newsfirstkannada.com

ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದ ಹೆಂಡತಿ.. 3 ವರ್ಷದ ಬಳಿಕ ಕೇಸ್​ಗೆ ಬಿಗ್​ ಟ್ವಿಸ್ಟ್​!

Share :

Published June 19, 2024 at 6:10am

    ಗಂಡನ ಬಿಟ್ಟು ಜಿಮ್​ ಟ್ರೈನರ್ ಜೊತೆ ನಡೆದಿತ್ತು ಸಖತ್ ಲವ್ವಿ, ಡವ್ವಿ

    ಆಕ್ಸಿಡೆಂಟ್ ಮಾಡಿದ್ದರಿಂದ ವ್ಯಕ್ತಿಯ ಎರಡು ಕಾಲು ಕಟ್ ಆಗಿದ್ದವು

    ಗಂಡನನ್ನ ಕೊಲೆ ಮಾಡಲು ಯಾರಿಗೆ, ಎಷ್ಟು ಲಕ್ಷಕ್ಕೆ ಡೀಲ್ ಕೊಟ್ಟಿದ್ರು?

ಚಂಡೀಗಡ: 3 ವರ್ಷದ ಹಿಂದೆ ಪ್ಲಾನ್ ಮಾಡಿ ಗಂಡನನ್ನ ಕೊಲೆ ಮಾಡಿದ್ದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆಯು ಹರಿಯಾಣದ ಪಾಣಿಪತ್​ನಲ್ಲಿ 2021ರ ಅಕ್ಟೋಬರ್​ನಲ್ಲಿ ನಡೆದಿತ್ತು.

ವಿನೋದ್ ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಿಧಿ ಬರಾದ ಹಾಗೂ ಈಕೆಯ ಪ್ರಿಯಕರ ಜಿಮ್ ಟ್ರೈನರ್​ ಸುಮಿತ್‌ ಕೊಲೆ ಮಾಡಿದ ಆರೋಪಿಗಳು ಆಗಿದ್ದಾರೆ. ಈ ಇಬ್ಬರು ಆರೋಪಿಗಳು ಸೇರಿ 10 ಲಕ್ಷ ರೂಪಾಯಿಗೆ ಡ್ರೈವರ್ ದೇವ್ ಸೋನಾರ್ ಎನ್ನುವನಿಗೆ ಡೀಲ್ ಕೊಟ್ಟಿರುತ್ತಾರೆ. ಹೀಗಾಗಿ ಡ್ರೈವರ್​ ಕೊಲೆ ಎಂದು ಗೊತ್ತಾಗದಂತೆ ಸಾಯಿಸಲು ಪಂಜಾಬ್​ ರಿಜಿಸ್ಟ್ರೇಷನ್ ಇರುವ ಪಿಕಪ್ ಟ್ರಕ್ ಅನ್ನು ಖರೀದಿ ಮಾಡುತ್ತಾನೆ. ಅದರಂತೆ ಒಂದು ದಿನ ಪ್ಲಾನ್ ಮಾಡಿ ಪಿಕಪ್ ಟ್ರಕ್ ಅನ್ನು ವಿನೋದ್ ಮೇಲೆ ಹರಿಸಿ ಬಿಡುತ್ತಾನೆ. ಇದರಿಂದ ಎರಡು ಕಾಲುಗಳನ್ನು ಕಳೆದುಕೊಂಡು ಜೀವಂತವಾಗಿ ಉಳಿಯುತ್ತಾನೆ. ಕೇಸ್​ನಿಂದ ಡ್ರೈವರ್ ಜೈಲು ಪಾಲಾಗುತ್ತಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

ಬಳಿಕ ಜೈಲಿನಿಂದ ಜಾಮೀನು ಮೇಲೆ ಹೊರ ಬಂದ ಆರೋಪಿ ಡ್ರೈವರ್​​ ಕೈಗೆ ಪತ್ನಿ, ಪ್ರಿಯಕರ ಸೇರಿ ಗನ್ ಕೊಟ್ಟು ವಿನೋದ್​​ನನ್ನ ಕೊಲೆ ಮಾಡುವಂತೆ ಕಳುಹಿಸುತ್ತಾರೆ. ಅದರಂತೆ ಕ್ಷಮೆ ಕೇಳುವಂತೆ ಮನೆಗೆ ಹೋಗಿ ವಿನೋದ್ ಮೇಲೆ 2 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಯಾವಾಗ ಗಂಡನ ಹತ್ಯೆಯಾಯಿತೋ ಆವಾಗಿನಿಂದ ನಿಧಿ ತನ್ನ ಮಕ್ಕಳನ್ನು ಮಾವನ ಹತ್ತಿರ ಬಿಟ್ಟು ಪ್ರಿಯಕರ ಜೊತೆ ಓಡಾಡಲು ಶುರು ಮಾಡಿದ್ದಾಳೆ. ಹಾಲಿಡೇ ಟ್ರಿಪ್​​ಗಳೆಲ್ಲ ಎಂಜಾಯ್ ಮಾಡಿದ್ದಾಳೆ. ಅಲ್ಲದೇ ಮಾವ, ಮಕ್ಕಳು ಸಮೇತ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲು ಮುಂದಾಗಿದ್ದರು. ಇದರಿಂದ ಪೊಲೀಸರಿಗೆ ಅನುಮಾನ ಬಂದು ಇವರಿಗೆ ಯಾರು ಹಣ ಕೊಡುತ್ತಿದ್ದಾರೆ ಎಂದು ತನಿಖೆ ಮಾಡಿದಾಗ ಪ್ರಿಯಕರ ಸುಮಿತ್ ಇದರಲ್ಲಿ ಇರುವುದು ಗೊತ್ತಾಗಿದೆ.

ಬಳಿಕ ಸುಮಿತ್​​ನನ್ನ ಬಂಧಿಸಿ ವಿಚಾರಣೆ ಮಾಡಿದಾಗ 2021ರಲ್ಲಿ ನಿಧಿ ನನಗೆ ಜಿಮ್​ನಲ್ಲಿ ಪರಿಚಯ ಆಗುತ್ತಾಳೆ. ಬಳಿಕ ಇಬ್ಬರು ಆಗಾಗ ಸೇರುತ್ತಿದ್ದೇವೆ. ಬೇರೆ ಬೇರೆ ಕಡೆ ಸುತ್ತಾಡುತ್ತಿದ್ದೇವು. ಈ ವಿಷ್ಯ ಗೊತ್ತಾಗಿ ವಿನೋದ್, ಪತ್ನಿಯನ್ನ ಪ್ರಶ್ನೆ ಮಾಡುತ್ತಿದ್ದನು. ಇದರಿಂದ ಇಬ್ಬರು ಸೇರಿ ಪ್ಲಾನ್ ಮಾಡಿ ವಿನೋದ್​​ನನ್ನ ಕೊಲೆ ಮಾಡಿದೇವು ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಕರನ ಜತೆ ಸೇರಿ ಗಂಡನನ್ನೇ ಕೊಂದ ಹೆಂಡತಿ.. 3 ವರ್ಷದ ಬಳಿಕ ಕೇಸ್​ಗೆ ಬಿಗ್​ ಟ್ವಿಸ್ಟ್​!

https://newsfirstlive.com/wp-content/uploads/2024/06/HARYANA_1.jpg

Load More