newsfirstkannada.com

5 ಬೌಂಡರಿ, 3 ಸಿಕ್ಸರ್.. ಅಪ್ಘಾನಿಯರ ವಿರುದ್ಧ ಅಬ್ಬರಿಸಿದ ಸೂರ್ಯ

Share :

Published June 21, 2024 at 11:12am

  ಅಫ್ಘಾನಿಸ್ತಾನ​ ಬೌಲಿಂಗ್​ ಅಟ್ಯಾಕ್​ ಧೂಳಿಪಟ.!

  ಹಾರ್ದಿಕ್​ ಜೊತೆಗೆ ಸೂರ್ಯನ ಅತ್ಯಮೂಲ್ಯ ಜೊತೆಯಾಟ.!

  ಕೊನೆಯ 2 ಪಂದ್ಯದಿಂದ ಫ್ಯಾನ್ಸ್​ ಬಹುಪರಾಕ್​! ಅಫ್ಘನ್ನರು ಥಂಡಾ

ಅಫ್ಘನ್​ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಜಸ್​ಪ್ರಿತ್​ ಬೂಮ್ರಾ ಬೆಂಕಿ ಆಟವಾಡಿದ್ರು. ಆದ್ರೆ, ಬ್ಯಾಟಿಂಗ್​ನಲ್ಲಿ ಸೂರ್ಯಕುಮಾರ್​​ ಕೈ ಹಿಡಿದೇ ಇದ್ದಿದ್ರೆ, ಸೂಪರ್​ 8ನಲ್ಲಿ ಟೀಮ್​ ಇಂಡಿಯಾ ಮೊದಲ ಜಯ ದಾಖಲಿಸ್ತಾ ಇರಲಿಲ್ಲ. ಮೊದಲ ಪಂದ್ಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಸೂರ್ಯ, ಕಳೆದ 2 ಪಂದ್ಯಗಳಿಂದ ತಂಡದ ಆಪತ್ಭಾಂದವನಾಗಿದ್ದಾರೆ. ಯಾರೇ ಕೈ ಕೊಡಲಿ ತಂಡವನ್ನ ಕಾಪಾಡಲು ಸೂರ್ಯ ಇದಾರೆ ಅನ್ನೋ ಆತ್ಮವಿಶ್ವಾಸ ಮೂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡ ಟೀಮ್​ ಇಂಡಿಯಾ ಆರಂಭದಲ್ಲೇ ರನ್​ ಗಳಿಕೆಗೆ ಪರದಾಟ ನಡೆಸಿತ್ತು. ಅದ್ರ ಬೆನ್ನಲ್ಲೇ ರೋಹಿತ್​ ಶರ್ಮಾ, ರಿಷಭ್​ ಪಂತ್​ ಪೆವಿಲಿಯನ್​ ಸೇರಿದ್ರು. ಕೆಲವೇ ಹೊತ್ತಲ್ಲಿ ವಿರಾಟ್​ ಕೊಹ್ಲಿ ಕೂಡ ಪೆವಿಲಿಯನ್​ ಸೇರಿದ್ರು. 8.3 ಓವರ್​ಗಳಲ್ಲಿ ಕೇವಲ 62 ರನ್​ಗಳಿಸಿದ್ದ ಟೀಮ್​ ಇಂಡಿಯಾ 3 ಪ್ರಮುಖ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕಣಕ್ಕಿಳಿದ ಆಪತ್ಭಾಂದವ ಸೂರ್ಯಕುಮಾರ್​, ಸಂಭ್ರಮದಲ್ಲಿದ್ದ ಅಫ್ಘನ್ನರಿಗೆ ಶಾಕ್​ ಕೊಟ್ರು.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಕೊಟ್ಟ ರೋಹಿತ್, ವಿರಾಟ್.. ಅಫ್ಘಾನ್ ವಿರುದ್ಧ ಏನೆಲ್ಲ ಆಯಿತು ಗೊತ್ತಾ?

 ಬಾರ್ಬಡೋಸ್​ನಲ್ಲಿ ಸೂರ್ಯಕುಮಾರ್​ ಸ್ಪೋಟ.!

4ನೇ ಕ್ರಮಾಂಕದಲ್ಲಿ ಕಣಕ್ಕಳಿದ ಸೂರ್ಯಕುಮಾರ್​ ಅಫ್ಘನ್ನರ ಅಟ್ಟಹಾಸಕ್ಕೆ ಬ್ರೇಕ್​ ಹಾಕೇ ಬಿಟ್ರು. ಸ್ಲೋ & ಲೋ ಪಿಚ್​ನಲ್ಲಿ ಕಾದು ಹೊಡೆದ ಸೂರ್ಯಕುಮಾರ್​ ಯಾದವ್​, ಅಫ್ಟನ್​ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಅಫ್ಘಾನಿಸ್ತಾನದ ಸ್ಪಿನ್​ & ಪೇಸ್​ ಅಟ್ಯಾಕ್​ ಮೇಲೆ ದಾಳಿ ನಡೆಸಿದ ಸೂರ್ಯ, ಬಾರ್ಬಡೋಸ್​​ನಲ್ಲಿ ಧೂಳೆಬ್ಬಿಸಿದ್ರು.

5 ಬೌಂಡರಿ, 3 ಸಿಕ್ಸರ್​… 189 ಸ್ಟ್ರೈಕ್​ರೇಟ್​ನಲ್ಲಿ ಘರ್ಜನೆ.!

ಟೀಮ್​ ಇಂಡಿಯಾ ಮೊದಲಾರ್ಧದ ಬ್ಯಾಟಿಂಗ್​ ನೋಡಿದವರ್ಯಾರೂ 180ರ ಹತ್ತಿರ ಹೋಗುತ್ತೆ ಅನ್ನೋ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಎಲ್ಲರ ಲೆಕ್ಕಾಚಾರಗಳನ್ನ ಸೂರ್ಯಕುಮಾರ್​ ಬದಲಿಸಿದ್ರು. 5 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಫ್ಘನ್​ ಆರ್ಭಟಕ್ಕೆ ಬ್ರೇಕ್​ ಹಾಕಿದ್ರು. ಸತತ 2 ಹಾಫ್​ ಸೆಂಚುರಿ ಸಿಡಿಸಿದ ಸೂರ್ಯ, ಎದುರಿಸಿದ 28 ಎಸೆತಗಳಲ್ಲಿ 53 ರನ್​ ಸಿಡಿಸಿದ್ರು.

ಇದನ್ನೂ ಓದಿ: ಕೊನೆಯ 10 ಓವರ್​ಗಳಲ್ಲಿ ರನ್​ ಹೊಳೆ.. ಬೂಮ್ ಬೂಮ್ ಬಿರುಗಾಳಿ ಹೆಂಗಿತ್ತು ಗೊತ್ತಾ..

ಹಾರ್ದಿಕ್​ ಜೊತೆಗೆ ಅತ್ಯಮೂಲ್ಯ ಜೊತೆಯಾಟ.!

ತಾನೊಬ್ಬನೇ ರನ್​ಗಳಿಸಿದ್ದು ಮಾತ್ರವಲ್ಲ.. 5ನೇ ವಿಕೆಟ್​ಗೆ ಹಾರ್ದಿಕ್​ ಪಾಂಡ್ಯ ಜೊತೆಗೆ ಕ್ರೂಶಿಯಲ್​ ಜೊತೆಯಾಟದಲ್ಲೂ ಸೂರ್ಯ ಭಾಗಿಯಾದ್ರು. ಈ ಜೋಡಿ 37 ಎಸೆತಗಳಲ್ಲಿ ಗಳಿಸಿದ 60 ರನ್​ಗಳೇ​ ಪಂದ್ಯದ ಗತಿಯನ್ನ ಬದಲಿಸಿದ್ದು ಅಂದ್ರೆ ತಪ್ಪಾಗಲ್ಲ.

ಮೊದಲ 2 ಪಂದ್ಯ ಟೀಕೆ.. ಕೊನೆಯ 2 ಪಂದ್ಯ ಬಹುಪರಾಕ್​.!

ಇದೇ​ ಟಿ20 ವಿಶ್ವಕಪ್​ ಮಹಾಸಮರದ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈಕರ್​ ಸೂರ್ಯಕುಮಾರ್​ ವೈಫಲ್ಯ ಅನುಭವಿಸಿದ್ರು. ಆಗ ತೀವ್ರ ಟೀಕೆಗೂ ಗುರಿಯಾಗಿದ್ರು. ಆದ್ರೆ, ಕಳೆದ 2 ಪಂದ್ಯಗಳಿಂದ ಟೀಮ್​ ಇಂಡಿಯಾ ಪಾಲಿನ ಆಪತ್ಭಾಂದವನಾಗಿದ್ದಾರೆ. ಯುಎಸ್​​ಎ ಎದುರಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತೆ ಬಿಡುತ್ತೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಕೊನೆಯವರೆಗೂ ಹೋರಾಡಿದ ಸೂರ್ಯ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್​​​ ಕಸ್ಟಡಿಗೆ.. ಈ ಆ್ಯಂಗಲ್​ನಲ್ಲಿ ನಡಿಯಲಿದೆ ತನಿಖೆ

ನಿನ್ನೆ ನಡೆದ 2 ಪಂದ್ಯದಲ್ಲೂ ಸಂಕಷ್ಟದಲ್ಲಿದ್ದಾಗ ತಂಡದ ಕೈ ಹಿಡಿದ ಸೂರ್ಯ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ರು. ಸೂರ್ಯನ ಸ್ಪೋಟಕ ಅರ್ಧಶತಕದ ನೆರವಿನಿಂದ ತಂಡ ಸವಾಲಿನ​ ಸ್ಕೋರ್​ ಕಲೆ ಹಾಕಿತು. ಸೂಪರ್ 8ನಲ್ಲಿ ಟೀಮ್​ ಇಂಡಿಯಾ ಮೊದಲ ಗೆಲುವನ್ನೂ ದಾಖಲಿಸಿತು. ಆಪತ್ಭಾಂದವ ಸೂರ್ಯನ ಆಟ ಮುಂದೆಯೂ ಟೂರ್ನಿಯಲ್ಲಿ ಹೀಗೆ ಮುಂದುವರೆಯಲಿ. ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಡಲಿ ಅನ್ನೋದೆ ಎಲ್ಲಾ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

5 ಬೌಂಡರಿ, 3 ಸಿಕ್ಸರ್.. ಅಪ್ಘಾನಿಯರ ವಿರುದ್ಧ ಅಬ್ಬರಿಸಿದ ಸೂರ್ಯ

https://newsfirstlive.com/wp-content/uploads/2024/06/Surya-kumar-Yadav-2.jpg

Load More