/newsfirstlive-kannada/media/post_attachments/wp-content/uploads/2023/11/IND-vs-NZ-1.jpg)
INDvsNZ Semi Finbal Match: ಇಂದು ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್​ ತಂಡ ವಾಂಖೆಡೆಯಲ್ಲಿ ಮುಖಾಮುಖಿಯಾಗಿದೆ. ಸೆಮಿಫೈನಲ್​ಗೆ ಲಗ್ಗೆ ಇಟ್ಟ ಇತ್ತಂಡಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸದ್ಯ ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್​ ​​ಆಯ್ದುಕೊಂಡಿದ್ದು, ಕಿವೀಸ್​ಗೆ ಸವಾಲೆಸೆಯಲು ಮುಂದಾಗಿದೆ.
ಟೀಮ್​ ಇಂಡಿಯಾ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯ ಕೇವಲ ಸೆಮಿಫೈನಲ್​ ಪಂದ್ಯವಾಗಿ ಮಾತ್ರ ಉಳಿದಿಲ್ಲ. ಇದು ಸೇಡಿನ ಸಮರವಾಗಿ ಬದಲಾಗಿದೆ. ರಣಾಂಗಣದಲ್ಲಿ ಬ್ಯಾಟ್​ & ಬೌಲ್​ ಅನ್ನೋ ವೆಪನ್​ ಹಿಡಿದು ಯುದ್ಧ ಗೆಲ್ಲುವ ಉತ್ಸಾಹ ಟೀಮ್​ ಇಂಡಿಯಾದ್ದಾಗಿದೆ. ಈ ಹಿಂದೆ ಕಿವೀಸ್​ ಕ್ರಿಕೆಟರ್ಸ್​ ಅಂದ್ರೆ ಒಂದು ವಿಶೇಷವಾದ ಗೌರವ, ಪ್ರೀತಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಇತ್ತು. ಆದ್ರೆ 2019ರ ವಿಶ್ವಕಪ್​​ ಸೆಮೀಸ್​ ಸೋಲಿನ ಬಳಿಕ ಅದೆಲ್ಲಾ ಬದಲಾಗಿದೆ. ಹೀಗಾಗಿ ಇದೊಂದು ಸೇಡಿನ ಸಮರ ಎಂದು ಹೇಳಬಹುದಾಗಿದೆ.
? Toss Update from Mumbai ?
Rohit Sharma wins the toss and #TeamIndia have elected to bat in Semi-Final 1 ?
Follow the match ▶️ https://t.co/FnuIu53xGu#CWC23 | #MenInBlue | #INDvNZpic.twitter.com/HZW9piWA4u
— BCCI (@BCCI)
🚨 Toss Update from Mumbai 🚨
Rohit Sharma wins the toss and #TeamIndia have elected to bat in Semi-Final 1 🙌
Follow the match ▶️ https://t.co/FnuIu53xGu#CWC23 | #MenInBlue | #INDvNZpic.twitter.com/HZW9piWA4u— BCCI (@BCCI) November 15, 2023
">November 15, 2023
ಇನ್ನು ಮೆಗಾ ಟೂರ್ನಿಯ ಲೀಗ್​ ಸ್ಟೇಜ್​ನಲ್ಲಿ ಟೀಮ್​ ಇಂಡಿಯಾ ಸೋಲೆ ಕಂಡಿಲ್ಲ. ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದು, ಸೋಲಿಲ್ಲದ ಸರದಾರನಾಗಿ ಸೆಮಿಸ್​ ಲಗ್ಗೆ ಇಟ್ಟಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿದ ಆತ್ಮವಿಶ್ವಾಸ ಟೀಮ್​ ಇಂಡಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us