newsfirstkannada.com

IND vs AUS: 7547 ದಿನಗಳ ಹಳೆಯ ಸೇಡು.. ಅಂದು 43 ರನ್​ಗೆ ಔಟಾಗಿದ್ದ ದ್ರಾವಿಡ್​ ಇಂದು ಕೋಚ್​ ಆಗಿ ಸೇಡು ತೀರಿಸಿಕೊಳ್ಳಲಿದ್ದಾರಾ?

Share :

19-11-2023

    ಅಂದು 125 ರನ್​ಗಳ ಹೀನಾಯ ಸೋಲು ಕಂಡಿದ್ದ ಭಾರತ

    ಇಂದು ಆಸೀಸ್​ ವಿರುದ್ಧ ಬಡ್ಡಿ ಸಮೇತ ಜಯ ವಾಪಸ್ಸು ಪಡೆಯುವ ದಿನ

    ಅಂದು ದಾಂಡಿಗ, ಇಂದು ಮುಖ್ಯ ಕೋಚ್​.. ದ್ರಾವಿಡ್​ ಸೇಡು ತಿರೀಸೋದು ಪಕ್ಕಾ!

ಅದು ಮಾರ್ಚ್​ 23,2003. ಜೋಹಾನ್ಸ್​ಬರ್ಗ್​ನಲ್ಲಿ ಟೀಂ ಇಂಡಿಯಾ ಮತ್ತು ಆಸೀಸ್​​ ತಂಡ ಮುಖಾಮುಖಿಯಾದ ದಿನ. ಭಾರತದ ವಿರುದ್ಧ ಮೊದಲು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ತಂದ ಭರ್ಜರಿಯಾಗಿ ಬ್ಯಾಟ್​ ಬೀಸಿತ್ತು. ರಿಕ್ಕಿ ಪಾಂಟಿಂಗ್ 140 ರನ್​ಗಳ ಸ್ಫೋಟಕ ಆಟದೊಂದಿಗೆ ತಂಡಕ್ಕೆ 359 ರನ್​ಗಳನ್ನು ಪೇರಿಸಿದ್ದರು. ಆದರೆ ಈ ರನ್​ ಗುರಿಮುಟ್ಟಲು ಅಂದು ಟೀಂ ಇಂಡಿಯಾ ಎಡವಿತ್ತು.

ಆಸೀಸ್​ ನೀಡಿದ ಗುರಿಯ ಬೆನ್ನಟ್ಟಲು ಮುಂದಾದ ಸಚಿನ್​ ತೆಂಡೂಲ್ಕರ್​ ಮೊದಲ ಓವರ್​ನಲ್ಲೇ ಎಡವಿದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೂ ದೊಡ್ಡ ಶಾಕ್​ ಕೊಟ್ಟಿತ್ತು. ಕಾರಣ ಗ್ಲೆನ್​ ಮೆಕ್​ಗ್ರೌತ್​ 5ನೇ ಎಸೆತಕ್ಕೆ ಔಟಾದರು. ಬಳಿಕ ವಿರೇಂದ್ರ ಸೆಹ್ವಾಗ್​ 81 ರನ್​ ಮತ್ತು ದ್ರಾವಿಡ್​ 47 ರನ್​ ಹೊರತುಪಡಿಸಿ ಒಬ್ಬರನ್ನೊಬ್ಬರು ಔಟಾಗುತ್ತಲೇ ಹೋದರು. ಈ ಪಂದ್ಯಲ್ಲಿ ಟೀಂ ಇಂಡಿಯಾ 125 ರನ್​ಗಳ ಹೀನಾಯ ಸೋಲನ್ನು ಕಂಡಿತ್ತು.

ಇದನ್ನು ಓದಿ: World Cup 2023: ಯಾರಿಗುಂಟು.. ಯಾರಿಗಿಲ್ಲ! ಭಾರತ ಗೆದ್ದರೆ 100 ಕೋಟಿ ರೂಪಾಯಿ ನೀಡುತ್ತೇನೆಂದ ಆಸ್ಟ್ರೋಟಾಕ್​ ಸಿಇಒ!

ಆದರೀಗ ಮತ್ತೆ ಅಂದು ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳುವ ದಿನ. 7547 ದಿನಗಳ ಅಂತರದಲ್ಲಿ ಭಾರತವು ಆಸೀಸ್​ ಅನ್ನು ಮಣ್ಣು ಮುಕ್ಕಿಸಬೇಕಾದ ದಿನ ಮತ್ತೆ ಬಂದಿದೆ. ಮಾತ್ರವಲ್ಲದೆ, ಅಂದು ಟೀಂ ಇಂಡಿಯಾದ ತಂಡದಲ್ಲಿದ್ದ ರಾಹುಲ್​ ದ್ರಾವಿಡ್​ ಇಂದು ತಂಡದ ಕೋಚ್​ ಆಗಿದ್ದಾರೆ. ಬಡ್ಡಿ ಸಮೇತ ಜಯವನ್ನು ವಾಪಾಸು ತರಲು ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಟೀಂ ಇಂಡಿಯಾದ ಮೇಲೆ ನಿರೀಕ್ಷೆ ಮಾತ್ರ ದುಪ್ಪಟ್ಟಾಗಿದ್ದು, ಇಂಡಿಯನ್ಸ್​ ಫ್ಯಾನ್ಸ್​ ಮಾತ್ರ ಈ ಬಾರಿ ಟ್ರೋಫಿ ನಮ್ದೇ ಎಂದು ಜಪಿಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs AUS: 7547 ದಿನಗಳ ಹಳೆಯ ಸೇಡು.. ಅಂದು 43 ರನ್​ಗೆ ಔಟಾಗಿದ್ದ ದ್ರಾವಿಡ್​ ಇಂದು ಕೋಚ್​ ಆಗಿ ಸೇಡು ತೀರಿಸಿಕೊಳ್ಳಲಿದ್ದಾರಾ?

https://newsfirstlive.com/wp-content/uploads/2023/11/Team-India-7.jpg

Load More