newsfirstkannada.com

ಇನ್ಫೋಸಿಸ್‌ಗೆ ಮತ್ತೊಂದು ಹೆಮ್ಮೆಯ ಗರಿ; ವಿಶ್ವದ 100 ಬೆಸ್ಟ್ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ

Share :

15-09-2023

  ಭಾರತದ ಇನ್ಫೋಸಿಸ್ ಮಾತ್ರವೇ ಟಾಪ್ 100ರ ಒಳಗೆ ಸ್ಥಾನ

  ವಿಪ್ರೋ, ಮಹೀಂದ್ರಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಪ್ಲೇಸ್‌ ಎಷ್ಟು?

  TIME ಮತ್ತು ಸ್ಟ್ಯಾಟಿಸ್ಟಾ ಪಟ್ಟಿಯಲ್ಲಿ ಒಟ್ಟು 750 ಕಂಪನಿಗಳು

ಟೈಮ್ ಮ್ಯಾಗಜೀನ್ 2023ರ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 100ರ ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. ಟೈಮ್‌ ಮತ್ತು ಆನ್‌ಲೈನ್ ಡೇಟಾ ಪ್ಲಾಟ್‌ಫಾರ್ಮ್ ಸ್ಟ್ಯಾಟಿಸ್ಟಾ ಸಂಗ್ರಹಿಸಿದ ಅಂಕಿ ಅಂಶದಲ್ಲಿ ಮೈಕ್ರೋಸಾಫ್ಟ್, ಆ್ಯಪಲ್, ಗೂಗಲ್‌ನ ಆಲ್ಫಾಬೆಟ್, ಫೇಸ್‌ಬುಕ್‌ನ ಮೆಟಾನಂತಹ ಟೆಕ್ ಕಂಪನಿಗಳು ಅಗ್ರಸ್ಥಾನದಲ್ಲಿದೆ. ಟಾಪ್ 100ರಲ್ಲಿ ಇನ್ಫೋಸಿಸ್ 64 ನೇ ಸ್ಥಾನದಲ್ಲಿದೆ. ಈ ಮೂಲಕ 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿ ಇನ್ಫೋಸಿಸ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮೇಜರ್ ಆಶಿಶ್ ತಾಯಿಯಿಂದ ಹೆಮ್ಮೆಯ ಸೆಲ್ಯೂಟ್‌; ಈ ವಿಡಿಯೋ ನೋಡಿದ್ರೆ ಕರುಳು ಕಿತ್ತು ಬರುತ್ತೆ

TIME ಮತ್ತು ಸ್ಟ್ಯಾಟಿಸ್ಟಾ ಬೆಸ್ಟ್ ಕಂಪನಿಗಳಲ್ಲಿ ಒಟ್ಟು 750 ಕಂಪನಿಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಇನ್ಫೋಸಿಸ್ ಮಾತ್ರವೇ ಟಾಪ್ 100ರ ಒಳಗೆ ಸ್ಥಾನ ಪಡೆದಿದೆ. ಇತರೆ ಏಳು ಭಾರತೀಯ ಕಂಪನಿಗಳು 750 ಬೆಸ್ಟ್‌ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಕೊಂಡಿವೆ.

ಭಾರತದ ಬೆಸ್ಟ್‌ ಕಂಪನಿಗಳ ಪಟ್ಟಿ

64ನೇ ಸ್ಥಾನ- ಇನ್ಫೋಸಿಸ್‌

174ನೇ ಸ್ಥಾನ- ವಿಪ್ರೋ ಲಿಮಿಟೆಡ್

210ನೇ ಸ್ಥಾನ- ಮಹೀಂದ್ರಾ ಗ್ರೂಪ್

248ನೇ ಸ್ಥಾನ- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

262ನೇ ಸ್ಥಾನ- HCL ಟೆಕ್ನಾಲಜೀಸ್ ಲಿಮಿಟೆಡ್

418 ನೇ ಸ್ಥಾನ- HDFC ಬ್ಯಾಂಕ್

596ನೇ ಸ್ಥಾನ- WNS ಗ್ಲೋಬಲ್ ಸರ್ವಿಸಸ್

672ನೇ ಸ್ಥಾನ- ITC LD

ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಮಾತ್ರ ಭಾರತೀಯ ಸಂಸ್ಥೆಯಾಗಿದೆ. ಕಂಪನಿ ಆದಾಯದ ಬೆಳವಣಿಗೆ, ಸುಸ್ಥಿರತೆ, ಉದ್ಯೋಗಿಯ ತೃಪ್ತಿ, ಸಾಮಾಜಿಕ ಮತ್ತು ಕಾರ್ಪೊರೇಟ್ ಆಡಳಿತದ ದತ್ತಾಂಶವನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಲಾಗುತ್ತದೆ. ಒಂದು ಕಂಪನಿಯ ಉದ್ಯೋಗಿಗಳು ಹೆಚ್ಚಾಗಿ ಸಂತೋಷವಾಗಿರುವ ಕಾರಣ ಆ ಕಂಪನಿಗಳಿಗೆ ಹೆಚ್ಚಿನ ಸ್ಥಾನ ಲಭಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಫೋಸಿಸ್‌ಗೆ ಮತ್ತೊಂದು ಹೆಮ್ಮೆಯ ಗರಿ; ವಿಶ್ವದ 100 ಬೆಸ್ಟ್ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ

https://newsfirstlive.com/wp-content/uploads/2023/09/Infosys.jpg

Load More