/newsfirstlive-kannada/media/post_attachments/wp-content/uploads/2024/11/KLB-Infant-Kidnap.jpg)
ಕಲಬರಗಿಯ ಜಿಲ್ಲಾಸ್ಪತ್ರೆಯಿಂದ ಹಸುಗೂಸನ್ನು ಕಿಡ್ನಾಪ್ ಮಾಡಿರುವ ವಿಷಯ ಬೆಳಕಿಗೆ ಬ.ದಿದೆ. ನರ್ಸ್​​ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು ಹಸುಗೂಸನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ನಸುಕಿನ ಜಾವ 4 ಗಂಟೆಗೆ ಕಸ್ತೂರಿ ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇವರನ್ನು ವಾರ್ಡ್​ ನಂಬರ್ 115ಕ್ಕೆ ಶಿಫ್ಟ್​ ಮಾಡಲಾಗಿತ್ತು. ಈ ವೇಳೆ ನರ್ಸ್ ವೇಷ ಧರಿಸಿ ಬಂದ ಇಬ್ಬರು ಮಹಿಳೆಯರು ಆ ಗಂಡು ಮಗುವನ್ನು ಅಪಹರಣ ಮಾಡಿದ್ದಾರೆ.
ನರ್ಸ್​ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ರಕ್ತತಪಾಸಣೆಗೆ ಮಗುವನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಸಂಪೂರ್ಣವಾಗಿ ಮುಖವನ್ನು ಮುಚ್ಚಿಕೊಂಡು ಬಂದಿದ್ದ ನಕಲಿ ನರ್ಸ್​ಗಳ ಮಾತನ್ನು ನಂಬಿ ಮಗುವಿನ ಚಿಕ್ಕಮ್ಮ ಚಂದ್ರಕಲಾ ಹಸುಗೂಸನ್ನು ತೆಗೆದುಕೊಂಡು ರಕ್ತತಪಾಸಣೆಗೆ ಹೋಗಿದ್ದಾರೆ. ಈ ವೇಳೆ ಮಗುವನ್ನು ನಮಗೆ ಕೊಡಿ ಅಂತ ಹೇಳಿದ ನಕಲಿ ನರ್ಸ್​ಗಳು ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಬದುಕಿನ ಕೊನೆ ಉಸಿರಿನಲ್ಲೂ ಒಂದಾದ ವೃದ್ಧ ದಂಪತಿ.. ಹೃದಯ ವಿದ್ರಾವಕ ಘಟನೆ
ಎಷ್ಟು ಹೊತ್ತಾದರು ಅವರು ಬಾರದಿದ್ದ ಕಾರಣ ಮಗುವಿನ ಚಿಕ್ಕಮ್ಮನಿಗೆ ಅನುಮಾನ ಬಂದು ವಿಚಾರಿಸಿದಾಗ ಮಗು ಕಿಡ್ನಾಪ್ ಆಗಿರುವುದು ಕಂಡು ಬಂದಿದೆ. ರಾವೂರು ಗ್ರಾಮದಿಂದ ಕಲಬುರಗಿ ಜಿಲ್ಲಾಸ್ಪತ್ರೆಗೆ ಬಂದಿದ್ದರು ರಾಮಕೃಷ್ಣ ಹಾಗೂ ಪತ್ನಿ ಕಸ್ತೂರಿ. ಸದ್ಯ ಮಗು ಅಪಹರಣವಾಗಿರುವ ಪ್ರಕರಣವನ್ನು ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/Sharanaprakash-Patil.jpg)
ಇನ್ನು ವಿಷಯ ತಿಳಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಮಗುವಿನ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ ಮಗುವಿನ ಪತ್ತೆಗಾಗಿ ಪೊಲೀಸ್ ಕಮಮಿಷನರ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us