newsfirstkannada.com

ಮತ್ತೆ ಶುರುವಾಗಲಿದೆ ಇಂದಿರಾ ಕ್ಯಾಂಟೀನ್​​.. ಬಡವರ ಹೊಟ್ಟೆ ತುಂಬಿಸೋದು ನಮ್ಮ ಕಾರ್ಯ ಎಂದ ಸಿಎಂ ಸಿದ್ದು!

Share :

20-05-2023

    ಮತ್ತೆ ಶುರುವಾಗಲಿದೆ ಇಂದಿರಾ ಕ್ಯಾಂಟೀನ್​​..!

    ಬಡವರ ಹೊಟ್ಟೆ ತುಂಬಿಸೋದು ನಮ್ಮ ಕಾರ್ಯ- ಸಿಎಂ

    ಕೇವಲ 10 ರೂಪಾಯಿಗೆ ಉಚಿತ ಊಟ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ ಮತ್ತೆ ಪುನಾರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಕೊರೊನಾದ ಸಂದರ್ಭದಲ್ಲಿ ಬಡಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಆ ವೇಳೆ ಇಂದಿರಾ ಕ್ಯಾಂಟೀನ್​ನಲ್ಲಿ​ ದಿನದ ಮೂರು ಹೊತ್ತು ಕೇವಲ 10 ರೂಪಾಯಿಗೆ ಉಚಿತವಾಗಿ ಊಟ ನೀಡಲಾಗಿತ್ತು. ಅದೇಷ್ಟೋ ಜನರು ಇಂದಿರಾ ಕ್ಯಾಂಟೀನ್​ನನ್ನು ಬಡವರ ಬಂಧು ಎಂದು ಕರೆಯುತ್ತಿದ್ದರು.

ಕೆಲ ದಿನಗಳ ಹಿಂದೆ ಅಲ್ಲಲ್ಲಿ ಇಂದಿರಾ ಕ್ಯಾಂಟೀನ್​​​​​​​​​​​​ಗಳನ್ನು ಬಂದ್​​ ಮಾಡಿಸಲಾಗಿತ್ತು. ಕ್ಯಾಂಟೀನ್​​ಗಳನ್ನು ಬಂದ್ ಮಾಡಿಸಿದ್ದಕ್ಕೆ ಬಡ ಜನರಿಗೆ ತೊಂದರೆ ಸಹ ಆಗಿತ್ತು. ಹೀಗಾಗಿ ನಗರದಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು, ವಲಸಿಗರು, ಬಡ ಜನರು, ಸರ್ಕಾರಕ್ಕೆ ಹಿಡಿ​​ ಶಾಪ ಹಾಕುತ್ತಿದ್ದರು. ಇದೀಗ ಹೊಸ ಸರ್ಕಾರ ರಚನೆಯಾಗಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಎಲ್ಲೆಡೆ ಸ್ಟಾಪ್​ ಆಗಿದ್ದ ಇಂದಿರಾ ಕ್ಯಾಂಟೀನ್​ಗೆ ಮರುಜೀವ ದೊರೆಯುವ ನಿರೀಕ್ಷೆ ಇದೆ.

ಇಂದಿರಾ ಕ್ಯಾಂಟೀನ್ ಶುರು ಆಗಿದ್ದು ಹೇಗೆ..?​​

2017ರ ಆಗಸ್ಟ್‌ 16ರಂದು ಇಂದಿರಾ ಕ್ಯಾಂಟೀನ್‌ಗಳು ಶುರುವಾದವು. ಕೇವಲ 10 ರೂಪಾಯಿಗೆ ಉಚಿತವಾಗಿ ಊಟ ನೀಡಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 171 ಇಂದಿರಾ ಕ್ಯಾಂಟೀನ್​​ಗಳನ್ನು ಆರಂಭಿಸಲಾಗಿತ್ತು. ಎಲ್ಲಾ ಜನರಿಗೆ ಗುಣಮಟ್ಟದ ಶುಚಿತ್ವದ ಆಹಾರ ನೀಡಲಾಗಿತ್ತು. ಇನ್ನು ಈ ಇಂದಿರಾ ಕ್ಯಾಂಟಿನ್‌ಗೆ ಮಾಜಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚಾಲನೆ ನೀಡಿದ್ದರು. ಜೊತೆಗೆ ಊಟ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸದ್ಯ ಕರ್ನಾಟಕ ಕುರುಕ್ಷೇತ್ರದಲ್ಲಿ ಕಾಂಗ್ರೆಸ್​​​ ಭರ್ಜರಿ ಗೆಲುವು ದಾಖಲಿಸಿದೆ. 136 ಸ್ಥಾನಗಳಲ್ಲಿ ಗೆದ್ದು ಅಭೂತಪೂರ್ವ ಗೆಲುವು ದಾಖಲಿಸಿದೆ. ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ ಅವರು, ಇಂದಿರಾ ಕ್ಯಾಂಟೀನ್​ಗಳನ್ನ ಮರು ಪ್ರಾರಂಭ ಮಾಡ್ತೇವೆ. ಎಲ್ಲಾ ಇಂದಿರಾ ಕ್ಯಾಂಟೀನ್​ಗಳ ಲಿಸ್ಟ್​ ತರಲು ಹೇಳಿದ್ದೇನೆ. ಮುಂದಿನ ಕ್ಯಾಬಿನೆಟ್​ನಲ್ಲಿ ಇದರ ಬಗ್ಗೆ ನಿರ್ಧಾರವಾಗುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ಬಂದ್​​ ಆಗಿದ್ದ ಇಂದಿರಾ ಕ್ಯಾಂಟೀನ್​ಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತವೆ. ಈ ಸುದ್ದಿಯನ್ನು ಕೇಳಿದ ಜನ ಸಾಮಾನ್ಯರು ಫುಲ್​​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಶುರುವಾಗಲಿದೆ ಇಂದಿರಾ ಕ್ಯಾಂಟೀನ್​​.. ಬಡವರ ಹೊಟ್ಟೆ ತುಂಬಿಸೋದು ನಮ್ಮ ಕಾರ್ಯ ಎಂದ ಸಿಎಂ ಸಿದ್ದು!

https://newsfirstlive.com/wp-content/uploads/2023/05/cantten-1.jpg

Load More