newsfirstkannada.com

Video: ವಾರೆವ್ಹಾ..! ಬೆಂಗಳೂರಲ್ಲಿ ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ; ಟ್ವೀಟ್ ಮಾಡಿ​ ಖುಷಿ ವ್ಯಕ್ತಪಡಿಸಿದ ಮೋದಿ

Share :

18-08-2023

    ಇದು ಭಾರತದ ಪ್ರಥಮ 3D ಮುದ್ರಿತ ಅಂಚೆ ಕಚೇರಿ

    3D ಟೆಕ್ನಾಲಜಿ ಬಳಸಿ ನಿರ್ಮಿಣವಾಗಿರುವ ಕಟ್ಟಡ

    L & T ಕಂಪನಿ ಸಹಯೋಗದಲ್ಲಿ ನಿರ್ಮಿಸಲಾದ ಕಟ್ಟಡ

ಹಲಸೂರಿನ ಕೇಂಬ್ರಿಡ್ಜ್ ಲೇಔಟ್​​ನಲ್ಲಿ ನಿರ್ಮಾಣವಾಗಿರುವ ಭಾರತದ ಪ್ರಥಮ 3D ಮುದ್ರಿತ ಅಂಚೆ ಕಚೇರಿಗೆ ರೈಲ್ವೆ-ಸಂವಹನ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದ್ದಾರೆ. ಅಂಚೆ ಕೇಂದ್ರ ಕಚೇರಿಯಲ್ಲಿ ವಿಡಿಯೋ ಲಿಂಕ್ ಕ್ಲಿಕ್​ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಪ್ರಪ್ರಥಮ ಬಾರಿಗೆ 3D ಟೆಕ್ನಾಲಜಿ ಬಳಸಿ ನಿರ್ಮಿಣವಾಗಿರುವ ಕಟ್ಟಡ ಇದಾಗಿದೆ. ಮಾನವರಹಿತವಾಗಿ ರೋಬೋ ಮೂಲಕ ನಿರ್ಮಾಣ ಮಾಡಲಾಗಿದೆ. L & T ಕಂಪನಿ ಸಹಯೋಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಬರೀ 45 ದಿನಗಳಲ್ಲಿ 3D ಅಂಚೆ ಕಚೇರಿ ನಿರ್ಮಾಣ ಮಾಡಲಾಗಿದೆ.

IIT ಚೆನ್ನೈ ಮೂಲಕ ಮಾರ್ಗದರ್ಶನ ಮತ್ತು ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ರೋಬೋಟಿಕ್ ಪ್ರಿಂಟರ್ ಮೂಲಕ ಕಟ್ಟಡ ನಿರ್ಮಾಣ ಮಾಡಲಾಗಿದೆ. 1021 ಚದರ ಅಡಿ ವಿಸ್ತೀರ್ಣದಲ್ಲಿರುವ ಕಟ್ಟಡ ಇದಾಗಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಇದರಿಂದ ನಿರ್ಮಾಣ ವೆಚ್ಚ, ಸಮಯ ಉಳಿತಾಯ ಮಾಡಿದ್ದಾರೆ. ಸಾಮಾನ್ಯ ಕಟ್ಟಡಗಳಿಗಿಂತ ಹೆಚ್ಚು ಬಾಳಿಕೆ ಬರೋ ಬಗ್ಗೆ L & T ಕಂಪನಿ ಭರವಸೆ ನೀಡಿದೆ.

3D ಟೆಕ್ನಾಲಜಿ ಬಳಸಿ ನಿರ್ಮಿಣವಾಗಿರುವ ಅಂಚೆ ಕಚೇರಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಟ್ವೀಟ್​ ಮಾಡಿದ್ದಾರೆ. ‘ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ. ಇದು ಸ್ವಾವಲಂಬಿ ಭಾರತದ ಆತ್ಮವನ್ನು ಸಹ ಒಳಗೊಂಡಿದೆ. ಅಂಚೆ ಇಲಾಖೆಯನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ವಾರೆವ್ಹಾ..! ಬೆಂಗಳೂರಲ್ಲಿ ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ; ಟ್ವೀಟ್ ಮಾಡಿ​ ಖುಷಿ ವ್ಯಕ್ತಪಡಿಸಿದ ಮೋದಿ

https://newsfirstlive.com/wp-content/uploads/2023/08/Post-Office-1.jpg

Load More