newsfirstkannada.com

ಬರೋಬ್ಬರಿ 500 ವಿಮಾನ ಖರೀದಿಗೆ ಬಿಗ್ ಡೀಲ್‌; ಏರ್ ಇಂಡಿಯಾವನ್ನೇ ಹಿಂದಿಕ್ಕಿದ ಇಂಡಿಗೋ ವಿಶ್ವ ದಾಖಲೆ

Share :

Published June 19, 2023 at 10:17pm

Update June 19, 2023 at 10:18pm

    ವಿಶ್ವದ ವಾಯುಯಾನ ಇತಿಹಾಸದಲ್ಲೇ ಇಂಡಿಗೋ ಹೊಸ ದಾಖಲೆ

    55 ಶತಕೋಟಿ ಡಾಲರ್‌ಗೆ 500 ವಿಮಾನ ಖರೀದಿಯ ಮೆಗಾ ಡೀಲ್

    ಏರ್ ಇಂಡಿಯಾಗಿಂತ ಹೆಚ್ಚು ವಿಮಾನ ಖರೀದಿಸುತ್ತಿರುವ ಇಂಡಿಗೋ

ಪ್ಯಾರಿಸ್: ವಿಶ್ವದ ವಾಯುಯಾನ ಇತಿಹಾಸದಲ್ಲೇ ಭಾರತ ಹೊಸದೊಂದು ದಾಖಲೆ ಬರೆದಿದೆ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಏರ್‌ಬಸ್‌ ಕಂಪನಿಯಿಂದ ಬರೋಬ್ಬರಿ 500 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. 55 ಶತಕೋಟಿ ಡಾಲರ್‌ನ ಇಷ್ಟು ದೊಡ್ಡ ಡೀಲ್ ನಡೆದಿರೋದು ವಾಯುಯಾನ ಇತಿಹಾಸದಲ್ಲೇ ಇದೇ ಮೊದಲು.

ಭಾರತದ ನಾಗರಿಕ ವಿಮಾನಯಾನ ‌ಇತಿಹಾಸದಲ್ಲಿ ಅತಿ‌ ಹೆಚ್ಚು ವಿಮಾನ ಖರೀದಿ ಇದಾಗಿದೆ. ಫ್ರಾನ್ಸ್‌ನ ಪ್ಯಾರಿಸ್ ಏರ್ ಶೋನಲ್ಲಿ ಇಂಡಿಗೋ, ಏರ್ ಬಸ್ ಕಂಪನಿಯಿಂದ 500 ವಿಮಾನ ಖರೀದಿಗೆ ಆರ್ಡರ್ ಮಾಡಿದೆ. A320 ನಿಯೋ ಫ್ಯಾಮಿಲಿ ಏರ್ ಕ್ರಾಫ್ಟ್ ಪೂರೈಕೆಗೆ ಆರ್ಡರ್ ಮಾಡಲಾಗಿದೆ.

ಏರ್ ಇಂಡಿಯಾ ದಾಖಲೆ ಮುರಿದ ಇಂಡಿಗೋ
ಕಳೆದ ಫೆಬ್ರವರಿ ತಿಂಗಳಲ್ಲಿ ಏರ್ ಇಂಡಿಯಾ ಕಂಪನಿಯು 470 ವಿಮಾನ ಖರೀದಿಗೆ ಆರ್ಡರ್ ನೀಡಿತ್ತು. ಈಗ ಏರ್ ಇಂಡಿಯಾಗಿಂತ ಹೆಚ್ಚು ವಿಮಾನ ಖರೀದಿಸುತ್ತಿರುವ ಇಂಡಿಗೋ ಕಂಪನಿ ಅಧಿಕೃತವಾಗಿ 500 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 500 ವಿಮಾನ ಖರೀದಿಗೆ ಬಿಗ್ ಡೀಲ್‌; ಏರ್ ಇಂಡಿಯಾವನ್ನೇ ಹಿಂದಿಕ್ಕಿದ ಇಂಡಿಗೋ ವಿಶ್ವ ದಾಖಲೆ

https://newsfirstlive.com/wp-content/uploads/2023/06/Indigo-1.jpg

Load More