ವಾಂಖೆಡೆಯಲ್ಲಿ ನನಸಾಗಿತ್ತು 28 ವರ್ಷಗಳ ಕನಸು
ನೋವು ಮರೆಸಿ ಸಂಭ್ರಮಿಸುವಂತೆ ಮಾಡುತ್ತಾ ವಾಂಖೆಡೆ..?
ಚಾಂಪಿಯನ್ ಆಗಿದ್ದ ನೆಲದಲ್ಲೇ ಫೈನಲ್ಗೇರುವ ಹಂಬಲ!
ಇವತ್ತಿನ ಪಂದ್ಯ ಜಸ್ಟ್ ಒಂದು ಪಂದ್ಯ ಮಾತ್ರವೇ ಆಗಿಲ್ಲ. ಕೋಟ್ಯಾಂತರ ಅಭಿಮಾನಿಗಳ ಕನಸು. 12 ವರ್ಷಗಳ ಬಳಿಕ ಇಂಡಿಯನ್ಸ್ ಫ್ಯಾನ್ಸ್ ಮುಖದಲ್ಲಿ ಮಂದಹಾಸ ಮೂಡಿಸುವ ಮಹಾ ಕಾಳಗವಾಗಿದೆ. ಅಷ್ಟೇ ಅಲ್ಲ.! ಭಾರತೀಯ ಅಭಿಮಾನಿಗಳ ನೋವಿಗೆ ಮುಲಾಮು ಹಚ್ಚುವ ಮ್ಯಾಚ್. ಅದ್ಯಾಕೆ ಅಂತೀರಾ ಈ ಸ್ಟೋರಿ ಓದಿ.
ಇಂಡೋ-ಕಿವೀಸ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಸಕಲ ರೀತಿಯಲ್ಲಿ ಸಜ್ಜಾಗಿದೆ. 12 ವರ್ಷಗಳ ಹಿಂದೆ ವಾಂಖೆಡೆಯಲ್ಲಿ ಕೋಟ್ಯಾಂತರ ಅಭಿಮಾನಿಗಳ ಕನಸು ನನಸು ಮಾಡಿದ್ದ ಟೀಮ್ ಇಂಡಿಯಾ, ಮತ್ತೊಮ್ಮೆ ಅಭಿಮಾನಿಗಳ ಮಹಾದಾಸೆ ಪೂರೈಸುವ ಹೊಣೆಗಾರಿಕೆ ಹೊತ್ತಿದೆ. ಇನ್ಫ್ಯಾಕ್ಟ್ ಅಭಿಮಾನಿಗಳ ಎಕ್ಸ್ಪೆಕ್ಟೇಷನ್ ಕೂಡ ಅದೇ ಇದೆ. ಇದಕ್ಕೆ ಕಾರಣ 2011ರ ಏಕದಿನ ವಿಶ್ವಕಪ್.
ವಾಂಖೆಡೆಯಲ್ಲಿ ನನಸಾಗಿತ್ತು 28 ವರ್ಷಗಳ ಕನಸು
1983ರ ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ, ಮತ್ತೊಮ್ಮೆ ಏಕದಿನ ವಿಶ್ವಕಪ್ ಗೆಲ್ಲೋಕೆ ಬರೋಬ್ಬರಿ 28 ವರ್ಷಗಳೇ ಬೇಕಾಯ್ತು. ಇದೇ ವಾಂಖೆಡೆಯ ಫೈನಲ್ ಮ್ಯಾಚ್ನಲ್ಲಿ ಧೋನಿ ಗೆಲುವಿನ ಸಿಕ್ಸರ್, ಕೋಟ್ಯಾಂತರ ಆಸೆಯನ್ನ ಈಡೇರಿಸಿತ್ತು. ಭಾರತದಾದ್ಯಂತ ಸಂಭ್ರಮ ಮನೆ ಮಾಡುವಂತೆ ಮಾಡಿತ್ತು. ಟೀಮ್ ಇಂಡಿಯಾ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನವಾಗಿಸಿತ್ತು.
1 ರನೌಟ್.. ಅಭಿಮಾನಿಗಳ ಕನಸು ನುಚ್ಚುನೂರು!
2019ರ ಏಕದಿನ ವಿಶ್ವಕಪ್ ಸೆಮಿಸ್ ಕದನ. ಇಂಗ್ಲೆಂಡ್ನ ಮ್ಯಾನ್ಚೆಸ್ಟರ್ನ ಸೆಮಿಫೈನಲ್ನಲ್ಲಿ ಕಿವೀಸ್ ಎದುರು ಎಡವಿದ್ದ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತ್ತು. ಇದರೊಂದಿಗೆ ವಿಶ್ವಕಪ್ ಗೆಲ್ಲೋ ಮಹಾದಾಸೆ ಚಿದ್ರಗೊಂಡಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ರನೌಟ್.. ಎಮ್.ಎಸ್.ಧೋನಿಯ ರನೌಟ್..
ಧೋನಿ ರನೌಟ್ ಇಂದಿಗೂ ಸಹಿಸಲಾಗದ ನೋವು!
ಹೌದು! ಎಮ್.ಎಸ್.ಧೋನಿಯ ಒಂದೇ ಒಂದು ರನೌಟ್.. ಟೀಮ್ ಇಂಡಿಯಾವನ್ನೇ ಅಲ್ಲ. ಕೋಟ್ಯಾಂತರ ಭಾರತೀಯರ ಕನಸನ್ನ ನುಚ್ಚುನೂರು ಮಾಡಿತ್ತು. ಟೀಮ್ ಇಂಡಿಯಾ ಆಟಗಾರರ ಕಣ್ಣೀರು ಜಿನುಗುವಂತೆ ಮಾಡಿತ್ತು. ಸ್ವತಃ ರನೌಟ್ ಆಗಿದ್ದ ಮಾಹಿ ಜೊತೆಗೆ ರೋಹಿತ್ ಶರ್ಮಾ ಕಣ್ಣೀರು ಹಾಕಿದ್ರು. ಘೋಷಣೆಗಳೊಂದಿಗೆ ಗಿಜುಗುಡುತ್ತಿದ್ದ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಆದ್ರೀಗ ಈ ನೋವು ಮರೆಸುವ ಟೈಮ್ ಬಂದಾಗಿದೆ.

2019ರಲ್ಲಿ ಕೋಟ್ಯಂತರ ಅಭಿಮಾನಿಗಳ ಕನಸನ್ನ ನುಚ್ಚುನೂರಾಗಿಸಿದ್ದ ರನೌಟ್ ಘಟನೆಗೆ, ಧೋನಿ, ರೋಹಿತ್ ಶರ್ಮಾ ಬಿಕ್ಕಿಬಿಕ್ಕಿ ಅತ್ತಿದ್ದ ನೋವಿಗೆ ಈಗ ಮುಲಾಮು ಹಚ್ಚುವ ಟೈಮ್ ಬಂದಿದೆ. ಐಕಾನಿಕ್ ವಾಂಖೆಡೆಯಲ್ಲಿ ಕಿವೀಸ್ನ ಬಗ್ಗು ಬಡೆಯೋ ಸುವರ್ಣವಕಾಶ, ಇಂದು ಟೀಮ್ ಇಂಡಿಯಾ ಮುಂದಿದೆ.
ಅಷ್ಟೇ ಅಲ್ಲ.! 12 ವರ್ಷಗಳ ಹಿಂದೆ ಧೋನಿಯ ಸಿಕ್ಸರ್ನೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದ್ದ ಟೀಮ್ ಇಂಡಿಯಾ, ಇದೀಗ ಅದೇ ಮೈದಾನದಲ್ಲಿ ಧೋನಿ ಕಣ್ಣೀರಿನ ಜೊತೆಗೆ ಕೋಟ್ಯಾಂತರ ಅಭಿಮಾನಿಗಳ ನೋವಿಗೆ ಉತ್ತರಿಸುವ ಸಮಯ ಬಂದಿದೆ. ಜೊತೆಗೆ 2019ರ ಸೋಲಿನ ರಿವೇಂಜ್ಗೆ ಗೆಲುವಿನ ಅನ್ಸರ್ನೊಂದಿಗೆ ಫೈನಲ್ಗೇರಬೇಕಿದೆ.
ವಾಂಖೆಡೆ, 4 ವರ್ಷಗಳ ರಿವೇಂಜ್ಗೆ ಪರ್ಫೆಕ್ಟ್ ವೇದಿಕೆಯಾಗಿದ್ದು, ಇದೇ ಅಂಗಳದಲ್ಲಿ ಟೀಮ್ ಇಂಡಿಯಾ ಗೆದ್ದು, ಫೈನಲ್ಗೇರಲಿ ಅನ್ನೋದೆ ಕೋಟ್ಯಾಂತರ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ