/newsfirstlive-kannada/media/post_attachments/wp-content/uploads/2024/11/SALAMN-KHAN-1.jpg)
ಎಲ್ಲರಿಗೂ ಒಂದು ಕುತೂಹಲವಿದೆ. ಈ ವರ್ಷದ ಅತ್ಯಂತ ಹೆಚ್ಚು ಟ್ಯಾಕ್ಸ್ ಪೇ ಮಾಡಿದ ಸೆಲೆಬ್ರೆಟಿ ಯಾರು ಅನ್ನೋದು. ಇತ್ತೀಚಿನ ಫಾರ್ಚೂನ್ ಇಂಡಿಯಾ ವರದಿಯ ಪ್ರಕಾರ 2024ರ ಅತಿಹೆಚ್ಚು ಆಸ್ತಿ ಮಾಡಿದ ನಟ ನಟಿಯರು ಯಾರು ಎಂಬುದು ತಿಳಿದು ಬಂದಿದೆ. ಅವರು ಈ ವರ್ಷ ಎಷ್ಟು ಟ್ಯಾಕ್ಸ್ ಕಟ್ಟಿದ್ದಾರೆ ಎಂಬುದು ಕೂಡ ತಿಳಿದು ಬಂದಿದೆ. ಈ ಬಾರಿ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ಎರಡನೇ ಸೆಲೆಬ್ರೆಟಿ ಯಾರು ಅಂತ ನೋಡಿದ್ರೆ ಅದು ಅಮಿತಾಬ್ ಬಚ್ಚನ್ ಅಲ್ಲ, ವಿರಾಟ್ ಕೊಹ್ಲಿ ಅಲ್ಲ, ಕಪಿಲ್ ಶರ್ಮಾ ಅಲ್ಲ ಹಾಗಾದ್ರೆ ಯಾರು ಅಂತ ನೋಡಿದ್ರೆ ಅದು ದಕ್ಷಿಣ ಭಾರತದ ನಟ. ಪಕ್ಕದ ತಮಿಳುನಾಡಿನಲ್ಲಿ ದಳಪತಿ ಅಂತಲೇ ಖ್ಯಾತಿ ಪಡೆದಿರುವ ನಟ ವಿಜಯ್​.
ಇದನ್ನೂ ಓದಿ:2025ರ ಜ.22ಕ್ಕೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನಾಚರಣೆ ಇಲ್ಲ; ಕಾರಣವೇನು?
/newsfirstlive-kannada/media/post_attachments/wp-content/uploads/2024/11/VIJAY.jpg)
ಸದ್ಯ ಭಾರತೀಯ ಸೆಲೆಬ್ರೆಟಿಗಳಲ್ಲಿ ಅತಿಹೆಚ್ಚು ಟ್ಯಾಕ್ಸ್ ಪೇ ಮಾಡಿದ ಈ ವರ್ಷದ ನಟ ಅಂದ್ರೆ ಅದು ಶಾರುಖ್ ಖಾನ್ ಒಟ್ಟು 92 ಕೋಟಿ ರೂಪಾಯಿ ಟ್ಯಾಕ್ಸ್​ ಕಟ್ಟಿದ್ದಾರೆ. ಶಾರುಖ್ ಅದರ ನಂತರದ ಸಾಲಿಗೆ ಬಂದವರೆ ದಳಪತಿ ವಿಜಯ್​, ಅವರು 2023-24ರ ಸಾಲಿನಲ್ಲಿ 80 ಕೋಟಿ ರೂಪಾಯಿ ಟ್ಯಾಕ್ಸ್​ನ್ನು ಸರ್ಕಾರಕ್ಕೆ ಕಟ್ಟಿದ್ದಾರೆ.
ವಿಜಯ್ ಇದೇ ಮೊದಲ ಬಾರಿ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಂತರ ಬರುವವರು ಸಲ್ಮಾನ್ ಖಾನ್, 75 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ. ನಂತರ ಅಮಿತಾಬ್ ಬಚ್ಚನ್ 71 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದಾರೆ. ಇನ್ನು ಶಾಹಿದ್ ಕಪೂರ್, ಅಜಯ್ ದೇವಗನ್​, ರಣಬೀರ್ ಕಪೂರ್, ಹೃತಿಕ್ ರೋಷನ್ ಇವರು ಕೂಡ ಟ್ಯಾಕ್ಸ್ ಕಟ್ಟಿದವರ ಟಾಪ್ ಲಿಸ್ಟ್​ನಲ್ಲಿದ್ದಾರೆ.
ಬಾಲಿವುಡ್ ನಟಿಯರಲ್ಲಿ ಕರೀನಾ ಕಪೂರ್​ ಈ ವರ್ಷ ಒಟ್ಟು 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ.ಇದು ಅವರನ್ನು ಬಾಲಿವುಡ್ ಚಿತ್ರರಂಗದ ಅತಿ ಶ್ರೀಮಂತ ನಟಿಯೆಂದು ಗುರುತಿಸಿದೆ. ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದಲ್ಲಿ ವಿರಾಟ್ ಕೊಹ್ಲಿ ಈ ಬಾರಿ ಅತಿಹೆಚ್ಚು ಆದಾಯ ತೆರಿಗೆಯನ್ನ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಟ್ಟು 66 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಸುಮಾರು 38 ಕೋಟಿ ರೂಪಾಯಿಯಷ್ಟು ಆದಾಯ ತೆರಿಗೆಯಲ್ಲಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us