/newsfirstlive-kannada/media/post_attachments/wp-content/uploads/2024/11/1Re-Price.jpg)
ಪೊಲೀಸ್ ಇಲಾಖೆ ಸಾಮಾನ್ಯವಾಗಿ ಡಾನ್​ಗಳ ತಲೆಯ ಮೇಲೆ ನಟೋರಿಯಸ್ ತಲೆಗಳ ಮೇಲೆ, ಮೊಸ್ಟ್ ವಾಟೆಂಡ್ ಉಗ್ರರ ತಲೆಮೇಲೆ ಇಂತಿಷ್ಟು ಬಹುಮಾನವನ್ನು ಘೋಷಿಸುತ್ತಾರೆ. ಹಿಡಿದು ಕೊಟ್ಟವರಿಗೆ ಲಕ್ಷ ಲಕ್ಷ ರೂಪಾಯಿ ಕೊಡುವುದಾಗಿಯೂ ಘೋಷಿಸುತ್ತಾರೆ. ಈಗ ಅಂತಹುದೇ ಒಂದು ಘೋಷಣೆಯನ್ನು ಮಧ್ಯಪ್ರದೇಶದ ಇಂದೋರ್ ಪೊಲೀಸ್ ಇಲಾಖೆಯೂ ಘೋಷಿಸಿದೆ. ಆದ್ರೆ ಅವರು ಘೋಷಿಸಿದ ಬಹುಮಾನದ ಮೊತ್ತವನ್ನು ಕಂಡು ಎಲ್ಲರೂ ನಗುತ್ತಿದ್ದಾರೆ. ನಟೋರಿಯಸ್ ರೌಡಿಗಳ ಫೋಟೋ ಹಾಕಿ ಬಹುಮಾನದ ಮೊತ್ತವನ್ನು ಉಲ್ಲೇಖಿಸಿರುವ ಪೋಸ್ಟರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರದಂದು ಈ ಒಂದು ನೋಟಿಸ್​ ಇಶ್ಯೂ ಆಗಿದೆ. ತರ್ಬೇಜ್ ಬಂಟಿ ಮತ್ತು ಬಿಟ್ಟು ಎಂಬ ಇಬ್ಬರು ರೌಡಿ ಶೀಟರ್​​ಗಳ ಫೋಟೋ ಹಾಕಿರುವ ಪೋಸ್ಟರ್​ನಲ್ಲಿ ಇವರನ್ನು ಹಿಡಿದುಕೊಟ್ಟವರಿಗೆ ಬರೋಬ್ಬರಿ 1 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇಬ್ಬರಿಗೂ ಸೇರಿ ಒಂದು ರೂಪಾಯಿ ಘೋಷಿಸಿರುವ ಪೊಲೀಸರು ತಲಾ ಒಬ್ಬ ರೌಡಿಗೆ 50 ಪೈಸೆಯನ್ನು ನಿಗದಿ ಮಾಡಿದಂತಾಗಿದೆ. ಅದು ಮಾತ್ರವಲ್ಲ ರೌಡಿ ಶೀಟರ್​ಗಳ ಬಗ್ಗೆ ಮಾಹಿತಿ ಕೊಟ್ಟವರಿಗೂ ಕೂಡ ಈ ಒಂದು ಬಹುಮಾನ ನೀಡಲಾಗುವುದು ಎಂದು ಹೇಳಲಾಗಿದೆ.
ಒಂದು ಮೂಲಗಳ ಮಾಹಿತಿ ಪ್ರಕಾರ ಪೋಸ್ಟರ್​ನಲ್ಲಿ ತೋರಿಸಲಾಗಿರುವ ಆರೋಪಿ ತರ್ಬೇಜ್​ ಇಂದೋರ್​ನ ಸದಾಬಜಾರ್ ಏರಿಯಾದವನು. ಮತ್ತೊಬ್ಬ ನಟೋರಿಯಸ್​ ರೌಡಿ ಬಿಟ್ಟು ಮಹಾರರಾಜ್ ಗಂಜ್ ನಿವಾಸಿ.
ಇದನ್ನೂ ಓದಿ:VIDEO: ಫೆಂಗಲ್ ಸೈಕ್ಲೋನ್‌ಗೆ ತತ್ತರಿಸಿದ ಚೆನ್ನೈ; ಇಂದು ಬೆಂಗಳೂರಲ್ಲೂ ಮಳೆಯ ಅಲರ್ಟ್!
ಇಬ್ಬರು ತಮ್ಮನ್ನು ತಾವು ಸ್ವಯಂ ಡಾನ್​ಗಳೆಂದು ಘೋಷಿಸಿಕೊಂಡವರು ಮತ್ತು ತಮ್ಮ ಹೆಸರು ರೌಡಿ ಶೀಟರ್ ಪಟ್ಟಿಯಲ್ಲಿ ಬಂದಿದ್ದಕ್ಕೆ ಹೆಮ್ಮೆ ಪಡುತ್ತಿರುವವರು, ಹೀಗಾಗಿ ಸಹಜವಾಗಿಯೇ ಅವರು ತಮ್ಮ ಮೇಲೆ ದೊಡ್ಡ ಬಹುಮಾನ ಘೋಷಿಸಬಹುದು ಎಂದು ಊಹಿಸಿರುತ್ತಾರೆ. ಅವರಿಗೆ ಅಪಮಾನ ಮಾಡಲೆಂದೇ ಪೊಲೀಸರು ಈ ದಾರಿ ತುಳಿದಿದ್ದಾರೆ ಎಂದು ಹೇಳಲಾಗಿದೆ.
ಬಿಟ್ಟು ಹಾಗೂ ತರ್ಬೇಜ್ ಮೇಲೆ ತುಂಬಾ ಗಂಭೀರವಾದ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೊಲೆಯೂ ಕೂಡ ಒಂದು. ಅವರಿಗಾಗಿ ಹಲವು ವರ್ಷಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಸಾರ್ವಜನಿಕರ ಸಹಕಾರವನ್ನು ಕೂಡ ಬೇಡಿದ್ದಾರೆ. ಅವರನ್ನು ಸೆರೆಹಿಡಿಯಲ ಸಹಕಾರ ಬೇಡಿಯೇ ಈ ಒಂದು ನೋಟಿಸ್​ನ್ನು ಇಶ್ಯೂ ಮಾಡಿದ್ದಾರೆ.
ಜೋನ್​ 1ನ ಡಿಸಿಪಿ ವಿನೋದ್ ಮೀನಾ ಹೇಳುವ ಪ್ರಕಾರ ಪರಾರಿಯಾದವರು ತಮ್ಮನ್ನು ತಾವು ನಗರದ ಡಾನ್​ಗಳೆಂದು ಘೋಷಿಸಿಕೊಂಡಿದ್ದಾರೆ. ಅವರ ಮೇಲೆ ದೊಡ್ಡ ಮೊತ್ತದ ಬಹುಮಾನ ಘೋಷಿಸಿದ್ದರೆ ಅದನ್ನೂ ಕೂಡ ತಮ್ಮ ಹೆಮ್ಮೆಯ ಗರಿಯೆಂದು ಸಂಭ್ರಮಿಸುತ್ತಿದ್ದರು. ಅವರ ಯೋಗ್ಯತೆಯನ್ನು ಅವರಿಗೆ ತಿಳಿಸಲು ಅಂತಲೇ ಈ ಒಂದು ಮೊತ್ತದ ಬಹುಮಾನವನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us