newsfirstkannada.com

×

INDvsNED: ಟಾಸ್​ ಗೆದ್ದ ಟೀಂ ಇಂಡಿಯಾ.. ಬ್ಯಾಟಿಂಗ್​ ಆಯ್ದು ಕೊಂಡ ರೋಹಿತ್ ಪಡೆ

Share :

Published November 12, 2023 at 1:38pm

Update November 12, 2023 at 1:42pm

    ಇಂದು ಚಿನ್ನಸ್ವಾಮಿ ಮೈದಾನದಲ್ಲಿ INDvsNED ಜಿದ್ದಾಜಿದ್ದಿ

    ಗೆಲುವಿಗೆ ಪಣ ತೊಡಲು ಸಜ್ಜಾದ ನದರ್​ಲ್ಯಾಂಡ್​ ಪಡೆ

    50ನೇ ಸೆಂಚುರಿ ಬಾರಿಸುವ ನಿರೀಕ್ಷೆಯಲ್ಲಿ ವಿರಾಟ್​ ಕೊಹ್ಲಿ

ಭಾರತ ಮತ್ತು ನೆದರ್​ ಲ್ಯಾಂಡ್​ ತಂಡ ಚಿನ್ನಸ್ವಾಮಿ ಮೈದಾನದಲ್ಲಿ ಬಿಡುಬಿಟ್ಟಿದೆ. ಮೊದಲಿಗೆ ಟಾಸ್​ ಗೆದ್ದ ರೋಹಿತ್​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ. ಅತ್ತ ನೆದರ್​ಲ್ಯಾಂಡ್​​ ಬೌಲಿಂಗ್​ ಅವಕಾಶ ಪಡೆಯುವ ಮೂಲಕ ಟೀಂ ಇಂಡಿಯಾವನ್ನು ಸೋಲಿಸಲು ಪಣ ತೊಟ್ಟಿದೆ.

ಅಂದಹಾಗೆಯೇ ಇಂದು ಟೀಂ ಇಂಡಿಯಾ 9ನೇ ಪಂದ್ಯವನ್ನು ಎದುರಿಸುತ್ತಿದೆ. ಈವರೆಗೆ ಆಡಿದ 8 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು, 9ನೇ ಪಂದ್ಯದಲ್ಲೂ ಟೀಂ ಇಂಡಿಯಾಗೆ ಜಯ ಸಿಗಲಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ನೆದರ್​​ಲ್ಯಾಂಡ್​ ವಿಚಾರಕ್ಕೆ ಬರೋದಾದರೆ, ಆಡಿರುವ 8 ಪಂದ್ಯದಲ್ಲಿ 6 ಪಂದ್ಯ ಸೋತಿದೆ. 2 ಪಂದ್ಯ ಗೆದ್ದಿದೆ. ಹಾಗಾಗಿ ಭಾರತ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಎದ್ದು ಕಾಣುತ್ತಿದೆ.

ಇವಿಷ್ಟು ಮಾತ್ರವಲ್ಲದೆ ಇಂದಿನ ಪಂದ್ಯದಲ್ಲಿ ಎಲ್ಲರ ಕಣ್ಣು ಕೊಹ್ಲಿ ಮೇಲಿದೆ. ಯಾಕೆಂದರೆ ಕೊಹ್ಲಿ 50ನೇ ಸೆಂಚುರಿ ಭಾರಿಸಲು ಬಾಕಿ ಉಳಿದಿದೆ. ಅದು ಆರ್​ಸಿಬಿ ತವರಲ್ಲೇ ಸಾಧ್ಯವಾಗಲಿದೆ ಎಂಬುದು ಫ್ಯಾನ್ಸ್​ ಮನದಾಸೆಯಾಗಿದೆ. ಅದರಂತೆಯೇ ಮೈದಾನದ ಹೊರಗೆ ಕೊಹ್ಲಿ ಈವರೆಗೆ ಬಾರಿಸಿದ ಸೆಂಚುರಿಗಳ ಝಲಕ್​ ಅನ್ನು ಕಟೌಟ್​ ನಿರ್ಮಿಸಿ ಇಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

INDvsNED: ಟಾಸ್​ ಗೆದ್ದ ಟೀಂ ಇಂಡಿಯಾ.. ಬ್ಯಾಟಿಂಗ್​ ಆಯ್ದು ಕೊಂಡ ರೋಹಿತ್ ಪಡೆ

https://newsfirstlive.com/wp-content/uploads/2023/11/Rohit-Sharma-1-1.jpg

Load More