newsfirstkannada.com

ಕೊಹ್ಲಿ ಕೆರಿಬಿಯನ್​ ವಿರುದ್ಧ ಫಸ್ಟ್​ ಬೌಂಡರಿ ಬಾರಿಸಲು ಎಷ್ಟು ಬಾಲ್ ಫೇಸ್ ಮಾಡಿದ್ರು? ವಿರಾಟ್ ಬ್ಯಾಟಿಂಗ್​ ಸ್ಟೈಲ್ ಚೇಂಜ್..!

Share :

19-07-2023

    ಹಿಂದೆ ಇದ್ದ ವಿರಾಟ್ ಬೇರೆ ಈಗಿರೋ ಕೊಹ್ಲಿ ಬೇರೆ ಏಕೆ ಅಂತೀರಾ..?

    ವಿರಾಟ್​ ಕೊಹ್ಲಿಗೆ ಬೌಂಡರಿ ಸಿಡಿಸಲು ಭಯ, ಕ್ರಿಸ್​ ಬಿಡಲು ಆತಂಕ

    2020ರ ಬಳಿಕ ಟೆಸ್ಟ್​​ನಲ್ಲಿ ಬ್ಯಾಟಿಂಗ್​ ಕುಸಿತ, ಕಮ್​​ಬ್ಯಾಕ್​ಗೆ ಯತ್ನ

ಟೆಸ್ಟ್​ ಕ್ರಿಕೆಟ್​ ವಿರಾಟ್​ ಕೊಹ್ಲಿ ಫೇವರಿಟ್​ ಫಾರ್ಮೆಟ್​.. ONCE UPON A TIME ವೈಟ್​ ಜೆರ್ಸಿ ತೊಟ್ಟು ಆಡೋದಂದ್ರೆ ಕಿಂಗ್​ ಕೊಹ್ಲಿಗೆ ಎಲ್ಲಿಲ್ಲದ ಖುಷಿಯಿತ್ತು.! ಆದ್ರೆ. ಈಗ ಭಯ, ಆತಂಕವೇ ಕೊಹ್ಲಿಯಲ್ಲಿ ಮನೆ ಮಾಡಿದೆ. ಆನ್​​ಫೀಲ್ಡ್​ನಲ್ಲಿ ಎದುರಾಳಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸ್ತಿದ್ದ ಕೊಹ್ಲಿ, ಇದೀಗ ತನ್ನೊಳಗೆ ಹೊಸ ಯುದ್ಧ ನಡೆಸ್ತಿದ್ದಾರೆ.

ವಿರಾಟ್​ ಕೊಹ್ಲಿ ವಿಶ್ವ ಕ್ರಿಕೆಟ್​​ನಲ್ಲಿ ತನ್ನದೆ ಸಾಮ್ರಾಜ್ಯವನ್ನ ಕಟ್ಟಿಕೊಂಡು ಮೆರೆದಾಡ್ತಿರೋ ಕಿಂಗ್​. ವಿಶ್ವದ ಮೂಲೆ ಮೂಲೆಗಳಲ್ಲಿ ಅಸಾಧ್ಯ ಅಂದಿದ್ದನ್ನೂ ಸಾಧಿಸಿ ತೋರಿಸಿದ ವೀರ. ವಿರಾಟನ ವಿರಾಟರೂಪಕ್ಕೆ ಎದುರಾಳಿಗಳು ಥಂಡಾ ಹೊಡೆದ್ರೆ, ಫೈಟಿಂಗ್​ ಸ್ಪಿರಿಟ್​, ಸಾಧಿಸೋ ಛಲಕ್ಕೆ ದಿಗ್ಗಜರು ಫಿದಾ ಆಗಿದ್ರು. ಆದ್ರೆ, ಈಗ ಕಾಲ ಬದಲಾಗಿದೆ. ಇದು ಕೊಹ್ಲಿಯ ಆಟನಾ ಎಂದು ಆಶ್ಚರ್ಯಪಡುವಂತಾಗಿದೆ.

ಕಿಂಗ್​ ಕೊಹ್ಲಿಯ ಖದರ್​​ ಮಾಯ..!

ಬ್ಯಾಕ್​ ಫುಟ್ ಕವರ್​​ಡ್ರೈವ್​, ಫ್ರಂಟ್​​ ಫ್ರುಟ್ ಕವರ್​​ಡ್ರೈವ್​, ಸ್ಟೆಪ್​ ಔಟ್​ ಕವರ್​​ಡ್ರೈವ್, ಇನ್​ಸೈಡ್​ ಔಟ್ ಕವರ್​​ಡ್ರೈವ್​​, ಸ್ಟ್ರೇಟ್​​ ಡ್ರೈವ್, ಬ್ಯಾಕ್​ಫುಟ್​ ಪಂಚ್​ಒಂದಾ ಎರಡಾ ಕ್ರಿಕೆಟ್​​ ಟೆಕ್ಸ್ಟ್​​​​ಬುಕ್​ನಲ್ಲಿರೋ ಎಲ್ಲ ಕ್ರಿಕೆಟಿಂಗ್​ ಶಾಟ್​​ಗಳನ್ನೂ ನೀರು ಕುಡಿದಷ್ಟು ಸುಲಭಕ್ಕೆ ಕೊಹ್ಲಿ ಬಾರಿಸ್ತಿದ್ರು. ಕವರ್​​ಡ್ರೈವ್​ ಕಿಂಗ್​​ಗೆ ಎಷ್ಟು ಇಷ್ಟ ಅನ್ನೋದು ಎಲ್ಲರಿಗೊ ಗೊತ್ತಿರೋ ವಿಚಾರ. ಆದ್ರೆ, ಕಳೆದ 2-3 ವರ್ಷದಿಂದ ಕೊಹ್ಲಿ ಬ್ಯಾಟ್​ನಿಂದ ಕ್ವಾಲಿಟಿ ಶಾಟ್​​ಗಳೆ ಬರ್ತಿಲ್ಲ. ಕೊಹ್ಲಿಯ ಹಳೆ ಖದರ್​ ನೋಡೋದೆ ಅಪರೂಪವಾಗಿದೆ.

ಆಗಿರೋ ಕೊಹ್ಲಿ ಬೇರೆ.. ಈಗಿರೋ ಕೊಹ್ಲಿನೇ ಬೇರೆ..!

ನಾವು ಹೀಗೆ ಹೇಳೋದಕ್ಕೆ ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವೇ ಕಾರಣ. ಈ ಪಂದ್ಯದಲ್ಲಿ ತಾಳ್ಮೆಯ ಆಟವಾಡಿದ ಕೊಹ್ಲಿ, 76 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಆದ್ರೆ, ಇಲ್ಲಿ ಹೈಲೆಟ್​ ಆಗಿದ್ದು, ಮೊದಲ ಬೌಂಡರಿ ಹಾಗೂ ಆಗ ಮಾಡಿದ ಸೆಲಬ್ರೇಷನ್​.

ನಿಮಗೂ ಇದು ಆಶ್ಚರ್ಯ ಅನ್ನಿಸಬಹುದು. ಈ ಹಿಂದೆ ಸೆಂಚುರಿ ಮೇಲೆ ಸೆಂಚುರಿಗಳನ್ನ ಹೊಡೆದು, ದಾಖಲೆಗಳನ್ನ ಧ್ವಂಸ ಮಾಡಿದಾಗಲೂ ಕೊಹ್ಲಿ ಹೀಗೆ ಸೆಲೆಬ್ರೇಟ್​​ ಮಾಡಿದ್ದು ಕಮ್ಮಿ. ಬರೋಬ್ಬರಿ 110 ಟೆಸ್ಟ್​​ಗಳನ್ನ ಆಡಿರೋ ಕೊಹ್ಲಿ ಈಗ ಒಂದು ಬೌಂಡರಿಗೆ ಅಸಾಧ್ಯವಾದುದನ್ನ ಸಾಧಿಸಿದಂತೆ ಸೆಲಬ್ರೇಟ್​ ಮಾಡ್ತಿದ್ದಾರೆ. ಗಾಳಿಯನ್ನ ಪಂಚ್​ ಮಾಡ್ತಾ, ಡ್ರೆಸ್ಸಿಂಗ್​ ರೂಮ್​ನತ್ತ ಬ್ಯಾಟ್​ ತೋರಿಸ್ತಾ ಸಂಭ್ರಮಿಸ್ತಿದ್ದಾರೆ.

ವಿಂಡೀಸ್​​ ವಿರುದ್ಧದ ಕೊಹ್ಲಿಯ ಇನ್ನಿಂಗ್ಸ್​ ಎಲ್ಲರಲ್ಲೂ ಒಂದು ಆಶ್ಚರ್ಯವನ್ನ ಹುಟ್ಟು ಹಾಕಿರೋದ್ರಲ್ಲಿ ಅನುಮಾನವೇ ಇಲ್ಲ. ಈ ಇನ್ನಿಂಗ್ಸ್​​ನಲ್ಲಿ ಮೊದಲ ಬೌಂಡರಿ ಸಿಡಿಸೋಕೆ ಕೊಹ್ಲಿ ತೆಗೆದುಕೊಂಡಿದ್ದು ಬರೋಬ್ಬರಿ 81 ಎಸೆತಗಳನ್ನ. ಆ ಬಳಿಕ 2ನೇ ಬೌಂಡರಿ ಸಿಡಿಸಲು 43 ಎಸೆತ ತೆಗೆದುಕೊಂಡ್ರೆ, 3ನೇ ಬೌಂಡರಿ ಬಂದಿದ್ದು 36 ಎಸೆತಗಳಾದ ಮೇಲೆ.

ಕೊಹ್ಲಿಯನ್ನ ಕಾಡ್ತಿದೆ ಭಯ, ಆತಂಕ..!

ಡೊಮಿನಿಕಾದಲ್ಲಿ ಕೊಹ್ಲಿ ಆಡಿದ ಇನ್ನಿಂಗ್ಸ್​ ಅನ್ನ ಮೆಚ್ಚಲೇಬೇಕು. ಕೊಹ್ಲಿ ಆ ಇನ್ನಿಂಗ್ಸ್​ನಲ್ಲಿ ತಾಳ್ಮೆ, ಏಕಾಗ್ರತೆ, ಎಚ್ಚರಿಕೆ ಎಲ್ಲವೂ ಇತ್ತು.. 262 ನಿಮಿಷಗಳ ಕಾಲ ಕ್ರಿಸ್​ ಕಚ್ಚಿ ನಿಂತು, 182 ಎಸೆತಗಳನ್ನ ಫೇಸ್​ ಮಾಡೋದು ಸಾಮಾನ್ಯದ ಮಾತಲ್ಲ.. ಆದ್ರೆ, ಅದರ ಜೊತೆಗೆ ಎಲ್ಲಿ ಔಟ್​ ಆಗಿ ಬಿಡ್ತೀನೋ ಎಂಬ ಆತಂಕವೂ ಕೊಹ್ಲಿಯನ್ನ ಕಾಡಿದ್ದು, ಸ್ಪಷ್ಟವಾಗೇ ಗೊತ್ತಾಗ್ತಿತ್ತು. 2 ಕ್ಯಾಚ್​ ಡ್ರಾಪ್​, ಒಂದು ರನೌಟ್​​ ಸೇರಿ 3 ಜೀವದಾನ ಸಿಕ್ಕಿದ್ರೂ, ಕೊಹ್ಲಿ ಒಂದೊಂದು ರನ್​ಗೆ ತಿಣುಕಾಟ ನಡೆಸಿದ್ರು..

2020ರ ಬಳಿಕ ಟೆಸ್ಟ್​​ನಲ್ಲಿ ಕುಸಿದ ಸರಾಸರಿ.!

2019ರ ಅಂತ್ಯದವರೆಗೆ ಎಲ್ಲವೂ ಚನ್ನಾಗೆ ಇತ್ತು. 2019 ಹಾಗೂ 2020ವರೆಗೂ ರೆಡ್​ಬಾಲ್​ನಲ್ಲಿ ಕೊಹ್ಲಿಯ ಪರ್ಫಾಮೆನ್ಸ್​ ಓಕೆ..! ಆದ್ರೆ, ಕಳೆದ 3 ವರ್ಷದಿಂದ ತೀವ್ರ ಕುಸಿತ ಕಂಡಿದೆ. ಸ್ಟ್ರೈಕ್​ರೇಟ್​, ಸರಾಸರಿ ಬಿದ್ದೋಗಿದೆ. 2021ರ ಜನವರಿಯ ಬಳಿಕ ಕೇವಲ 32.55ರ ಸರಾಸರಿ ಹೊಂದಿದ್ದಾರೆ. ತವರಿನಲ್ಲಿ 3 ವರ್ಷದ ಬಳಿಕ ಟೆಸ್ಟ್​ ಶತಕ ಸಿಡಿಸಿದಾಗಲೂ ಮೊದಲ ಬೌಂಡರಿ ಸಿಡಿಸಲು 122 ಎಸೆತ ತೆಗೆದುಕೊಂಡಿದ್ರು. ಕಿಂಗ್​ ಕೊಹ್ಲಿಯ ಕಂಪ್ಲೀಟ್​ ಡಿಫರೆಂಟ್​ ಅವತಾರ ಇದು.

2018ರ ಇಂಗ್ಲೆಂಡ್​ ಟೂರ್​ ಕೊಹ್ಲಿ ಪಾಲಿಗೆ ಮಹತ್ವದ್ದಾಗಿತ್ತು. ಆಗಲೂ ಕೊಹ್ಲಿ ಮೇಲೆ ನಿರೀಕ್ಷೆಯ ಭಾರವಿತ್ತು.. ಆದ್ರೆ ಕೊಹ್ಲಿ ಲೀಲಾಜಾಲವಾಗಿ ಬ್ಯಾಟ್​ ಬೀಸಿದ್ರು. ನಾಟಿಂಗ್​ಹ್ಯಾಮ್​ನಲ್ಲಿ ಸೆಂಚುರಿ ಸಿಡಿಸಿ ಘರ್ಜಿಸಿದ್ರು. ನಂತರ ಆಸಿಸ್​ ಟೂರ್​​​ನಲ್ಲೂ ಭರ್ಜರಿ ಆಟವಾಡಿದ್ರು. ಆದ್ರೆ, 2019ರ ಬಳಿಕ ಟೆಸ್ಟ್​ ಫಾರ್ಮೆಟ್​ನಲ್ಲಿ ವಿದೇಶದಲ್ಲಿ ಸಿಂಗಲ್​ ಸೆಂಚೂರಿ ಸಿಡಿಸೋಕೆ ಪರದಾಡ್ತಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಕಮ್​​ಬ್ಯಾಕ್​ ಮಾಡೋ ಹಂಬಲ.!
ಸದ್ಯ ಕೊಹ್ಲಿ ತಮ್ಮ ಆಟವನ್ನ ಕಂಪ್ಲೀಟ್​ ಚೇಂಜ್​ ಮಾಡಿಕೊಂಡಿದ್ರ ಹಿಂದಿರೋ ಉತ್ತರ ಸಿಂಪಲ್​. ಟೆಸ್ಟ್​ ಕ್ರಿಕೆಟ್​​ನಲ್ಲಿ ಬ್ಯಾಡ್​ಫಾರ್ಮ್​ನಿಂದ ಆಚೆ ಬರಬೇಕು ಅನ್ನೋದಷ್ಟೇ ಕೊಹ್ಲಿಯ ಹಂಬಲವಾಗಿದೆ. ವಿಂಡೀಸ್​ ವಿರುದ್ಧದ 2ನೇ ಟೆಸ್ಟ್​ನಲ್ಲಾದ್ರೂ ವಿರಾಟ್​​ ಕಮ್​​ಬ್ಯಾಕ್​ ಮಾಡ್ತಾರಾ.? ಶತಕದ ಬರಕ್ಕೆ ಬ್ರೇಕ್​ ಹಾಕ್ತಾರಾ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಕೆರಿಬಿಯನ್​ ವಿರುದ್ಧ ಫಸ್ಟ್​ ಬೌಂಡರಿ ಬಾರಿಸಲು ಎಷ್ಟು ಬಾಲ್ ಫೇಸ್ ಮಾಡಿದ್ರು? ವಿರಾಟ್ ಬ್ಯಾಟಿಂಗ್​ ಸ್ಟೈಲ್ ಚೇಂಜ್..!

https://newsfirstlive.com/wp-content/uploads/2023/07/VIRAT_KOHLI-6.jpg

Load More