ಅಮಾಯಕ ಯುವಕನ ಮೇಲೆ ಮನಬಂದಂತೆ ಹಲ್ಲೆ
ಕೌಟುಂಬಿಕ ಕಲಹ ಹಿನ್ನೆಲೆ ಹಿಗ್ಗಾಮುಗ್ಗ ಥಳಿತ
ಸೆಟಲ್ಮೆಂಟ್ ಹೆಸರಿನಲ್ಲಿ ಪುಂಡನ ಅಟ್ಟಹಾಸ
ಹಾಸನ: ವ್ಯಕ್ತಿಯೋರ್ವ ಅಮಾಯಕ ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ವಲ್ಲಭಾಯಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನಿಗೆ ವ್ಯಕ್ತಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಹಲ್ಲೆಗೊಳಗಾದ ಯುವಕ ಟಿ.ನರಸೀಪುರ ಗ್ರಾಮದ ಅಕ್ರಂ ಎಂದು ಗುರುತಿಸಲಾಗಿದೆ. ಅಕ್ರಂ ಹಾಸನದ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ರಂ ಮತ್ತು ಆತನ ಪತ್ನಿ ಜೊತೆಗೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ವಿಚಾರ ತಿಳಿದು ಸೂಫಿಯಾನ್ ಎಂಬಾತ ತನ್ನ ಕಚೇರಿಗೆ ಅಕ್ರಂನನ್ನು ಕರೆಸಿಕೊಂಡಿದ್ದಾನೆ. ಬಳಿಕ ಕಚೇರಿಯಲ್ಲಿ ಅಕ್ರಂಗೆ ಕಾಲಿನಿಂದ ಒದ್ದು, ಬೆಲ್ಟ್‌ನಿಂದ ಮನಸ್ಸೋಇಚ್ಛೆ ಹಲ್ಲೆ ಮಾಡಿದ್ದಾನೆ.
ಸೂಫಿಯಾನ್ ಗುಜರಿ ವ್ಯಾಪಾರ ಮಾಡುವ ಇಮ್ರಾನ್ ಸಹೋದರನಾಗಿದ್ದು, ಆತನ ಏಟಿನಿಂದ ಅಕ್ರಂ ಕಣ್ಣೀರಿಟ್ಟಿದ್ದಾನೆ. ಸೂಫಿಯಾನ್ ಥಳಿತದಿಂದ ಅಕ್ರಂ ಗೋಗರೆದರು ಆತನನ್ನು ಬಿಡದೆ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆ ಹಾಕಿದ್ದಲ್ಲದೆ, ಸೆಟಲ್ಮೆಂಟ್ ಹೆಸರಿನಲ್ಲಿ ಅಟ್ಟಹಾಸ ಮೆರೆದಿದ್ದಾನೆ.
ಅಂದಹಾಗೆಯೇ ಯುವಕನಿಗೆ ಸೂಫಿಯಾನ್ ಥಳಿಸಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ವ್ಯಕ್ತಿಯೋರ್ವ ಅಮಾಯಕ ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ವಲ್ಲಭಾಯಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಯುವಕನಿಗೆ ವ್ಯಕ್ತಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಹೆಚ್ಚಿನ ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ: https://t.co/jY3gBD8TWn#Hassan #beatup pic.twitter.com/sUqhSFJCXx
— NewsFirst Kannada (@NewsFirstKan) July 9, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ