ತಂಡಕ್ಕೆ ಆಯ್ಕೆಯಾದ ಇಬ್ಬರು ವಿಕೆಟ್ ಕೀಪರ್ ಯಾರು?
ಏಷ್ಯಾಕಪ್ಗೆ ಅಳೆದು ತೂಗಿ ತಂಡ ಪ್ರಕಟಿಸಿದ ಬಿಸಿಸಿಐ
ಸೂರ್ಯ, ತಿಲಕ್ ವರ್ಮಾ, ರಾಹುಲ್, ಕಿಶನ್ ಸ್ಥಾನವೇನು?
ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ. ಬಹು ದಿನಗಳ ಕುತೂಹಲಕ್ಕೆ ತೆರೆ ಎಳೆದಿರುವ ಸೆಲೆಕ್ಷನ್ ಕಮಿಟಿ, ಪರ್ಫೆಕ್ಟ್ ಆ್ಯಂಡ್ ಬೆಸ್ಟ್ ಕಾಂಬಿನೇಷನ್ಗೆ ಮಣೆ ಹಾಕಿದೆ. ಹಾಗಾದ್ರೆ, ಏಷ್ಯಾ ಮಹಾ ಸಮರದ ರಣಕಲಿಗಳು ಯಾಱರು..?
ವಿಶ್ವ ಮಹಾಸಮರಕ್ಕೂ ಮುನ್ನ ಏಷ್ಯಾನ್ ಸಫಾರಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಆಗಸ್ಟ್ 30ರಿಂದ ಆರಂಭವಾಗಲಿರುವ ಈ ಮಹಾ ಏಷ್ಯಾ ಸಮರಕ್ಕೆ ಅಳೆದು ತೂಗಿ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, ಘಟಾನುಘಟಿ ಆಟಗಾರನ್ನೇ ಸಿಂಹಳೀಯರ ನಾಡಿಗೆ ಕಳುಹಿಸುತ್ತಿದೆ. ಈ ನಿಟ್ಟಿನಲ್ಲಿ ಬರೋಬ್ಬರಿ 17 ಆಟಗಾರರ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, 6 ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಸ್.. ಇಬ್ಬರು ವಿಕೆಟ್ ಕೀಪರ್ಸ್, ಐವರು ಆಲ್ರೌಂಡರ್ಸ್ ಸೇರಿದಂತೆ ನಾಲ್ವರು ವೇಗಿಗಳಿಗೆ ಚಾನ್ಸ್ ನೀಡಿದೆ.
ಏಷ್ಯಾಕಪ್ ತಂಡದಲ್ಲಿನ ಬ್ಯಾಟ್ಸ್ಮನ್ಸ್
ತಂಡದಲ್ಲಿ ಸ್ಥಾನ ಪಡೆದ ಬ್ಯಾಟ್ಸ್ಮನ್ಗಳ ಪೈಕಿ ರೋಹಿತ್-ಗಿಲ್ ಓಪನರ್ಗಳಾಗಿ ಕಾಣಿಸಿಕೊಂಡ್ರೆ. ವಿರಾಟ್ ಕೊಹ್ಲಿ 3ನೇ ಕ್ರಮಾಂಕದ ಜವಾಬ್ದಾರಿ ಹೊರಲಿದ್ದಾರೆ. ಇದರ ಜೊತೆಗೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ 4ನೇ ಕ್ರಮಾಂಕದ ಸ್ಪೆಷಲಿಸ್ಟ್ಗಳಾಗಿದ್ದಾರೆ. ಮೇಲ್ನೋಟಕ್ಕೆ ಟೀಮ್ ಇಂಡಿಯಾದ ಬ್ಯಾಟಿಂಗ್ ಬಲಿಷ್ಠವಾಗಿದ್ದು, ಎದುರಾಳಿ ತಂಡಗಳಿಗೆ ಕಬ್ಬಿಣದ ಕಡಲೆಯಾಗಿದೆ. ಆದರೆ, ಇದು ಏಷ್ಯಾಕಪ್ನಲ್ಲಿ ಯಾವ ಮಟ್ಟಕ್ಕೆ ಅಬ್ಬರಿಸ್ತಾರೆ ಅನ್ನೋದೆ ಪ್ರಶ್ನೆ.
ವಿಕೆಟ್ ಕೀಪರ್ಗಳಾಗಿ ಯಾರು..?
ಟಾಪ್ ಆರ್ಡರ್ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳನ್ನೇ ಆಯ್ಕೆ ಮಾಡಿರುವ ಸೆಲೆಕ್ಷನ್ ಕಮಿಟಿ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಕೆ.ಎಲ್.ರಾಹುಲ್ ಆ್ಯಂಡ್ ಇಶಾನ್ ಕಿಶನ್ಗೆ ವಹಿಸಿದೆ. ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಕೆ.ಎಲ್.ರಾಹುಲ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಏಷ್ಯಾಕಪ್ ತಂಡದಲ್ಲಿ ಆಲ್ರೌಂಡರ್ಗಳ ದಂಡು..!
ಏಷ್ಯಾಕಪ್ನಲ್ಲಿ ಪ್ರಕಟಿಸಲಾದ ತಂಡದಲ್ಲಿ ಬರೋಬ್ಬರಿ ಐವರು ಆಲ್ರೌಂಡರ್ಸ್ ಕಾಣಿಸಿಕೊಂಡಿದ್ದು, ಈ ಪೈಕಿ ಇಬ್ಬರು ಫಾಸ್ಟ್ ಬೌಲಿಂಗ್ ಆಲ್ರೌಂಡರ್ಸ್, ಮೂವರು ಸ್ಪಿನ್ ಆಲ್ರೌಂಡರ್ಗಳಾಗಿದ್ದಾರೆ.
ತಂಡದಲ್ಲಿ ಆಲ್ರೌಂಡರ್ ಯಾಱರು?
ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಕಾಣಿಸಿಕೊಂಡಿದ್ರೆ, ಸ್ಪಿನ್ ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ ವೇಗದ ಬೌಲಿಂಗ್ ಡಿಪಾರ್ಟ್ಮೆಂಟ್, ಈ ಹಿಂದಿಗಿಂತ ಸಖತ್ ಸ್ಟ್ರಾಂಗ್ ಆಗಿದೆ.
ತಂಡದಲ್ಲಿ ವೇಗಿಗಳು ಯಾರು..?
ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಒಳಗೊಂಡ ಪೇಸ್ ಬ್ಯಾಟರಿ ನಿಜಕ್ಕೂ ಡೆಡ್ಲಿಯಾಗಿದೆ. ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾ ಕೂಟಕ್ಕೆ ಬಲಿಷ್ಠ ತಂಡ ಪ್ರಕಟಿಸಲಾಗಿದ್ದು, ಮೆಗಾ ಟೂರ್ನಿಗೂ ಮುನ್ನ ನಡೆಯೋ ಈ ಮಿನಿ ಸಮರದಲ್ಲಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ