newsfirstkannada.com

Team India: ಮುಂಬೈ ಬಾಯ್ಸ್​ ಮೇಲೆ ಹೆಚ್ಚಿದ ನಿರೀಕ್ಷೆ.. ಇಂದು ರೋಹಿತ್, ಶ್ರೇಯಸ್, ಸೂರ್ಯನ ಎಲ್ಲರ ಕಣ್ಣು!

Share :

15-11-2023

    ವಾಂಖೆಡೆಯಲ್ಲಿ ಘರ್ಜಿಸ್ತಾರಾ ಲೋಕಲ್​ ಬಾಯ್ಸ್​.?

    ಸ್ಫೋಟಕ ಇನ್ನಿಂಗ್ಸ್​ ಆಡ್ತಾರಾ ಸೂರ್ಯಕುಮಾರ.?

    ಕಿಂಗ್​ ಕೊಹ್ಲಿಯ ಮೇಲೂ ಇದೆ ಎಲ್ಲರ ಕಣ್ಣು.!

INDvsNZ: ಇಂದು ನಡೆಯೋ ಇಂಡೋ – ಕಿವೀಸ್​ ಸೆಮಿಫೈನಲ್​ ಕನದ ಈ ನಾಲ್ವರ​ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್​. ಈ ಹಿಂದೆ ಅದೆಷ್ಟೋ ಪಂದ್ಯಗಳನ್ನ ಆಡಿರಬಹುದು. ಮುಂದೆ ಸಾಕಷ್ಟು ಪಂದ್ಯವನ್ನ ಆಡಬಹುದು. ಆದ್ರೆ, ಇಂದಿನ ಪಂದ್ಯದ ನೆನಪು ಜೀವನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಹೀಗಾಗಿಯೇ ಈ ಪಂದ್ಯವನ್ನ ಅವಿಸ್ಮರಣೀಯವಾಗಿಸಿಕೊಳ್ಳೋ ಲೆಕ್ಕಾಚಾರ ಇವರದ್ದು.

ಇಂಡೋ – ಕಿವೀಸ್​ ಕದನಕ್ಕೆ ಕೆಲವೇ ಗಂಟೆಗಳು ಬಾಕಿ. ಇಂದಿನ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋದಕ್ಕಿಂತ, ಇಂದು ಅಬ್ಬರಿಸಿ ಬೊಬ್ಬಿರಿಯೋದು ಯಾರು ಅನ್ನೋ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಅದ್ರಲ್ಲೂ ತವರಿನಂಗಳದಲ್ಲಿ ಕಣಕ್ಕಿಳಿತಾ ಇರೋ ಮುಂಬೈ ಸ್ಟಾರ್​ಗಳ ಮೇಲೆ ಸ್ವಲ್ಪ ಹೆಚ್ಚೆ ನಿರೀಕ್ಷೆಯಿದೆ.

ವಾಂಖೆಡೆ ಅಂಗಳ ಟೀಮ್​ ಇಂಡಿಯಾ ಪಾಲಿಗೆ ಎಷ್ಟು ಸ್ಪೆಷಲ್​ ಅನ್ನಿಸಿದ್ಯೋ.. ಈ ಆಟಗಾರರ ಪಾಲಿಗೂ ಅಷ್ಟೇ ಸ್ಪೆಷಲ್​.. ಟೀಮ್​ ಇಂಡಿಯಾ ಪರ ಒಂದೇ ಒಂದು ಪಂದ್ಯ ಆಡಬೇಕು ಎಂದು ಕನಸು ಕಂಡ ಮೈದಾನದಲ್ಲಿ ಟೀಮ್​ ಇಂಡಿಯಾ ಪರ ವಿಶ್ವಕಪ್​ ಸೆಮಿಫೈನಲ್​ ಪಂದ್ಯ ಆಡೋದು ಅಂದ್ರೆ ರೋಮಾಂಚನಕಾರಿ ವಿಚಾರ ಅಲ್ವೇ..! ಮುಂಬೈ ಮಹಾರಾಜರಾದ ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ಶ್ರೇಯಸ್​​ ಅಯ್ಯರ್​ ಸದ್ಯ ಅದೇ ಫೀಲ್​​ನಲ್ಲಿದ್ದಾರೆ.

ಮುಂಬೈ ಮಹಾರಾಜ ರೋಹಿತ್​ ಮುಂದಿದೆ ಬಿಗ್​ ಚಾಲೆಂಜ್​.!

ಕ್ಯಾಪ್ಟನ್​ ರೋಹಿತ್​ ಶರ್ಮಾ ಈವರೆಗೆ ಟೀಮ್​ ಇಂಡಿಯಾವನ್ನ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಬ್ಯಾಟಿಂಗ್​ನಲ್ಲೂ ಭರ್ಜರಿ ಪರ್ಫಾಮೆನ್ಸ್ ನೀಡಿದ್ದಾರೆ. ಆದ್ರೆ, ತವರು ವಾಂಖೆಡೆ ಅಂಗಳದಲ್ಲಿ ಹಿಟ್​ಮ್ಯಾನ್

ಶ್ರೇಯಸ್​ ಅಯ್ಯರ್​ ಮೇಲಿದೆ ಅಪಾರ ನಿರೀಕ್ಷೆ.!

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಶ್ರೇಯಸ್​ ಅಯ್ಯರ್​ ಮೇಲೂ ಅಪಾರ ನಿರೀಕ್ಷೆಯಿದೆ. ಬ್ಯಾಟಿಂಗ್​ನಲ್ಲಿ ಅಮೋಘ ಆಟವಾಡಿರುವ ಮುಂಬೈಕರ್​, ತವರಿನಂಗಳದಲ್ಲಿ ಮಿಂಚುತ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿದೆ. ಹೋಮ್​ ಪಿಚ್​ನಲ್ಲಿ 43ರ ಸರಾಸರಿ ಹೊಂದಿರುವ ಶ್ರೇಯಸ್​ ಅಯ್ಯರ್​ ಇಂದು ಸಿಡಿದೇಳೋದು ಕಷ್ಟದ ವಿಚಾರವೇನಲ್ಲ.

ಸ್ಪೋಟಕ ಇನ್ನಿಂಗ್ಸ್​ ಆಡ್ತಾರಾ ಸೂರ್ಯಕುಮಾರ್​​.?

ಟೀಮ್ ಇಂಡಿಯಾ ಪರ ವಿಶ್ವಕಪ್​ ಆಡೋದೆ ಡೌಟ್​ ಅಂದು ಕೊಂಡಿದ್ದ ಮಿಸ್ಟರ್ 360 ಸೂರ್ಯ ಕುಮಾರ್​ ಇದೀಗ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನವನ್ನ ಫಿಕ್ಸ್​ ಮಾಡಿಕೊಂಡಿದ್ದಾರೆ. ಇಂದಿನ ಸೆಮಿಸ್​ ಕದನದಲ್ಲೂ ಸೂರ್ಯ ಆಡೋದು ಕನ್​ಫರ್ಮ್​.! ಈ ಹಿಂದೆ ವಾಂಖೆಡೆ ಅಂಗಳದಲ್ಲಿ ಆಡಿದ 2 ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿರುವ ಸೂರ್ಯ, ವೈಫಲ್ಯವನ್ನ ಮೆಟ್ಟಿ ನಿಲ್ಲೋ ಛಲದಲ್ಲಿದ್ದಾರೆ.

ಚಾನ್ಸ್​ ಸಿಕ್ರೆ ಮಿಂಚಲು ಶಾರ್ದೂಲ್​ ಸಜ್ಜು.?

ರೋಹಿತ್​, ಶ್ರೇಯಸ್​, ಸೂರ್ಯ ಇಂದಿನ ಪಂದ್ಯದಲ್ಲಿ ಆಡೋದು ಕನ್​ಫರ್ಮ್​. ಆದ್ರೆ, ಶಾರ್ದೂಲ್​ ಠಾಕೂರ್​​ಗೆ ಚಾನ್ಸ್​ ಸಿಗೋದು ಅನುಮಾನ. ಒಂದು ವೇಳೆ ಸಿಕ್ರೆ ಮಿಂಚಬೇಕು ಅನ್ನೋದು ಶಾರ್ದೂಲ್​ ಮನದಾಳವಾಗಿದೆ.

ಕಿಂಗ್​ ಕೊಹ್ಲಿಯ ಮೇಲೂ ಇದೆ ಎಲ್ಲರ ಕಣ್ಣು.!

ಹೌದು.. ವಿರಾಟ್​ ಕೊಹ್ಲಿ ದೆಹಲಿಯವ್ರೆ. ಆದ್ರೆ, ಈಗ ಬದುಕು ಕಟ್ಟಿಕೊಂಡಿರೋದು ಮುಂಬೈ ಮಹಾನಗರಿಯಲ್ಲಿ. ಅದ್ರಲ್ಲೂ ಈ ವಾಂಖೆಡೆ ಮೈದಾನ ಕೊಹ್ಲಿ ಪಾಲಿಗೆ ಫೇವರಿಟ್​. ಈ ಮೈದಾನದಲ್ಲಿ ಆಡಿದ 7 ಪಂದ್ಯಗಳಲ್ಲಿ ಕನ್ಸಿಸ್ಟೆಂಟ್​ ಆಗಿ 59.50ರ ಸಾಲಿಡ್​ ಸರಾಸರಿಯಲ್ಲಿ 357 ರನ್​ ಸಿಡಿಸಿದ ಅತ್ಯಮೋಘ ರೆಕಾರ್ಡ್​ ಅನ್ನ ಕೊಹ್ಲಿ ಹೊಂದಿದ್ದಾರೆ.

ವಾಂಖೆಡೆ ಅನ್ನೋ ಹೆಸರು ಕಿವಿಗೆ ಬಿದ್ರೆ ದೇಶಾದ್ಯಂತ ಇರೋ ಅಭಿಮಾನಿಗಳಲ್ಲಿ ವಿಶೇಷ ಅನುಭೂತಿಯಾಗುತ್ತೆ. ಧೋನಿ ಆ ಸಿಕ್ಸರ್​​, ರವಿ ಶಾಸ್ತ್ರಿಯ ಕಾಮೆಂಟರಿ, 28 ವರ್ಷಗಳ ಬಳಿಕ ಕನಸು ನನಸಾದ ಆ ಕ್ಷಣ ಕಣ್ಣೆದುರಿಗೆ ಬರುತ್ತೆ. ಅಂತಾ ಐಕಾನಿಕ್​ ಮೈದಾನದಲ್ಲಿ ತವರಿನ ಆಟಗಾರರು ಆಡೋದಂದ್ರೆ ಅದು ನಿಜಕ್ಕೂ ರೋಚಕ ಕ್ಷಣ. ಆ ಕ್ಷಣವನ್ನ ಮುಂಬೈ ಮಹಾರಾಜರು ಅವಿಸ್ಮರಣೀಯವಾಗಿಸಿಕೊಳ್ಳಲಿ ಅನ್ನೋದಷ್ಟೇ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India: ಮುಂಬೈ ಬಾಯ್ಸ್​ ಮೇಲೆ ಹೆಚ್ಚಿದ ನಿರೀಕ್ಷೆ.. ಇಂದು ರೋಹಿತ್, ಶ್ರೇಯಸ್, ಸೂರ್ಯನ ಎಲ್ಲರ ಕಣ್ಣು!

https://newsfirstlive.com/wp-content/uploads/2023/11/Rohit-sharma-1-2.jpg

Load More