ರಾತ್ರಿ 10 ಗಂಟೆ ಸುಮಾರಿಗೆ ನಡೆಯಿತು ಮಾರಣಹೋಮ
ನಾಯಿಗಳು ಜಗಳವಾಡಿದ್ದಕ್ಕೆ ಕೋಪಗೊಂಡ ಸೆಕ್ಯೂರಿಟಿ..!
ಮನೆಯ ಟೆರೆಸ್ನಿಂದ ಶೂಟ್ ಮಾಡಿ ಕೊಂದ ಕಿರಾತಕ
ಇಂದೋರ್: ಸಾಕು ನಾಯಿಗಳ ಬಗ್ಗೆ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬರು ನೆರೆ ಹೊರೆಯವರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಮಧ್ಯಪ್ರದೇಶದ ಇಂದೋರ್ನ ಖಜ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ಬಾಘ್ ಕಾಲೋನಿಯಲ್ಲಿ ರಾತ್ರಿ 10 ಗಂಟೆಗೆ ನಡೆದಿದೆ.
ವಿಮಲ್ (35), ರಾಹುಲ್ ವರ್ಮಾ (28) ಮೃತ ದುರ್ದೈವಿಗಳು. ಇನ್ನು 6 ಜನರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬರೋಡಾ ಬ್ಯಾಂಕ್ನ ಸೆಕ್ಯೂರಿಟಿ ಗಾರ್ಡ್ ಆಗಿರುವ ರಾಜ್ಪಾಲ್ ರಾಜವಾತ್ ಫೈರಿಂಗ್ ಮಾಡಿದ ಆರೋಪಿ ಆಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾತ್ರಿ ವೇಳೆ ರಾಜ್ಪಾಲ್ ರಾಜವಾತ್ ತನ್ನ ಸಾಕು ನಾಯಿ ಜೊತೆ ವಾಕಿಂಗ್ ಮಾಡಲು ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅದೇ ಕಾಲೋನಿಯ ಇನ್ನೊಬ್ಬರು ಕೂಡ ತಮ್ಮ ನಾಯಿ ಜೊತೆ ತೆರಳುತ್ತಿದ್ದರು. ಆಗ ಎರಡು ನಾಯಿಗಳು ಪರಸ್ಪರ ಕಚ್ಚಾಡಿಕೊಂಡಿವೆ. ಇದರಿಂದ ಇಬ್ಬರು ವ್ಯಕ್ತಿಗಳು ವಾಗ್ವಾದಕ್ಕೆ ಇಳಿದಿದ್ದು, ಜನರು ಗುಂಪಾಗಿ ಸೇರಿದ್ದಾರೆ. ಇದು ತೀವ್ರ ಪಡೆದುಕೊಳ್ಳುತ್ತಿದ್ದಂತೆ ಆರೋಪಿ ರಾಜ್ವಾತ್ ತನ್ನ ಮನೆಗೆ ಹೋಗಿ ಲೈಸನ್ಸ್ ಇರುವ ಗನ್ ತೆಗೆದುಕೊಂಡು ಟೆರಸ್ ಮೇಲಿಂದ ಜನರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
इंदौर – गार्ड ने चलाई लायसेंसी बंदूक से एक के बाद एक 3 गोलियां, 9 लोगो को जा कर लगी गोली, गोली लगने से 2 की मौत 7 लोग घायल हुए, पुलिस ने बैंक में कार्यरत गार्ड को गिरफ्तार कर लायसेंसी बंदूक को जप्त किया, खजराना थाना क्षेत्र की घटना #Indore #MadhyaPradesh @OfficeofSSC pic.twitter.com/kDTlAIWjJz
— Gaurav Kumar (@gaurav1307kumar) August 18, 2023
ಶೂಟ್ ಮಾಡಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಆತನ ಡಬಲ್ ಬ್ಯಾರೆಲ್ 12 ಬೋರ್ ಗನ್ ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ