newsfirstkannada.com

ಅಮೆರಿಕದಲ್ಲಿ ನೆಲೆಸಿರೋ ಭಾರತೀಯರೇ ಇವರ ಟಾರ್ಗೆಟ್​​; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

01-08-2023

    ಅಮೆರಿಕಾದಲ್ಲಿ ನೆಲೆಸಿರೋ ಭಾರತೀಯರಿಗೆ ಭಯವೋ ಭಯ

    ಫೆಡರಲ್ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಕಡೆಯಿಂದ ಎಚ್ಚರಿಕೆ

    ಮೆಸಾಚ್ಯೂಸೆಟ್​ನ ಹಲವೆಡೆ ಒಂದೇ ಮಾದರಿಯ ಕೇಸ್‌ ಪತ್ತೆ

ವಾಷಿಂಗ್ಟನ್‌: ಅಮೆರಿಕಾದಲ್ಲಿ ನೆಲೆಸಿರೋ ಭಾರತೀಯರಿಗೆ ನಿಜಕ್ಕೂ ಭಯ ಶುರುವಾಗಿದೆ. ಮೆಸಾಚ್ಯೂಸೆಟ್​ನ ಬಿಲೆರಿಕಾ, ನಾಟಿಕ್​​, ವೆಸ್ಟೊನ್​, ವೆಲೆಸ್ಲೆ, ಈಸ್ಒನ್​ ಮತ್ತು ನಾರ್ಥ್​​ ಆಟ್ಲೆಬೊರೊ ಪ್ರದೇಶದಲ್ಲಿ ಒಂದೇ ಮಾದರಿಯ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅಮೆರಿಕಾದ FBI ಅಂದ್ರೆ ಫೆಡರಲ್ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಕೂಡ ಭಾರತೀಯರಿಗೆ ಒಂದು ಎಚ್ಚರಿಕೆಯನ್ನು ನೀಡಿದೆ. ದರೋಡೆಕೋರರು ನಿಮ್ಮ ಮನೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಹುಷಾರಾಗಿರಿ ಎನ್ನಲಾಗಿದ್ದು, ಅನಿವಾಸಿ ಭಾರತೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರಿಗಷ್ಟೇ ಅಲ್ಲ ದಕ್ಷಿಣ ಏಷ್ಯಾದ ಮನೆಗಳನ್ನೂ ದರೋಡೆಕೋರರು ಟಾರ್ಗೆಟ್ ಮಾಡಿದ್ದಾರಂತೆ. ಅಂದ್ರೆ, ಭಾರತೀಯರು, ದಕ್ಷಿಣ ಏಷ್ಯಾದ ನಿವಾಸಿಗಳು ಮನೆಯಿಂದ ಯಾವಾಗ ಹೊರಗಡೆ ಹೋಗ್ತಾರೆ. ಯಾವಾಗ ಮನೆಗೆ ಹೋಗ್ತಾರೆ ಅನ್ನೋದನ್ನ ದರೋಡೆಕೋರರ ಗ್ಯಾಂಗ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮನೆ ಮಾಲೀಕರು ಇಲ್ಲದ ಸಮಯ ನೋಡಿ ಮನೆಗೆ ಕನ್ನ ಹಾಕುತ್ತಿದ್ದಾರೆ ಎನ್ನಲಾಗಿದೆ. ಹೀಗೆ ಹಲವು ದರೋಡೆ ಪ್ರಕರಣಗಳು ದಾಖಲಾಗಿದ್ದು, ಕಳ್ಳರಿಗೆ ಅನಿವಾಸಿ ಭಾರತೀಯರು, ದಕ್ಷಿಣ ಏಷ್ಯಾ ಮೂಲದ ನಿವಾಸಗಳೇ ಟಾರ್ಗೆಟ್ ಆಗಿರೋದು ಸ್ಪಷ್ಟವಾಗಿದೆ. ಅಮೆರಿಕಾದ ಮೆಸಾಚ್ಯೂಸೆಟ್​ನ ಹಲವೆಡೆ ಒಂದೇ ಮಾದರಿಯ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ 2 ವರ್ಷ ಜೈಲು ಶಿಕ್ಷೆ!

ಯುಎಸ್‌ ಮಾಧ್ಯಮಗಳ ವರದಿ ಪ್ರಕಾರ ಅನಿವಾಸಿ ಭಾರತೀಯರ ಮನೆಗಳೇ ದರೋಡೆಕೋರರ ಟಾರ್ಗೆಟ್ ಆಗಿದೆಯಂತೆ. ಅದರಲ್ಲೂ ಯಾರ ಮನೆಯಲ್ಲಿ ಬೆಲೆ ಬಾಳುವ ಒಡವೆ, ಆಭರಣಗಳು ಇರುವುದನ್ನು ತಿಳಿದು ದರೋಡೆ ಮಾಡಲಾಗುತ್ತಿದೆ. ಭಾರತೀಯರು ಮೊದಲೇ ಆಭರಣ ಪ್ರಿಯರು. ಭಾರತದಲ್ಲೇ ಇರಲಿ, ಅಮೆರಿಕಾದಲ್ಲೇ ಇರಲಿ. ಭಾರತೀಯರಿಗೆ ಬಂಗಾರ ಅಂದ್ರೆ ಅಚ್ಚುಮೆಚ್ಚು. ಈ ಬಂಗಾರದ ವ್ಯಾಮೋಹವೇ ಇದೀಗ ಅಮೆರಿಕಾ ಕಳ್ಳರ ಕಣ್ಣು ಕುಕ್ಕಿದೆ. ಅಂದ್ರೆ ಅಮೆರಿಕಾದ ದರೋಡೆಕೋರರ ಗ್ಯಾಂಗ್ ಭಾರತೀಯರ ಮನೆಯಲ್ಲಿಟ್ಟಿರುವ ಚಿನ್ನ, ಬಂಗಾರವನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೊರಗೆ ಹೋಗುತ್ತಿದ್ದಂತೆ ಯಾವುದೇ ಸುಳಿವು ಬಿಟ್ಟು ಕೊಡದಂತೆ ಬಂಗಾರವನ್ನು ಕದ್ದು ಮಾಯವಾಗುತ್ತಿದ್ದಾರೆ. ಈ ದರೋಡೆಕೋರರ ಬೆನ್ನು ಬಿದ್ದಿರುವ ತನಿಖಾ ಸಂಸ್ಥೆಗಳಿಗೆ ಈ ಸ್ಫೋಟಕ ವಿಷಯ ಗೊತ್ತಾಗಿದೆ. ಫೆಡರಲ್ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್ ಅಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಭಾರತೀಯರು ಈ ದರೋಡೆ ಗ್ಯಾಂಗ್ ಅನ್ನು ಮಟ್ಟ ಹಾಕುವಂತೆ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ನೆಲೆಸಿರೋ ಭಾರತೀಯರೇ ಇವರ ಟಾರ್ಗೆಟ್​​; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/08/US-Thievs.jpeg

Load More