newsfirstkannada.com

WATCH: 30 ಸಾವಿರ ಅಡಿ ಎತ್ತರದಲ್ಲಿ ರಕ್ಷಾ ಬಂಧನ; ಅಣ್ಣ-ತಂಗಿಯರ ಅಪರೂಪದ ವಿಡಿಯೋ ಇಲ್ಲಿದೆ ನೋಡಿ

Share :

31-08-2023

    ವಿಮಾನದಲ್ಲಿ ರಕ್ಷ ಬಂಧನ ಆಚರಣೆ ಮಾಡಿದ ಗಗನಸಖಿ

    ಈ ವಿಡಿಯೋ ನೋಡೋಕೆ ಅತ್ಯಂತ ಹೃದಯಸ್ಪರ್ಶಿ ಆಗಿದೆ

    ಅಣ್ಣ- ತಂಗಿ ಬಾಂಧವ್ಯಕ್ಕೆ ಮನಸೋತ ಸಹ ಪ್ರಯಾಣಿಕರು

ಅಣ್ಣ-ತಂಗಿಯರ ಈ ಬಂಧ, ಜನುಮ ಜನುಮದ ಅನುಬಂಧ ಎಂಬ ಹಾಡಿನಂತೆ ಅಣ್ಣ-ತಂಗಿ ಅಕ್ಕ-ತಮ್ಮನ ಬಾಂಧವ್ಯ ತುಂಬಾ ಪವಿತ್ರವಾದದ್ದು. ಇದು ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯದ ಆಳವಾದ ಮಹತ್ವವನ್ನು ಸಾರುತ್ತದೆ. ದೇಶಾದ್ಯಂತ ನಿನ್ನೆ ಮತ್ತು ಇಂದು ರಕ್ಷಾ ಬಂಧನವನ್ನು ಆಚರಿಸುತ್ತಿದ್ದಾರೆ. ಇದೀಗ ಭೂಮಿಯಿಂದ 30 ಸಾವಿರ ಅಡಿ ಎತ್ತರದಲ್ಲಿ ಆಗಸದಲ್ಲಿ ರಕ್ಷಾ ಬಂಧನ ಆಚರಣೆ ಮಾಡಲಾಗಿದೆ.

ಹೌದು ಇಂಡಿಗೋ ವಿಮಾನದಲ್ಲಿ ತನ್ನ ಸೋದರನಿಗೆ ಗಗನಸಖಿ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಕ್ಯಾಪ್ಟನ್ ಆಗಿರುವ ಸೋದರ ಗೌರವ್‌ಗೆ ಗಗನಸಖಿ ಶುಭಾ ಭಾವುಕವಾಗಿ ಮಾತಾಡುತ್ತಾ ರಾಖಿ ಕಟ್ಟಿ ಖುಷಿ ಪಟ್ಟಿದ್ದಾರೆ. ರಾಖಿ ಕಟ್ಟಿದ ತಂಗಿಯ ಕಾಲಿಗೆ ಬಿದ್ದು ಅಣ್ಣ ನಮಸ್ಕರಿಸಿದ್ದಾನೆ. ಇನ್ನು ಈ ಅಣ್ಣ ಹಾಗೂ ತಂಗಿಯ ಬಾಂಧವ್ಯ ನೋಡಿದ ವಿಮಾನ ಪ್ರಯಾಣಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಣ್ಣನಿಗೆ ರಾಖಿ ಕಟ್ಟುವ ಮೊದಲು ಗಗನಸಖಿ ಶುಭಾ ಭಾವುಕವಾಗಿ  ಮಾತಾಡಿದ್ದಾರೆ.

ಸದ್ಯ ತಂಗಿ ಅಣ್ಣನ ಕೈಗೆ ರಾಖಿ ಕಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ‘ಹೀಗೆ ಇರಿ ಯಾವಾಗಲೂ ನಗು ನಗುತ್ತಾ, ಒಳ್ಳೆಯ ಬಾಂಧವ್ಯ ಇದು, ಅತ್ಯಂತ ಹೃದಯಸ್ಪರ್ಶಿ ಕ್ಷಣವಾಗಿದೆ, ಅಣ್ಣ ಆ ದೇವರು ನಿನಗೆ ಒಂದು ಅದ್ಭುತವಾದ ವರವನ್ನು ನೀಡಿದ್ದಾನೆ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: 30 ಸಾವಿರ ಅಡಿ ಎತ್ತರದಲ್ಲಿ ರಕ್ಷಾ ಬಂಧನ; ಅಣ್ಣ-ತಂಗಿಯರ ಅಪರೂಪದ ವಿಡಿಯೋ ಇಲ್ಲಿದೆ ನೋಡಿ

https://newsfirstlive.com/wp-content/uploads/2023/08/RAKSHA-BANDAN.jpg

Load More