newsfirstkannada.com

ಚಂದ್ರನ ಮೇಲಿರೋದು ಒಂದಲ್ಲ, ಎರಡು ರೋವರ್‌; ಭಾರತದ ಪ್ರಗ್ಯಾನ್, ಚೀನಾದ ಯುಟು-2 ಮೀಟ್ ಆಗುತ್ತಾ?

Share :

Published August 28, 2023 at 2:30pm

Update August 28, 2023 at 2:35pm

    ಚಂದ್ರನ ಮೇಲ್ಮೈ ಮೇಲೆ ವೈರಿ ರಾಷ್ಟ್ರಗಳ 2 ರೋವರ್‌ಗಳು ಸಕ್ರಿಯ

    ಚೀನಾದ ರೋವರ್, ಭಾರತದ ಪ್ರಗ್ಯಾನ್ ಜೊತೆ ಸಂಪರ್ಕ ಸಾಧಿಸುತ್ತಾ?

    2019ರಲ್ಲೇ ಲ್ಯಾಂಡ್‌ ಆಗಿರುವ ಚೀನಾದ ಚಾಂಗೀ-4 ಲ್ಯಾಂಡರ್‌

ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆದ ಭಾರತದ ವಿಕ್ರಮ್ ಲ್ಯಾಂಡರ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಇಸ್ರೋ ವಿಜ್ಞಾನಿಗಳು ಪ್ರಗ್ಯಾನ್ ರೋವರ್‌ ಮೂಲಕ ಬಾಹ್ಯಾಕಾಶದ ರೋಚಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ವಿಕ್ರಮ್‌ ಲ್ಯಾಂಡರ್‌ನಿಂದ ಕೆಳಗಿಳಿದಿರುವ ಪ್ರಗ್ಯಾನ್ ರೋವರ್ ತನ್ನ ಅಧ್ಯಯನವನ್ನು ಮುಂದುವರಿಸಿದೆ. ಪ್ರಗ್ಯಾನ್ ರೋವರ್ ಒಂದೊಂದೇ ಮಾಹಿತಿಯನ್ನು ಇಸ್ರೋಗೆ ರವಾನೆ ಮಾಡುತ್ತಿದ್ದು, ಭಾರತದ ವಿಜ್ಞಾನಿಗಳು ರೋವರ್ ಹಾಗೂ ಲ್ಯಾಂಡರ್ ಎರಡೂ ಸಕಾರತ್ಮಕವಾಗಿ ಸ್ಪಂದಿಸುತ್ತಿವೆ ಎನ್ನುತ್ತಿದ್ದಾರೆ.

ಚಂದ್ರನ ಮೇಲ್ಮೈ ಮೇಲೆ ಈಗ ಕೇವಲ ಪ್ರಗ್ಯಾನ್ ರೋವರ್ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಚಂದ್ರನ ಮೇಲೆ ಈಗ ಎರಡು ರೋವರ್‌ಗಳು ಸಕ್ರಿಯವಾಗಿವೆ. ಭಾರತದ ಪ್ರಗ್ಯಾನ್ ರೋವರ್ ಜೊತೆಗೆ ಚೀನಾದ ಯುಟು 2 ರೋವರ್ ಕೂಡ ಆ್ಯಕ್ಟಿವ್ ಆಗಿದೆ. 2019ರ ಜನವರಿಯಲ್ಲಿ ಚಾಂಗೀ-4 ಲ್ಯಾಂಡರ್ ಅನ್ನ ಚೀನಾ ಲ್ಯಾಂಡ್ ಮಾಡಿತ್ತು. ಇದು ಚಂದ್ರನ ಉತ್ತರ ಧ್ರುವದಲ್ಲಿದೆ. ಇಸ್ರೋ, ನಾಸಾದ ನಿವೃತ್ತ ವಿಜ್ಞಾನಿ ಸೈಯದ್ ಅಹಮದ್ ಪ್ರಕಾರ ಪ್ರಗ್ಯಾನ್ ರೋವರ್ ಹಾಗೂ ಚೀನಾದ ಯುಟು‌ 2 ರೋವರ್ ಮಧ್ಯೆ ಭಾರೀ ಅಂತರವಿದೆ. ಭಾರತ ಹಾಗೂ ಚೀನಾದ ರೋವರ್ ನಡುವಿನ ಅಂತರ 1948 km ದೂರ. ಮತ್ತೊಬ್ಬ ಬಾಹ್ಯಾಕಾಶ ತಜ್ಞ ಷಣ್ಮುಗ ಸುಬ್ರಹ್ಮಣ್ಯ ಅವರ ಪ್ರಕಾರ ಭಾರತ, ಚೀನಾ ಎರಡು ರೋವರ್ ನಡುವಿನ ಅಂತರ 1891 ಕಿಲೋಮೀಟರ್ ಎನ್ನಲಾಗಿದೆ.

ಇದನ್ನೂ ಓದಿ: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ಸಂಸತ್​​ನಲ್ಲಿ ನಿರ್ಣಯ ಕೈಗೊಳ್ಳಿ- ಪ್ರಧಾನಿ ಮೋದಿಗೆ ಸ್ವಾಮಿ ಚಕ್ರಪಾಣಿ ಆಗ್ರಹ..!

2019ರಲ್ಲಿ ಲ್ಯಾಂಡ್ ಆಗಿರುವ ಚೀನಾದ ಯುಟು 2 ರೋವರ್ ಲ್ಯಾಂಡ್ ಆದ ಜಾಗದಲ್ಲಿಯೇ ಇದೆ. ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್‌ನಿಂದ 500 ಮೀಟರ್‌ವರೆಗೆ ಮಾತ್ರ ಚಲಿಸಲಿದೆ. ಹೀಗಾಗಿ ಚಂದ್ರನ ಮೇಲಿರುವ ವೈರಿ ರಾಷ್ಟ್ರಗಳ ರೋವರ್‌ಗಳು ಪರಸ್ಪರ ಭೇಟಿ ‌ಸಾಧ್ಯತೆ ತೀರಾ ಕಡಿಮೆ. ಚಂದ್ರನ ಮೇಲಿರುವ ಭಾರತದ ಪ್ರಗ್ಯಾನ್ ರೋವರ್ ಸದ್ಯ ಬ್ಯಾಟರಿ, ಸೌರಶಕ್ತಿಯಿಂದ ಹೆಚ್ಚು ಸಕ್ರಿಯವಾಗಿದೆ. ಆದರೆ ಚೀನಾದ ಯುಟು 2 ರೋವರ್‌ಗೆ ರಾತ್ರಿ ವೇಳೆ ಪವರ್ ಡೌನ್ ಆಗುತ್ತಿದೆ. ಚಂದ್ರನ ಉತ್ತರ ಧ್ರುವದಲ್ಲಿರುವ ಚೀನಾದ ಯುಟು 2 ರೋವರ್ 2019ರಿಂದಲೂ ಸಕ್ರಿಯವಾಗಿದೆ. ದಕ್ಷಿಣ ಮೇಲ್ಮೈ ‌ಮೇಲೆ ಲ್ಯಾಂಡ್ ಆಗಿರುವ ಪ್ರಗ್ಯಾನ್ ರೋವರ್ 14 ದಿನಗಳವರೆಗೆ ಮಾತ್ರ ಸಕ್ರಿಯವಾಗಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಚಂದ್ರನ ಮೇಲಿರೋದು ಒಂದಲ್ಲ, ಎರಡು ರೋವರ್‌; ಭಾರತದ ಪ್ರಗ್ಯಾನ್, ಚೀನಾದ ಯುಟು-2 ಮೀಟ್ ಆಗುತ್ತಾ?

https://newsfirstlive.com/wp-content/uploads/2023/08/CHANDRAYAANA_3_MOON.jpg

Load More