newsfirstkannada.com

Watch: ಟೀಮ್ ಇಂಡಿಯಾದಲ್ಲಿ ಎಂಟರ್‌ಟೈನರ್ ಅಂದ್ರೆ ಕಿಂಗ್​ ಕೊಹ್ಲಿ.. ಕ್ಯಾಚ್​ ಬಿಟ್ರೂ ಡ್ಯಾನ್ಸ್​ ಮಾತ್ರ ಬಿಡದ ವಿರಾಟ್

Share :

16-07-2023

    ಕೊಹ್ಲಿ ಫೀಲ್ಡ್​ನಲ್ಲಿ ಡ್ಯಾನ್ಸ್​ ಮಾಡುವ ಮೂಲಕ ಫ್ಯಾನ್ಸ್​ಗೆ ರಂಜನೆ

    ಸಂತಸ ಕ್ಷಣದಲ್ಲಿ ತನ್ನದೇ ಡ್ಯಾನ್ಸ್​ ಸ್ಟೆಪ್ಸ್​ ಹಾಕುವ ವಿರಾಟ್ ಕೊಹ್ಲಿ ​

    ಕೆರಿಬಿಯನ್​ ಜತೆ ಆಡುವಾಗ ಫ್ಯಾನ್ಸ್​ಗೆ ಮತ್ತೆ ಸಿಕ್ತು ಡ್ಯಾನ್ಸ್​​ ಭಾಗ್ಯ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ರನ್ ಮಷಿನ್. ಅಂಗಳದಲ್ಲಿ ಬ್ಯಾಟಿಂಗ್ ಝಲಕ್ ತೋರಿಸೋ ವಿರಾಟ್, ಪಕ್ಕಾ ಡಬಲ್ ಎಂಟರ್‌ಟೈನರ್‌. ಅಂದುಕೊಂಡಂತೆಯೇ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ 3 ದಿನಕ್ಕೆ ಮುಕ್ತಾಯ ಆಯಿತು. ಡೊಮೆನಿಕಾದಲ್ಲಿ ಆಲ್​ರೌಂಡರ್ ಶೋನಿಂದ ಅಭಿಮಾನಿಗಳ ಮನ ಗೆದ್ದ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿದಾಯ್ತು. ಆದ್ರೆ, ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಡಬಲ್ ಟ್ರೀಟ್ ನೀಡಿದ್ದು ಮಾತ್ರ ಕಿಂಗ್ ಕೊಹ್ಲಿ.

ಡೊಮೆನಿಕಾದಲ್ಲಿ ಬ್ಯಾಟಿಂಗ್ ಝಲಕ್ ತೋರಿದ್ದ ವಿರಾಟ್ 76 ರನ್ಸ್​ ಬಾರಿಸಿ ಅಮೋಘ ಇನ್ನಿಂಗ್ಸ್ ಕಟ್ಟಿದ್ದರು. ಇದರೊಂದಿಗೆ ಫ್ಯಾನ್ಸ್​ಗೆ ದಿಲ್ ಖುಷ್ ಮಾಡಿದ್ದ ವಿರಾಟ್​ ಫೀಲ್ಡಿಂಗ್ ವೇಳೆ ಮಸ್ತ್ ಎಂಟರ್ಟೈನ್ಮೆಂಟ್ ನೀಡಿದರು.

ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿ ರಂಜಿಸಿದ ಕೊಹ್ಲಿ!

421 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದ ಟೀಮ್ ಇಂಡಿಯಾ ಫೀಲ್ಡಿಂಗ್​ಗೆ ಮರಳಿತ್ತು. ಈ ವೇಳೆ ಬೌಂಡರಿ ಗೆರೆ ಬಳಿ ಟೀಮ್ ಇಂಡಿಯಾ ಆಟಗಾರರು ಸೈಲೆಂಟ್ ಆಗಿದ್ರೆ. ಇತ್ತ ಕೊಹ್ಲಿ ಮಾತ್ರ ಸಿಕ್ಕಿದ್ದೇ ಚಾನ್ಸ್ ಎಂಥಾ ಸ್ಟೆಪ್ಸ್ ಮೇಲೆ ಸ್ಟೆಪ್ಸ್ ಹಾಕಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಕೊಹ್ಲಿಯ ಡ್ಯಾನ್ಸ್ ಮೂವ್ಸ್ ಇಷ್ಟಕ್ಕೆ ನಿಲ್ಲಲಿಲ್ಲ. ಇನ್ನೂ ಕೊಹ್ಲಿಯ ಡ್ಯಾನ್ಸ್ ಮೂಮೆಂಟ್ಸ್ ನೋಡಿದ ಆಟಗಾರರಂತೂ ನಗೆ ಗಡಲಿಲ್ಲ ತೇಲಾಡಿದರು.

ಕ್ಯಾಚ್ ಬಿಟ್ರೂ ಕೊಹ್ಲಿ ಫನ್​ಗೆ ಇಲ್ಲ ಬ್ರೇಕ್..!

3ನೇ ದಿನದಾಟದ 3ನೇ ಸೆಷನ್. ಟೀಮ್ ಇಂಡಿಯಾ ಗೆಲುವಿಗೂ ಜಸ್ಟ್ 3 ವಿಕೆಟ್ ಬೇಕಿತ್ತು. ಈ ವೇಳೆ 2ನೇ ಸ್ಲಿಪ್​ನಲ್ಲಿದ್ದ ವಿರಾಟ್, ಹೋಲ್ಡರ್ ಕ್ಯಾಚ್ ಕೈಚೆಲ್ಲಿದ್ರು. ಆದ್ರೆ, ಇದ್ಯಾವುದನ್ನೂ ಲೆಕ್ಕಿಸದ ಕೊಹ್ಲಿ ಮಾತ್ರ ಇಶಾನ್ ಕಿಶನ್, ಗಿಲ್ ಚಿತ್ರ ವಿಚಿತ್ರ ರಿಯಾಕ್ಷನ್ ನೀಡ್ತಾ ಸಖತ್ ಎಂಜಾಯ್ ಮಾಡ್ತಿದ್ದರು. ಇದಿಷ್ಟೇ ಅಲ್ಲ, ಕೊಹ್ಲಿ ಲೆಗ್ ಸ್ಲಿಪ್​ನಲ್ಲಿದ್ದಾಗ ಹೋಲ್ಡರ್, ಬ್ಯಾಕ್ ಶಾರ್ಟ್ ಲೆಗ್​ನತ್ತ ಹೊಡೆದು 1 ರನ್ ಕದಿಯುತ್ತಾರೆ. ಈ ವೇಳೆ ಅಲ್ಲೇ ಮಲಗಿ ಕಾಮಿಡಿಯಲ್ಲಿ ತೊಡಗುತ್ತಾರೆ.

ಇದೆ ಮೊದಲಲ್ಲ ಕೊಹ್ಲಿಯ ಆನ್​ ಫೀಲ್ಡ್​ ಎಂಟರ್ಟೈನ್ಮೆಂಟ್.!

ಕೊಹ್ಲಿಯ ಈ ಬಿಂದಾಸ್ ಎಂಟರ್‌ಟೈನ್ಮೆಂಟ್ ಶೋ ಇದೇ ಮೊದಲಲ್ಲ. ಈ ಹಿಂದಿನ ಹಲವು ಸರಣಿಗಳಲ್ಲಿ ಅಭಿಮಾನಿಗಳಿಗೆ ಚಿಯರ್ ಮಾಡಿದ್ದ ಕೊಹ್ಲಿ, ಆಟಗಾರರನ್ನು ಹುರಿದುಂಬಿಸುವಂತೆ ಫ್ಯಾನ್ಸ್​ಗೆ ಜೋಶ್ ತುಂಬಿದ್ದರು.

ಅದೇನೇ ಆಗಲಿ, ಸಿರೀಸ್ ಟೈಮ್​ನಲ್ಲಿ ನಿಗಿನಿಗಿ ಕೆಂಡದಂತೆ ಕಾಣುವ ವಿರಾಟ್, ಇತರೆ ಸಮಯಗಳಲ್ಲಿ ಜಾಲಿ ಜಾಲಿಯಾಗಿ ಮೈದಾನದಲ್ಲಿ ಓಡೋಡ್ತಾ ಅಭಿಮಾನಿಗಳಿಗೆ ರಸದೌತಣವನ್ನೇ ಹುಣಬಡಿಸೋ ಎಂಟರ್‌ಟೈನರ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Watch: ಟೀಮ್ ಇಂಡಿಯಾದಲ್ಲಿ ಎಂಟರ್‌ಟೈನರ್ ಅಂದ್ರೆ ಕಿಂಗ್​ ಕೊಹ್ಲಿ.. ಕ್ಯಾಚ್​ ಬಿಟ್ರೂ ಡ್ಯಾನ್ಸ್​ ಮಾತ್ರ ಬಿಡದ ವಿರಾಟ್

https://newsfirstlive.com/wp-content/uploads/2023/07/KOHLI_DANCE.jpg

Load More