newsfirstkannada.com

ಇಂದಿರಾ ಕ್ಯಾಂಟೀನ್​​ನಲ್ಲಿ ಇನ್ಮುಂದೆ ಸಿಗುತ್ತಾ ಮೊಟ್ಟೆ..? ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ..?

Share :

17-06-2023

  ಬಡವರ ಪಾಲಿನ ಅಕ್ಷಯಪಾತ್ರೆಗೆ ಮರುಜೀವ ನೀಡ್ತಿರೋ ಕಾಂಗ್ರೆಸ್​ ಸರ್ಕಾರ!

  ಇಂದಿರಾ ಕ್ಯಾಂಟೀನ್‌ನಲ್ಲಿ ಮೊಟ್ಟೆ ಕೊಡಿ ಎಂದು ಸರ್ಕಾರಕ್ಕೆ ಜನ ಡಿಮ್ಯಾಂಡ್‌!

  ರಾಜ್ಯ ಸರ್ಕಾರದಿಂದ ಆಹಾರ ಗುಣಮಟ್ಟದ ಬದಲಾವಣೆಗೆ ಭಾರೀ ಚಿಂತನೆ..!

ಬೆಂಗಳೂರು: ಬಡಜನರ ಪಾಲಿನ ಅಕ್ಷಯ ಪಾತ್ರೆ. ಸಾವಿರಾರು ಜನರಿಗೆ ಹಸಿವು ತಣಿಸಿದ್ದ ಅನ್ನದೇಗುಲ ಅಂತಾನೇ ಖ್ಯಾತಿ ಪಡೆದ ಇಂದಿರಾ ಕ್ಯಾಂಟೀನ್‌ಗೆ ಮತ್ತಷ್ಟು ಬಲವನ್ನು ನೀಡಲು ಸರ್ಕಾರ ಸಜ್ಜಾಗಿದೆ. ಇತ್ತ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡೋ ಆಹಾರಗಳ ಗುಣಮಟ್ಟ ಹೆಚ್ಚಿಸೋ ಬಗ್ಗೆ ಚರ್ಚೆ ನಡೆಯುತ್ತಿರೋ ಹೊತ್ತಲ್ಲೇ ಸರ್ಕಾರದ ಮುಂದೆ ಹೊಸದೊಂದು ಡಿಮ್ಯಾಂಡ್‌ ಬಂದಿದೆ. ಅದುವೇ ಮೊಟ್ಟೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಸಿಗುತ್ತಾ ಮೊಟ್ಟೆ?
ಇಂದಿರಾ ಕ್ಯಾಂಟೀನ್‌ನಲ್ಲಿ ಮೊಟ್ಟೆ ಕೊಡುವಂತೆ ಡಿಮ್ಯಾಂಡ್‌

ಅಧಿಕಾರಕ್ಕೆ ಬಂದಾಗಿನಿಂದ ಇಂದಿರಾ ಕ್ಯಾಂಟೀನ್‌ನತ್ತ ಒಲವು ತೋರುತ್ತಿರೋ ಸಿಎಂ ಸಿದ್ದರಾಮಯ್ಯ, ಮೆನು ಬದಲಾವಣೆ, ಇಂದಿರಾ ಕ್ಯಾಂಟೀನ್‌ನ ಆಹಾರ ಗುಣಮಟ್ಟ ಸೇರಿದಂತೆ ಹಲವು ಬದಲಾವಣೆಗೆ ಚಿಂತನೆ ನಡೆಸಿದ್ದಾರೆ. ಈ ನಡುವೆ ಊಟದ ಜೊತೆಗೆ ಮೊಟ್ಟೆಯನ್ನೂ ಕೊಡಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಈ ಸಾಮಾಜಿಕ ಕಾರ್ಯಕರ್ತ ಅಮರೇಶ್‌ ಮೆನುವಿನಲ್ಲಿ ಮೊಟ್ಟೆಯನ್ನೂ ಸೇರಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.

ಸರ್ಕಾರ ಕೂಡ ಮೆನು ಬದಲಾವಣೆ ಮಾಡೋದಕ್ಕೂ ಸರ್ಕಾರ ಕೂಡ ಚಿಂತನೆ ನಡೆಸ್ತಾ ಇದೆ. ಇಂದಿರಾ ಕ್ಯಾಂಟೀನ್‌ಗೆ ಹೊಸ ಟಚ್‌ ನೀಡಲು ಸಜ್ಜಾಗಿರೋ ಸರ್ಕಾರ, ಪಾಲಿಕೆಯಿಂದಲೂ ಮಾಹಿತಿ ಕಲೆ ಹಾಕಿದ್ದು, ಬೆಳಗಿನ ತಿಂಡಿ ಜೊತೆಗೆ ರಾತ್ರಿ ಊಟದ ಮೆನುವಲ್ಲೂ ಬದಲಾವಣೆ ತರಲು ಮುಂದಾಗಿದೆ. ಈ ಬಗ್ಗೆ ಪಾಲಿಕೆ ಕೂಡ ಸರ್ಕಾರಕ್ಕೆ ವರದಿ ನೀಡಿದೆ. ಸದ್ಯ ಬಡವರ ಪಾಲಿನ ಅಕ್ಷಯಪಾತ್ರೆಗೆ ಮರುಜೀವ ನೀಡ್ತಿರೋ ಸರ್ಕಾರ, ಮೊಟ್ಟೆ ನೀಡೋ ಬಗ್ಗೆ ಏನು ನಿರ್ಧಾರ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿರಾ ಕ್ಯಾಂಟೀನ್​​ನಲ್ಲಿ ಇನ್ಮುಂದೆ ಸಿಗುತ್ತಾ ಮೊಟ್ಟೆ..? ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ..?

https://newsfirstlive.com/wp-content/uploads/2023/06/hotel-3.jpg

Load More