newsfirstkannada.com

ವೇಗವಾಗಿ ಬಂದು ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಇನೋವಾ ಕಾರು.. ಯುವತಿ ಸಾವು, ಐವರಿಗೆ ಗಾಯ

Share :

Published April 28, 2024 at 9:27am

  ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಕಾರು ಡಿಕ್ಕಿ

  ಬಳಿಕ ರಸ್ತೆ ಬದಿಯ ಮರಕ್ಕೂ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

  ಇನೋವಾ ಕಾರು ಪಲ್ಟಿ ಹೊಡೆದ ರಭಸಕ್ಕೆ ಯುವತಿ ಸ್ಥಳದಲ್ಲೇ ಸಾವು

ಉಡುಪಿ: ಅತಿ ವೇಗದ ಹಿನ್ನೆಲೆ ಇನೋವಾ ಕಾರು ಪಲ್ಟಿ ಹೊಡೆದ ಘಟನೆ ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಪಲ್ಟಿ ಹೊಡೆದ ರಭಸಕ್ಕೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸಾವನ್ನಪ್ಪಿದ ಯುವತಿಯನ್ನು ಕೀರ್ತಿ(25) ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿಯಾಗಿದ್ದಾಳೆ. ಇನ್ನು ಕಾರಿನಲ್ಲಿದ್ದ ಚೆನ್ನಪಟ್ಟಣ ನಿವಾಸಿಗಳಾದ ಕಾರು ಚಾಲಕ ಮಿಥುನ್, ಪ್ರಯಾಣಿಕರಾ ಚೇತನ್, ವಿಘ್ನೇಶ್, ಐಶ್ವರ್ಯ, ಕೀರ್ತನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳನ್ನು ಕುಂದಾಪುರದ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ! ನಾಳೆ ಬೆಳಗ್ಗೆ 3:35ರಿಂದಲೇ ಮೆಟ್ರೋ ಸೇವೆ ಆರಂಭ

ಮೃತರು ಹಾಗೂ ಗಾಯಾಳುಗಳೆಲ್ಲರು ರಾಜರಾಜೇಶ್ವರಿ ನಗರದ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದು, ಧರ್ಮಸ್ಥಳದಿಂದ ಮುರುಡೇಶ್ವರಕ್ಕೆ ಹೊರಟಿದ್ದ ವೇಳೆ ಅವಘಡ ನಡೆದಿದೆ. ಹುಣ್ಸೆಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಇನ್ನೋವಾ ಕಾರು ರಸ್ತೆ ಬದಿಯ ಮರಕ್ಕೂ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ 5 ಮಂದಿಗೆ ಗಂಭೀರ ಗಾಯವಾಗಿದೆ. ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಗವಾಗಿ ಬಂದು ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಇನೋವಾ ಕಾರು.. ಯುವತಿ ಸಾವು, ಐವರಿಗೆ ಗಾಯ

https://newsfirstlive.com/wp-content/uploads/2024/04/car-Accident.webp

Load More