ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ, ಬೀದರ್, ಕಲಬುರಗಿಯಲ್ಲಿ ಪ್ರೊಟೆಸ್ಟ್
ಎಲ್ಲಿಲ್ಲಿ ಹೇಗೆಲ್ಲ ಪ್ರತಿಭಟನೆ ಮಾಡಿದ್ರು..?
ಬೆಂಗಳೂರು: ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಇವತ್ತು ಕೈಗಾರಿಕಾ ಸಂಘಟನೆಗಳು ಪ್ರತಿಭಟನೆ ನಡೆಸ್ತಿವೆ. ಶಿವಮೊಗ್ಗ, ಬೀದರ್, ಯಾದಗಿರಿ, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಎಂಆರ್ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕೈಗಾರಿಕೆಗಳ ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕೂಡಲೇ ವಿದ್ಯುತ್ ದರವನ್ನು ಸರ್ಕಾರ ಇಳಿಸಬೇಕು. ಇಲ್ಲವಾದರೆ ಕೈಗಾರಿಕೋದ್ಯಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ:
ವಾಣಿಜ್ಯೋದ್ಯಮ ಹಾಗೂ ಕೈಗಾರಿಕಾ ಸಂಸ್ಥೆಗಳಿಂದ ವಾಣಿಜ್ಯ ನಾಗರಿಯಲ್ಲೂ ಪ್ರತಿಭಟನೆ ನಡೆದಿದೆ. ಶಾಂತಿಯುತವಾಗಿ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯಲ್ಲಿ 25ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಭಾಗಿಯಾಗಿದ್ದವು. ಕೈಯಲ್ಲಿ ಸೀಮೆ ಎಣ್ಣೆಯ ಚುಮಣಿ ಹಿಡಿದು ಹೆಸ್ಕಾಂ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿ:
ವಾಣಿಜ್ಯೋದ್ಯಮ ಸಂಘದಿಂದ ಕರ್ನಾಟಕ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದರು. ಸಂಭಾಜಿ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಱಲಿಯಲ್ಲಿ ನೂರಾರು ಉದ್ಯಮಿಗಳು ಭಾಗಿಯಾಗಿದ್ದರು.
ಯಾವುದೇ ಕಾರಣಕ್ಕೂ ನಾವು ವಿದ್ಯುತ್ ಬಿಲ್ ತುಂಬಲ್ಲ. ಕೊರೊನಾ ಹೊಡೆತದಿಂದ ಈಗ ಮೇಲೇಳುತ್ತಿದ್ದೇವೆ. ವಿದ್ಯುತ್ ಬಿಲ್ ಏರಿಸಿದ್ರೆ ಮತ್ತೆ ಬರೆ ಎಳೆದಂತಾಗುತ್ತದೆ. ವ್ಯಾಪಾರಿಗಳಿಗಷ್ಟೇ ಅಲ್ಲ, ಜನಸಾಮಾನ್ಯರಿಗೂ ಕರೆಂಟ್ ಬಿಲ್ ಶಾಕ್ ಕೊಟ್ಟಿದೆ. ಸರ್ಕಾರ ಇದನ್ನು ಗಮನಿಸಬೇಕು ರಾಜಕೀಯ ಮಾಡದೇ ಜನಪರ ಕೆಲಸ ಮಾಡಿ ಎಂದು ಆಗ್ರಹಿಸಿದರು.
ಕಲಬುರಗಿ:
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಂಘದಿಂದಲೂ ಪ್ರೊಟೆಸ್ಟ್ ನಡೆಯಿತು. ಹಲವಾರು ವಾಣಿಜೋದ್ಯಮಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸೂಪರ್ ಮಾರ್ಕೆಟ್ನಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಅದೇ ರೀತಿ ಬೀದರ್, ಯಾದಗಿರಿಯಲ್ಲೂ ಪ್ರತಿಭಟನೆ ನಡೆಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ