newsfirstkannada.com

ನಿನ್ನೆ ಪಂದ್ಯ ಗೆದ್ರೂ ಬೌಲಿಂಗ್​​ನಲ್ಲಿ ತಿಣುಕಾಟ.. ವಿಕೆಟ್ ಪಡೆಯಲು ಇಂಡಿಯನ್ ಬೌಲರ್ಸ್ ಪರದಾಡಿದ್ಯಾಕೆ?

Share :

13-11-2023

    ಡೆಡ್ಲಿ ಬೌಲಿಂಗ್ ಅಟ್ಯಾಕ್ ತಂಡಕ್ಕೆ ಇದೇನಾಯ್ತು..? 

    ಲೀಗ್​​​ ಫೈನಲ್​ ಮ್ಯಾಚ್​​ನಲ್ಲಿ ಫೈರಿ ಸ್ಪೆಲ್​ ಮಾಯ..! 

    ನೆದರ್​​ರ್ಲೆಂಡ್ಸ್​​ ವಿರುದ್ಧದ ಪರದಾಟಕ್ಕೆ ಕಾರಣವೇನು..?

ದಕ್ಷಿಣ ಆಫ್ರಿಕಾ 83 ರನ್​​ಗಳಿಗೆ ಆಲೌಟ್​​,  ಶ್ರೀಲಂಕಾ 55 ರನ್​​ಗೆ ಆಟ ಕ್ಲೋಸ್​​​​, ಇಂಗ್ಲೆಂಡ್​​ 129 ರನ್​ಗೆ ಸರ್ವಪತನ, ಪಾಕಿಸ್ತಾನ 192 ರನ್​ಗಳಿಗೆ ಉಡೀಸ್​​. ವಿಶ್ವಕಪ್​​ನಲ್ಲಿ  ಟೀಮ್ ಇಂಡಿಯಾದ ಬೆಂಕಿ ಬಿರುಗಾಳಿಗೆ ಬಲಿಷ್ಠ ತಂಡಗಳು ತತ್ತರಿಸಿದ ಪರಿ ಇದು. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್​​​​​​ ಹಾಗೂ ಪಾಕಿಸ್ತಾನ, ಭಾರತದ ಡೆಡ್ಲಿ ಸ್ಪೆಲ್​ಗೆ ಬೆಚ್ಚಿ ಬಿದ್ದಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ಈ ಎಲ್ಲಾ ತಂಡಗಳ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಬೌಲಿಂಗ್​​ ಪರಾಕ್ರಮ ಮೆರೆದಿತ್ತು.

8 ಪಂದ್ಯ ಒಕೆ..9ನೇ ಮ್ಯಾಚ್​​ನಲ್ಲಿ ಹೀಗ್ಯಾಕೆ..? 

ಮೊದಲ 8 ಪಂದ್ಯಗಳಲ್ಲಿ ಜಬರ್ದಸ್ತ್​​​ ಬೌಲಿಂಗ್​ ಮಾಡಿ ಇಂಡಿಯನ್​ ಕಲಿಗಳು ಸೈ ಅನ್ನಿಸಿಕೊಂಡಿದ್ರು. ಅಂತಹದೇ ಮತ್ತೊಂದು ಫೈರಿ ಬೌಲಿಂಗ್​​​​ ಸ್ಪೆಲ್​​​ ನಿನ್ನೆ ಮೂಡಿ ಬರುತ್ತೆ ಎಂದು ಎಲ್ಲರೂ ಭಾವಿಸಿದ್ರು. ಯಾಕಂದ್ರೆ ಮೊದಲ ಎಂಟು ಟೀಮ್ಸ್​ಗೆ ಹೋಲಿಸಿದ್ರೆ ನೆದರ್​ರ್ಲೆಂಡ್ಸ್​​ ಡಮ್ಮಿ. ಆದರೆ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆದಿದ್ದೇ ಬೇರೆ.

ಪಂದ್ಯ ಗೆದ್ರೂ ಬೌಲಿಂಗ್​​ನಲ್ಲಿ ತಿಣುಕಾಟ..! 

ನೆದರ್​​ರ್ಲೆಂಡ್ಸ್​ ವಿರುದ್ಧ 160 ರನ್​ಗಳಿಂದ ಗೆದ್ದು ಬೀಗ್ತು..ಅನ್​​​ಬೀಟನ್​​​ ಅನ್ನೋ ಟ್ಯಾಗ್​ಲೈನ್​ ಕಂಟಿನ್ಯೂ ಆಯ್ತು. ಎಲ್ಲವೂ ಸರಿ, ಆದರೆ ರೋಹಿತ್​​​ ಪಡೆ ಪಂದ್ಯ ಗೆದ್ದರೂ ಬೌಲಿಂಗ್​ನಲ್ಲಿ ಸೋತಿದೆ. ಹೌದು, ಬಲಾಡ್ಯವಲ್ಲದ ತಂಡದೆದುರು ಇಂಡಿಯನ್ ಬೌಲರ್ಸ್​ ಇನ್ನಿಲ್ಲದಂತೆ ತಿಣುಕಾಡಿ ಬಿಟ್ರು. ಅದ್ಯಾವ ಮಟ್ಟಿಗೆ ಅಂದ್ರೆ ಘಟಾನುಘಟಿ ಬ್ಯಾಟ್ಸ್​ಮನ್​ಗಳನ್ನ ಗಿರಗಿರನೇ ತಿರುಗಿಸಿದ್ದ ಇಂಡಿಯನ್ ಬೌಲರ್ಸ್​ ನಿನ್ನೆ ಮಾತ್ರ ವಿಕೆಟ್ ಪಡೆಯಲು ಏದುಸಿರು ಬಿಟ್ರು..!

ನೆದರ್​ರ್ಲೆಂಡ್ಸ್ ವಿರುದ್ಧ ಇಂಡಿಯನ್ ಬೌಲರ್ಸ್​..!

ಪವರ್ ಪ್ಲೇ ಸ್ಪೆಷಲಿಸ್ಟ್​​​ ಮೊಹಮ್ಮದ್ ಸಿರಾಜ್​​ ನಿನ್ನೆ ಹಳೇ ಮೊನಚು ಕಳೆದುಕೊಂಡಿದ್ರು. 6 ಓವರ್​ ಬೌಲಿಂಗ್ ಮಾಡಿದ ಸಿರಾಜ್ 29 ರನ್​ ನೀಡಿ ಬರೀ 2 ವಿಕೆಟ್​​ ಕಬಳಿಸಿದ್ರು. ಇನ್ನು ಸ್ವಿಂಗ್ ಮಾಸ್ಟರ್ ಮೊಹಮ್ಮದ್​ ಶಮಿ 6 ಬೌಲಿಂಗ್​​​​​ ಮಾಡಿ 41 ರನ್ ನೀಡಿದ್ರೂ ಒಂದೂ ವಿಕೆಟ್ ಪಡೆಯದೇ ಇದ್ದದ್ದು ಅಚ್ಚರಿ ಮೂಡಿಸ್ತು. ಕುಲ್​ದೀಪ್​​​​ ಯಾದವ್​​ 2 ವಿಕೆಟ್​ ಕಬಳಿಸಿದ್ರೂ ರನ್​ ನೀಡುವಿಕೆಯಲ್ಲಿ ದುಬಾರಿಯಾದ್ರು. ಆಲ್​ರೌಂಡರ್ ಜಡೇಜಾ 9 ಬೌಲಿಂಗ್ ಮಾಡಿದ್ರೆ 49 ಬಿಟ್ಟುಕೊಟ್ಟು ಪಡೆದಿದ್ದು 2 ವಿಕೆಟ್ ಮಾತ್ರ.

ಬೌಲರ್ಸ್​ ಪರದಾಟಕ್ಕೆ ಬೇಸತ್ತ ಕ್ಯಾಪ್ಟನ್ ರೋಹಿತ್​​..! 

ವಿಕೆಟ್ ಪಡೆಯಲು ಬೌಲರ್ಸ್​ ತಿಣುಕಾಟ ನಡೆಸಿದ್ದು ಕ್ಯಾಪ್ಟನ್ ರೋಹಿತ್​ ಶರ್ಮಾರನ್ನ ಫ್ರಸ್ಟ್​ರೇಶನ್​ಗೆ ಒಳಗಾಗುವಂತೆ ಮಾಡಿತು. ಪದೇ ಪದೇ ಚೇಂಜ್ ಮಾಡಿದ್ರೂ ಕ್ಯಾಪ್ಟನ್​ ತಂತ್ರ ಕೈಕೊಡ್ತು. ಆ ಬೇಸರ ರೋಹಿತ್​​​​​ರ ಎಕ್ಸ್​ಪ್ರೆಶನ್ ಹಾಗೂ ಕಳಪೆ ಫೀಲ್ಡಿಂಗ್​ನಲ್ಲಿ ಕಂಡು ಬಂತು.

ಒಟ್ಟಿನಲ್ಲಿ 8 ಪಂದ್ಯದಲ್ಲಿ ದಮ್ದಾರ್ ಪರ್ಫಾಮೆನ್ಸ್ ನೀಡಿದ್ದ ಇಂಡಿಯನ್ ಬೌಲರ್ಸ್​ ನಿನ್ನೆ ಮಾತ್ರ ಡಚ್ಚರ ವಿರುದ್ಧ ಪರದಾಡಿದ್ರು. ಸೆಮಿಸ್​ ಟಿಕೆಟ್​​ ಆಲ್​ರೆಡಿ ಫಿಕ್ಸ್ ಆಗಿದೆ. ಈ ಅತಿಯಾದ ಆತ್ಮವಿಶ್ವಾಸ ಬೌಲರ್​ಗಳ ಫೈರಿ ಸ್ಪೆಷಲ್ ಮಾಯವಾಗುಂತೆ ಮಾಡಿದೆ. ಆದ್ರೆ ಸೆಮಿಸ್​ ಬ್ಯಾಟಲ್​ನಲ್ಲಿ ಕಿವೀಸ್​​ನಂತ ಬಲಿಷ್ಠ ತಂಡವನ್ನ ಬಗ್ಗುಬಡಿಯಬೇಕಾದ್ರೆ ನೆಗ್ಲಿಜೆನ್ಸ್​​ ಮೂಡ್​​​​​​​​ನಿಂದ ಹೊರಬರಲೇಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಿನ್ನೆ ಪಂದ್ಯ ಗೆದ್ರೂ ಬೌಲಿಂಗ್​​ನಲ್ಲಿ ತಿಣುಕಾಟ.. ವಿಕೆಟ್ ಪಡೆಯಲು ಇಂಡಿಯನ್ ಬೌಲರ್ಸ್ ಪರದಾಡಿದ್ಯಾಕೆ?

https://newsfirstlive.com/wp-content/uploads/2023/11/Team-India-5.jpg

Load More