newsfirstkannada.com

Test Jersey: ಟೀಂ ಇಂಡಿಯಾ ನ್ಯೂ ಜರ್ಸಿ ಅನಾವರಣ.. ಸ್ಪಾನ್ಸರ್ಸ್​ ಹೆಸರಿಗೆ ಕೊಕ್, ಮಿಂಚುತ್ತಿದೆ ‘INDIA’..!

Share :

11-07-2023

    ಜರ್ಸಿ ಮೇಲೆ INDIA ಎಂದು ಬೋಲ್ಡ್​ ಆಗಿ ಬರೆಯಲಾಗಿದೆ

    ಹೊಸ ಜರ್ಸಿ ನೋಡಿ ಅಭಿಮಾನಿಗಳು ಏನ್ ಹೇಳ್ತಿದ್ದಾರೆ?

    Dream11 ಟೀಂ ಇಂಡಿಯಾದ ನೂತನ ಜರ್ಸಿ ಸ್ಪಾನ್ಸರ್..!

ಬಿಸಿಸಿಐ ಟೆಸ್ಟ್​ ಪಂದ್ಯಗಳಿಗೆ ಹೊಸ ಜರ್ಸಿಯನ್ನು ಅನಾವಣಗೊಳಿಸಿದೆ. ಯಾವುದೇ ಫ್ರಂಟ್ ಸ್ಪಾನ್ಸರ್ಸ್​ ಇಲ್ಲದ, ಜರ್ಸಿ ಮೇಲೆ ಇಂಡಿಯಾ ಎಂದು ಬೋಲ್ಡ್​​ ಆಗಿ ಬರೆಯಲಾಗಿದೆ. ಜರ್ಸಿಯನ್ನು ತುಂಬಾ ಸರಳವಾಗಿ ಡಿಸೈನ್ ಮಾಡಲಾಗಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಇಂಪ್ರೆಸ್ ಮಾಡ್ತಿದೆ.

ವರದಿಗಳ ಪ್ರಕಾರ, ಇನ್ಮುಂದೆ ಜರ್ಸಿಯ ಮುಂಭಾಗ ‘ಇಂಡಿಯಾ’ಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದೆ. ಕ್ರೀಡಾ ಸ್ಫೂರ್ತಿ ಹಾಗೂ ದೇಶಕ್ಕಾಗಿ ಆಡುತ್ತಿರುವ ಅಭಿಮಾನದ ಮೇಲೆ ಬಿಸಿಸಿಐ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಜರ್ಸಿಯ ಪ್ರಾಯೋಜಕತ್ವ ಪಡೆದಿರುವ ಡ್ರೀಮ್-11 ಲೋಗೋ ಜರ್ಸಿಯ ತೋಳಿನಲ್ಲಿ ಮುದ್ರಿಸಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಜರ್ಸಿ ಪ್ರಾಯೋಜಕತ್ವವನ್ನು Dream -11 ಎಷ್ಟು ಕೋಟಿಗೆ ಖರೀದಿಸಿದೆ ಗೊತ್ತಾ?

ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೊಸ ಜರ್ಸಿಯೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕ್ರಿಕೆಟ್ ಅಭಿಮಾನಿಗಳು ಹೊಸ ಜರ್ಸಿಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಸಿಸಿಐ ನಿರ್ಧಾರಕ್ಕೆ ಜೈ ಎಂದಿದ್ದಾರೆ. ಇತ್ತೀಚೆಗೆ ಡ್ರೀಮ್ -11 ಟೀಂ ಇಂಡಿಯಾ ಜರ್ಸಿಯ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಬರೋಬ್ಬರಿ 358 ಕೋಟಿಗೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಹಿಂದೆ BYJU’S ಟೀಂ ಇಂಡಿಯಾದ ಜರ್ಸಿ ಪ್ರಯೋಜಕತ್ವವನ್ನು ಪಡೆದುಕೊಂಡಿತ್ತು. ಇದರ ಅವಧಿ ಮುಕ್ತಾಯವಾದ ಬಳಿಕ ಯಾವುದೇ ಪ್ರಾಯೋಜಕತ್ವ ಇರಲಿಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ ಪಂದ್ಯವನ್ನು ಕೂಡ ಟೀಂ ಇಂಡಿಯಾ ಹಾಗೆ ಆಡಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Test Jersey: ಟೀಂ ಇಂಡಿಯಾ ನ್ಯೂ ಜರ್ಸಿ ಅನಾವರಣ.. ಸ್ಪಾನ್ಸರ್ಸ್​ ಹೆಸರಿಗೆ ಕೊಕ್, ಮಿಂಚುತ್ತಿದೆ ‘INDIA’..!

https://newsfirstlive.com/wp-content/uploads/2023/07/Team_INDIA-3-1.jpg

Load More