್ಧತೆ ಆರಂಭವಾಗಿ ಇನ್ನೂ ಒಂದು ವಾರವಾಗಿಲ್ಲ. ಅದರ ಬೆನ್ನಲೇ ಬಿಗ್ ಶಾಕ್​ ಎದುರಾಗಿದೆ. ರಿಷಭ್​ ಪಂತ್​ ಫಿಟ್​​ ಆಗ್ತಾರೆ ಅನ್ನೋ ಹುಮ್ಮಸ್ಸಿನಲ್ಲಿದ್ದ ಟೀಮ್​​​ ಮ್ಯಾನೇಜ್​ಮೆಂಟ್​​ & ಬಿಸಿಸಿಐಗೆ ದಿಕ್ಕೇ ತೋಚದಂತಾಗಿದೆ.

ಏಕದಿನ ವಿಶ್ವಕಪ್​ ಹಣಾಹಣಿಗೆ ಇನ್ನು ಕೇವಲ 94 ದಿನ ಮಾತ್ರ ಬಾಕಿ. ಮಹತ್ವದ ಟೂರ್ನಿಯ ಆಯೋಜನೆಯ ಹೊಣೆ ಹೊತ್ತಿರೋ ಬಿಸಿಸಿಐಗಿದು ಪ್ರತಿಷ್ಟೆಯ ಕಣ. ತವರಿನಲ್ಲಿ ನಡೆಯುವ ಟೂರ್ನಿಯಲ್ಲಿ ಕಪ್​ ಗೆಲುವಿಗೆ ಪಣ ತೊಟ್ಟಿದೆ. ಅದಕ್ಕಾಗಿ ಭರದ ಸಿದ್ಧತೆ ಆರಂಭವಾಗಿದೆ.

‘ಹಾಟ್​ ಫೇವರಿಟ್’​ ರೋಹಿತ್​ ಪಡೆಗೆ ಬಿಗ್​ ಶಾಕ್​.!

ತವರಿನಂಗಳದ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾನೇ ಕಪ್​ ಗೆಲ್ಲೋ ಹಾಟ್​ ಫೇವರಿಟ್​ ಆಗಿದೆ. ಮಹತ್ವದ ಟೂರ್ನಿಗೆ ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ ವಲಯದಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಆದ್ರೆ, ಶೆಡ್ಯೂಲ್​ ಅನೌನ್ಸ್​ ಆಗಿ ಇನ್ನೂ ಒಂದು ವಾರ ಆಗಿಲ್ಲ. ಅದಾಗಲೇ ಬಿಗ್​ ಶಾಕ್​ ಎದುರಾಗಿದೆ.

ಪಂತ್​ ಫಿಟ್​​ ಆಗ್ತಾರೆ.. ಕೀಪಿಂಗ್​ ಮಾಡಲ್ಲ..!

ವಿಶ್ವ ಟೆಸ್ಟ್​ ಚಾಂಪಿಯನ್ ಫೈನಲ್​​ ಸೋಲಿನ ನಿರಾಸೆಯ ಕಡಲಲ್ಲಿದ್ದ ಟೀಮ್​ ಇಂಡಿಯಾಗೆ ವಿಶ್ವಕಪ್​ ಟೂರ್ನಿಗೆ ಪಂತ್​ ಆರೋಗ್ಯದಲ್ಲಾದ ಚೇತರಿಕೆ ಸಮಾಧಾನ ತರಿಸಿತ್ತು. ಅಂದು ಕೊಂಡಿದ್ದಕ್ಕಿಂತ ಬೇಗನೆ ಚೇತರಿಸಿಕೊಳ್ತಾ ಇರೊ ಪಂತ್​, ವಿಶ್ವಕಪ್​ ಆಡೋದು ಪಕ್ಕಾ ಅಂತಾ ಎನ್​ಸಿಎ ತಿಳಿಸಿತ್ತು. ಬಿಸಿಸಿಐ ಕೂಡ ಇದೇ ಕಾನ್ಪಿಡೆನ್ಸ್​ನಲ್ಲಿತ್ತು. ಆದ್ರೆ, ಈಗ ಹೊರ ಬಿದ್ದಿರುವ ಮಾಹಿತಿ ಶಾಕ್​ ನೀಡಿದೆ. ವಿಶ್ವಕಪ್​ ಒಳಗೆ ಪಂತ್​ ಫಿಟ್​ ಆಗೋದು ಬಹುತೇಕ ಪಕ್ಕಾ. ಆದ್ರೆ, ಕೀಪಿಂಗ್​ ಮಾಡೋದು ಅಸಾಧ್ಯವಂತೆ.

ಭೀಕರ ಕಾರು ಅಪಘಾತದ ಬಳಿಕ ಕಳೆದ ಜನವರಿಯಲ್ಲಿ ಪಂತ್​ KNEE ಲಿಗಮೆಂಟ್​​ SURGERYಗೆ ಒಳಗಾಗಿದ್ರು. ಇದೀಗ ಅಂದುಕೊಂಡಿದ್ದ ಬೇಗ ಚೇತರಿಕೆ ಕಾಣ್ತಿರೋ ಪಂತ್​, ವಾಕಿಂಗ್​​ ಸ್ಟಿಕ್​ನ ಸಹಾಯವಿಲ್ಲದೆ ನಡೆದಾಡ್ತಿದ್ದಾರೆ. ಜೊತೆಗೆ ಮೆಟ್ಟಿಲುಗಳನ್ನೂ ಸರಾಗವಾಗಿ ಹತ್ತುತ್ತಿದ್ದಾರೆ. ಆದ್ರೆ, ಕೀಪಿಂಗ್​ ಮಾಡುವಷ್ಟು ಫಿಟ್ಟಾ ಅಂದ್ರೆ, ಅದಕ್ಕೆ ನೋ ಅಂತಿದೆ ಎನ್​ಸಿಎ. ವಿಶ್ವಕಪ್​ ಪಂತ್​ನ ಕಣಕ್ಕಿಳಿಸೋ ಲೆಕ್ಕಾಚಾರದಲ್ಲಿದ್ದ ಬಿಸಿಸಿಐ, ಟೀಮ್​ ಇಂಡಿಯಾಗೆ ಇದೇ ಹಿನ್ನಡೆಯಾಗಿ ಪರಿಣಮಿಸಿದೆ.

ಕೀಪಿಂಗ್​ ಮಾಡಲ್ಲ ಅಂದ್ರೂ ಪಂತ್​ಗೆ ಸಿಗುತ್ತಾ ಸ್ಥಾನ.?

ಸದ್ಯ ಟೀಮ್​ ಇಂಡಿಯಾಗೆ ವಿಕೆಟ್​ ಕೀಪರ್​​ ಬ್ಯಾಟ್ಸ್​ಮನ್​ದ್ದೇ ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ. ರಿಷಭ್​ ಪಂತ್​ರನ್ನ ಸಮರ್ಥವಾಗಿ ರಿಪ್ಲೇಸ್​ ಮಾಡೋ ಆಟಗಾರರಿಲ್ಲದೆ, ತಂಡ ಒದ್ದಾಡ್ತಿದೆ. ಇದೀಗ ಪಂತ್ ಫಿಟ್​ ಆಗಿ ಆಯ್ಕೆಗೆ ಲಭ್ಯರಾದ್ರೂ,​ ಕೀಪಿಂಗ್​ ಮಾಡಲ್ಲ ಅನ್ನೋದು ಬಹುತೇಕ ಕನ್​ಫರ್ಮ್​ ಆಗಿದೆ. ಹೀಗಾಗಿ ಸ್ಪೆಷಲಿಸ್ಟ್​​ ಬ್ಯಾಟ್ಸ್​ಮನ್​ ಆಗಿ ಪಂತ್​ಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ. ಯಾಕಂದ್ರೆ, ಮಿಡಲ್​ ಹಾಗೂ ಲೋವರ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ನಡೆಸಲು ಈಗಾಗಲೇ ಹಲ ಬ್ಯಾಟ್ಸ್​​ಮನ್​ಗಳು ರೆಡಿ ಇದ್ದಾರೆ.

ಯಾರಾಗ್ತಾರೆ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​.?

ಪಂತ್​ ವಿಕೆಟ್​ ಕೀಪಿಂಗ್​ ಮಾಡಲ್ಲ ಎಂದ ಮೇಲೆ, ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಕೀಪರ್​ ಯಾರು ಪ್ರಶ್ನೆ ಹುಟ್ಟಿದೆ. ಸದ್ಯ ಇಂಡೀಸ್​ ವಿರುದ್ಧದ ಸರಣಿಗೆ ಸೆಲೆಕ್ಟ್​ ಆಗಿರುವ ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​ ಸ್ಥಾನದ ರೇಸ್​​ನಲ್ಲಿರೋ ಫ್ರಂಟ್​ ರನ್ನರ್ಸ್​​. ಆದ್ರೆ, ಇವರಿಬ್ಬರೂ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಓಪನರ್ಸ್​ ಸಾಲಿಡ್​​ ರೆಕಾರ್ಡ್​ ಹೊಂದಿದ್ದಾರೆ. ಮಿಡಲ್​ ಆರ್ಡರ್​ನಲ್ಲಿ ಆಟ ಅಷ್ಟಕಷ್ಟೇ. ಹೀಗಾಗಿ ಇದು ಕೂಡ ಆಯ್ಕೆಯ ಗೊಂದಲ ಸೃಷ್ಟಿಸಿದೆ.

ಇದನ್ನು ಓದಿ: ಕೊನೆಗೂ ಬಿಟ್​ಕಾಯಿನ್ ತನಿಖೆಗೆ SIT ರಚಿಸಿದ ಸರ್ಕಾರ; ಯಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ..?

ಕನ್ನಡಿಗ ರಾಹುಲ್​ ಬೆಸ್ಟ್​ ಚಾಯ್ಸ್​​.!

ಸದ್ಯ ಪಂತ್​ ಜೊತೆಗೆ ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿರೋ ಕೆಎಲ್​ ರಾಹುಲ್​, ವಿಶ್ವಕಪ್​ ವೇಳೆಗೆ ಫಿಟ್​ ಆಗೋದು ಪಕ್ಕಾ. ಕೀಪಿಂಗ್​ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಬಲ್ಲ ಕನ್ನಡಿಗ, ಲೋವರ್​ ಆರ್ಡರ್​​ನಲ್ಲಿ ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. ಎಸ್ಪೆಷಲಿ ಏಕದಿನ ಕ್ರಿಕೆಟ್​ನಲ್ಲಿ ಸಾಲಿಡ್​​ ರೆಕಾರ್ಡ್​ ಹೊಂದಿದ್ದಾರೆ. ಹೀಗಾಗಿ ರಾಹುಲ್​ಗೆ ಮಣೆ ಹಾಕೋದೆ ಟೀಮ್​ ಮ್ಯಾನೇಜ್​ಮೆಂಟ್​ ಮುಂದೆ ಸದ್ಯಕ್ಕಿರೋ ಉತ್ತಮ ಆಯ್ಕೆ.

ಈ ವಿಶ್ವಕಪ್​ನ ಜೊತೆ ಜೊತೆಗೆ ಪಂತ್​ ಫುಲ್​ ಫಿಟ್​​ ಆದ್ರೂ ಲಾಂಗೆಸ್ಟ್​ ಫಾರ್ಮೆಟ್​​ ಟೆಸ್ಟ್​ಗೆ ಸೂಟ್​ ಆಗ್ತಾರಾ ಅನ್ನೋ ಪ್ರಶ್ನೆ ಹುಟ್ಟಿದೆ. ದಿನಕ್ಕೆ 90 ಓವರ್​ಗಳಷ್ಟು ಸುದೀರ್ಘ ಕಾಲ ಪಂತ್​ ಕೀಪಿಂಗ್​ ಮಾಡೋದು ಅನುಮಾನವೇ. ಹೀಗಾಗಿ ಮುಂದಿನ ಕೀಪರ್​​ ಯಾರು ಅನ್ನೋದ್ರ ಬಗ್ಗೆ ಬಿಸಿಸಿಐ, ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ ಈಗಲೇ ಯೋಚಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಿಷಬ್, KL ರಾಹುಲ್​, ಇಶಾನ್, ಸಂಜು ಇವರಲ್ಲಿ ತಂಡದ ಕೀಪರ್​ ಯಾರು?, ಇವರಿಗೆಲ್ಲ ಇದೆ ಒಂದೊಂದು ಪ್ರಾಬ್ಲಂ

https://newsfirstlive.com/wp-content/uploads/2023/07/KL_RAHUL_PANT.jpg

Load More