newsfirstkannada.com

ಒಂದು ಪ್ಯಾಂಟ್​ ₹1 ಲಕ್ಷ.. ಜಾಕೆಟ್ ರೇಟ್​ ಲಕ್ಷ, ಲಕ್ಷ.. ದರ್ಶನ್ ದಿಲ್ದಾರ್ ಲೈಫ್‌ನ ಇನ್‌ಸೈಡ್‌ ಸ್ಟೋರಿ ಇಲ್ಲಿದೆ!

Share :

Published August 30, 2024 at 9:59pm

Update August 30, 2024 at 10:11pm

    ಬಳ್ಳಾರಿಯಲ್ಲಿ ನೋಡಿದ ‘ದರ್ಶನ್ ಲಕ್ಷುರಿ’ ಲೈಫ್ ಏನೇನೂ ಅಲ್ಲ!

    ವಿಶ್ವವಿಖ್ಯಾತ ಲಕ್ಷುರಿ ಬ್ರ್ಯಾಂಡ್ಸ್​​ ಬಟ್ಟೆ ಅನ್ನೇ ಹಾಕ್ತಾರೆ ದರ್ಶನ್​​​

    ಲ್ಯಾಂಬೋರ್ಗಿನಿ, ಉರುಸ್​, ಹಮ್ಮರ್.. ದರ್ಶನ್​ ದಿಲ್ದಾರ್ ದುನಿಯಾ

ಟೂರಿಸ್ಟಾ? ಅಥವಾ ಕೊಲೆ ಕೇಸ್ ಆರೋಪಿಯಾ? ದರ್ಶನ್ ಬಳ್ಳಾರಿ ಜೈಲಿನ ಮುಂದೆ ಬಂದಿಳಿದಾಗ ಇಂಥಾದ್ದೊಂದು ಪ್ರಶ್ನೆ ಎಲ್ಲರಲ್ಲೂ ಹುಟ್ಟಿದ್ದು ಸುಳ್ಳಲ್ಲ. ಅದ್ರಲ್ಲೂ, ಪೊಲೀಸ್ ಅಧಿಕಾರಿಯೊಬ್ಬರು ದರ್ಶನ್ ಕೈ ಕುಲುಕಿದ್ದಂತೂ ಎಲ್ಲರನ್ನೂ ದಿಗ್ಬ್ರಾಂತಗೊಳಿಸಿತ್ತು. ಯಾಕಂದ್ರೆ, ದರ್ಶನ್‌ರನ್ನ ಯಾವ್ದೋ ಜೈಲು ಫಂಕ್ಷನ್‌ಗೆ, ಕೈದಿಗಳಿಗೆ ಉಪದೇಶ ಕೊಡೋಕಂತಾ ಕರೆದೊಯ್ದಿರಲಿಲ್ಲ. ಬದಲಾಗಿ ಪರಪ್ಪನ ಅಗ್ರಹಾರದಲ್ಲಿ ಧಮ್ ಹೊಡ್ದು, ನಟೋರಿಯಸ್ ರೌಡಿ ಜೊತೆ ಖಾಸ್‌ಬಾತ್ ನಡೆಸಿದ ಕಾರಣಕ್ಕೆ ಬೆಂಗಳೂರಿಂದ ಬಳ್ಳಾರಿಗೆ ಸ್ಥಳಾಂತರ ಮಾಡಲಾಗ್ತಿತ್ತು. ಆದ್ರೆ, ದರ್ಶನ್​ ಬಳ್ಳಾರಿ ಜೈಲಿಗೂ ಎಂಟ್ರಿ ಕೊಟ್ಟ ರೀತಿಯೂ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಜೈಲಿಗೂ ದುಬಾರಿ ಬ್ರ್ಯಾಂಡೆಡ್​ ಬಟ್ಟೆ, ಟೀಶರ್ಟ್​ ಮೇಲೆ ಗ್ಲಾಸ್​ ಧರಿಸಿದ್ದ ಸ್ಟೈಲ್​ ನೋಡಿ ದರ್ಶನ್​ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

ಒಬ್ಬ ವಿಚಾರಣಾಧೀನ ಕೈದಿ ಧರಿಸೋ ಬಟ್ಟೆಯನ್ನ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಮಾಡಲೂಬಾರದು. ಆದ್ರೆ, ಇಲ್ಲಿ ಗಮನಿಸಬೇಕಾಗಿರೋ ಅಂಶ ಏನ್​ ಗೊತ್ತಾ? ಅದೇ ದರ್ಶನ್​ರ ಲಕ್ಸುರಿ ಲೈಫ್​ಸ್ಟೈಲ್​. ಜೈಲಿಗೇ ಲಕ್ಸುರಿ ಬಟ್ಟೆ, ಗ್ಲಾಸು, ಜಾಕೆಟ್​ ತಗೊಂಡು ಹೋಗಿರೋ ದರ್ಶನ್​ ಹೊರಗಡೆ ಯಾವ್​ ರೀತಿ ಲೈಫ್​ ಲೀಡ್​ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಹುಟ್ಟಿಸಿದೆ.

ದರ್ಶನ್ ಮರ್ಡರ್ ಕೇಸ್‌ನಲ್ಲಿ ತಗ್ಲಾಕ್ಕೊಂಡು ಜೈಲು ಸೇರಿದ ಮೇಲೆ ಈ ರೀತಿ ಬದ್ಲಾಗಿಲ್ಲ. ಯಾವಾಗ ದರ್ಶನ್‌ಗೆ ಸ್ಟಾರ್‌ಡಮ್ ಅನ್ನೋದು ಸಿಕ್ಕಿತೋ ಅಂದಿನಿಂದ ದರ್ಶನ್ ಲೈಫ್‌ಸ್ಟೈಲ್ ಕೂಡ ಬದಲಾಗಿತ್ತು. ಸೈಕಲ್, ಸ್ಕೂಟರ್ ಓಡಿಸ್ತಿದ್ದ ಜಾಗದಲ್ಲಿ ಲಕ್ಷುರಿ ಬೈಕ್‌ಗಳು, ಲಕ್ಷುರಿ ಕಾರ್‌ಗಳು ಬಂದು ಸೇರಿದ್ದವು. ಆ್ಯವರೇಜ್ ರೇಟಿನ ಬಟ್ಟೆ ತೊಡ್ತಿದ್ದ ಕಡೆ ಬ್ರ್ಯಾಂಡೆಡ್ ಬಟ್ಟೆಗಳ ಮಿಂಚ ತೊಡಗಿದ್ದವು.

ಬಳ್ಳಾರಿಯಲ್ಲಿ ನೋಡಿದ ‘ದರ್ಶನ್ ಲಕ್ಷುರಿ’ ಏನೇನೂ ಅಲ್ಲ!
ಹಾಕೋ ಪ್ಯಾಂಟ್​ ₹1 ಲಕ್ಷ.. ಜಾಕೆಟ್ ರೇಟ್​ ಲಕ್ಷ ಲಕ್ಷ!
ಕೋಟಿ ಕೋಟಿಯ ಕಾರು, ಅದೊಂದು ಆಸೆ ಈಡೇರಲ್ವಾ?
ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ, ಡಿಬಾಸ್ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳೋ ದರ್ಶನ್‌ರ ದಿಲ್ದಾರ್ ದುನಿಯಾ ಅಚ್ಚರಿ ಮತ್ತು ಶಾಕಿಂಗ್ ರಹಸ್ಯವನ್ನೇ ತೆರೆದಿಡೋಕೂ ಮೊದ್ಲು, ಬಳ್ಳಾರಿ ಜೈಲಿಗೆ ದಾಸ ಪಾದವೂರೋ ಸಂದರ್ಭದಲ್ಲಿ ಕಂಡುಬಂಡ ದರ್ಶನ್ ಲುಕ್‌ ಮತ್ತು ಗೆಟಪ್ ಬಗ್ಗೆ ನಿಮಗೆ, ಆ ಗೆಟಪ್‌ ಎಷ್ಟು ಬೆಲೆ ಬಾಳುತ್ತೋ ಅನ್ನೋ ಬಗ್ಗೆ ನಿಮಗೆ ಹೇಳಲೇಬೇಕು. ಆ ರೋಚಕ ರೇಟಿನ ಲೆಕ್ಕದ ಡೈರಿ ತೆರೆದುಕೊಳ್ಳೋದು ಈ ಟೀಶರ್ಟ್ ಮೂಲಕ.

ಇದು ವಿಶ್ವವಿಖ್ಯಾತ ಪ್ಯೂಮಾ ಕಂಪನಿಯ ಟೀಶರ್ಟ್. ಇದರ ಬೆಲೆ 30 ಸಾವಿರ ಎನ್ನಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಈ 30 ಸಾವಿರವಿದ್ರೆ ಎರಡ್ಮೂರು ವರ್ಷಕ್ಕೆ ಆಗುವಷ್ಟು ಪ್ಯಾಂಟು, ಶರ್ಟು ಖರೀದಿಸಿಬಿಡ್ತಾನೆ. ಬಟ್, ಎಷ್ಟೇ ಆದ್ರೂ ಇವ್ರು ಡಿಬಾಸ್ ಅಲ್ವಾ? ಹೆಸರು, ಗತ್ತಿಗೆ ತಕ್ಕಂತೆ ಶರ್ಟ್ ಹಾಕದಿದ್ರೆ ಹೇಗೆ? ಬಳ್ಳಾರಿ ಜೈಲಿಗೆ ಕಾಲಿಡೋ ವೇಳೆ ದರ್ಶನ್ ತೊಟ್ಟಿದ್ದ ಟೀ ಶರ್ಟ್ ರೇಟು 30 ಸಾವಿರ ಎನ್ನಲಾಗ್ತಿದೆ. ಇನ್ನು, ದರ್ಶನ್ ಧರಿಸಿದ್ದ ಜೀನ್ಸ್‌ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂಪಾಯಿ ಎನ್ನಲಾಗ್ತಿದೆ.

ಇದನ್ನೂ ಓದಿ: ‘ದರ್ಶನ್ ಬಿಡುಗಡೆ ಆಗಲಿ’-ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ ಅಭಿಮಾನಿಗಳ ಉದ್ಧಟತನ; ಆಗಿದ್ದೇನು? 

ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ. ಜಸ್ಟ್ 150 ರೂಪಾಯಿ ಸಂಬಳಕ್ಕೆ ಲೈಟ್‌ ಬಾಯ್ ಆಗಿ ದುಡಿಯುತ್ತಿದ್ದ ದರ್ಶನ್ ತೊಡುವ ಜೀನ್ಸ್ ಪ್ಯಾಂಟ್‌ಗಳ ಬೆಲೆಯೇ 50 ಸಾವಿರದಿಂದ 1 ಲಕ್ಷ ರೂಪಾಯಿಯಂತೆ. ಖುದ್ದು, ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿಯವರೇ ಈ ಬಗ್ಗೆ ಹೇಳಿಕೊಂಡಿದ್ರು. ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್‌ನ ಜೀನ್ಸ್ ಪ್ಯಾಂಟ್ ಹಾಕ್ತೀನಿ. ‘ರಾಬರ್ಟ್’ ಸಿನಿಮಾಕ್ಕೆ ಇದೇ ರೀತಿಯ 15-20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತೆ. ಹಾಗಾಗಿ, ಕೇವಲ 4 ರಿಂದ 5 ಜೀನ್ಸ್ ತಗೊಂಡು ಬನ್ನಿ ಸಾಕು. ಸುಮ್ಮನೆ ನಿಮಗ್ಯಾಕೆ ಹೊರೆ ಎಂದಿದ್ರಂತೆ.

ಲಕ್ಷುರಿ ಟ್ರೂ ರಿಲಿಜಿಯನ್​ ಪ್ಯಾಂಟ್​​..ಎಲ್​ವಿ ಜಾಕೆಟ್!
ವಿಶ್ವವಿಖ್ಯಾತ ಲಕ್ಷುರಿ ಬ್ರ್ಯಾಂಡ್ಸ್​​ ಬಟ್ಟೆ ಹಾಕ್ತಾರೆ ದರ್ಶನ್​​​!
ದರ್ಶನ್ ಧರಿಸುವ ಜೀನ್ಸ್ ಪ್ಯಾಂಟ್ಸ್​​ ಪ್ರಸಿದ್ಧ ಟ್ರೂ ರಿಲಿಜಿಯನ್ ಎನ್ನುವ ಲಕ್ಸುರಿ ಕಂಪನಿಯದ್ದು. ಈ ಬ್ರ್ಯಾಂಡ್​ನ ಜೀನ್ಸ್​​ಗಳನ್ನ ಸೆಲೆಬ್ರೆಟಿಗಳು, ದೊಡ್ಡ ದೊಡ್ಡ ಉದ್ಯಮಿಗಳಷ್ಟೇ ಧರಿಸೋದು.. ಇದರ ಬೆಲೆ 35 ಸಾವಿರ ರೂಪಾಯಿಯಂತೆ ಶುರುವಾಗಿ, 1 ಲಕ್ಷ ರೂಪಾಯಿವರೆಗೂ ಆಗುತ್ತೆ.

ಇದಕ್ಕಿಂತಲೂ ಅಚ್ಚರಿ ಹುಟ್ಟಿಸೋದು ದರ್ಶನ್ ಕೈಲಿರೋ ಈ ಜಾಕೆಟ್. ಹೌದು, ಈ ಜಾಕೆಟ್ ಕೂಡ ಲಕ್ಷಾಂತರ ರೂಪಾಯಿ ಮೌಲ್ಯದ್ದು ಎನ್ನುವ ಮಾಹಿತಿ ಇದೆ. ವಿಶ್ವ ವಿಖ್ಯಾತ ಲೂಯಿ ವಿಟಾನ್ ಹೆೆಸರಿನ ಕಂಪನಿಯದ್ದು. ಸಾಮಾನ್ಯ ಕುಟುಂಬಗಳ ಮಂದಿ ಈ ಹೆಸರನ್ನೂ ಕೂಡ ಕೇಳಿರಲಿಕ್ಕೆ ಸಾಧ್ಯವಿಲ್ಲ ಬಿಡಿ. ಯಾಕಂದ್ರೆ, ಇಂಡಿಯಾದಲ್ಲಿ ಈ ಬ್ರ್ಯಾಂಡ್ ಜಾಕೆಟ್‌ ಬೆಲೆ ಶುರುವಾಗೋದೆ ಲಕ್ಷ ರೂಪಾಯಿಯಿಂದ. ಇನ್ನು, ದರ್ಶನ್ ಕೈಲಿದ್ದ ಜಾಕೆಟ್‌ ಬೆಲೆ 2 ರಿಂದ 3 ಲಕ್ಷ ರೂಪಾಯಿ ಇರಬಹುದು ಅನ್ನೋ ಮಾಹಿತಿಯಿದೆ.

ಇಷ್ಟೆಲ್ಲಾ ಹೇಳಿದ್ಮೇಲೆ.. ದರ್ಶನ್ ತಮ್ಮ ಟೀಶರ್ಟ್‌ಗೆ ಸಿಗಿಸಿಕೊಂಡಿದ್ದ ಗ್ಲಾಸ್ ಬಗ್ಗೆ ಹೇಳದಿದ್ರೆ ಹೆಂಗಾಗುತ್ತೆ. ಇದು ಕೂಲಿಂಗ್ ಅಂತಾ ಹೇಳಲಾಗ್ತಿತ್ತು. ಬಟ್, ಇದು ಸನ್​ಗ್ಲಾಸ್​ ಅಲ್ಲ. ಪವರ್​ ಗ್ಲಾಸ್ ಅನ್ನೋದು ಗೊತ್ತಾಗಿದೆ. ಓದೋಕೆ ಬಳಸೋ ಕಾಸ್ಟ್ಲಿ ಕನ್ನಡಕ ಎಂಬ ಸ್ಪಷ್ಟನೆಗಳು ಬಂದಿವೆಯಾದ್ರೂ, ಇದರ ಬಗ್ಗೆ ಒಂದು ಅನುಮಾನದ ಕಣ್ಣು ಬಿದ್ದಿರೋದು ಸುಳ್ಳಲ್ಲ. ಈ ಕೂಲ್‌ ಇನ್ ಗ್ಲಾಲ್ ಅಥ್ವಾ ರೀಡಿಂಗ್ ಗ್ಲಾಸ್‌ನ ಬೆಲೆ ಅರ್ಧ ಲಕ್ಷ ಅನ್ನೋ ಮಾಹಿತಿಯಿದೆ. ಬಟ್, ಆ ಕನ್ನಡಕ ಯಾವುದು? ಯಾವ ಕಂಪನಿಯದ್ದು? ಅದರ ರೇಟೆಸ್ಟು ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಕಾಟೇರ ಹೊರಗಿದ್ದ ರಿಯಲ್ ಲೈಫ್‌ಸ್ಟೈಲ್ ನಿಜಕ್ಕೂ ಶಾಕ್​ ಮಾಡುತ್ತೆ !
ಲ್ಯಾಂಬೋರ್ಗಿನಿ, ಉರುಸ್​, ಹಮ್ಮರ್.. ದರ್ಶನ್​ ದಿಲ್ದಾರ್ ದುನಿಯಾ!
ದರ್ಶನ್‌ ಹುಟ್ಟು ಶೋಕಿಲಾಲ ಅಲ್ಲ.. ಬಹುಶಃ ಚಿಕ್ಕವಯಸ್ಸಲ್ಲಿ ಪಟ್ಟ ಕಷ್ಟ, ಉಳ್ಳವರ ಲಕ್ಷುರಿ ಲೈಫ್ ನೋಡಿ ಹುಟ್ಟಿದ ಆಸೆ ಅವರನ್ನು ಈ ರೀತಿ ದಿಲ್ದಾರ್ ದುನಿಯಾದ ಬಾಸ್ ಆಗುವಂತೆ ಮಾಡಿದ್ರೂ ಆಶ್ಚರ್ಯವಿಲ್ಲ. ಖುದ್ದು, ದರ್ಶನ್ ಅವರೇ ಹೇಳಿಕೊಳ್ಳುವಂತೆ ಅವರು ಏನೇನೂ ಆಗದೇ ಇರೋ ಸಂದರ್ಭದಲ್ಲಿ ಲ್ಯಾಂಬೋರ್ಗಿನಿ ಕಾರು ಕಂಡ್ರೆ ಅದು ದೂರಕ್ಕೆ ಸರಿದು, ಕಣ್ಣಿಂದ ಮರೆಯಾಗೋವರೆಗೂ ನೋಡ್ತಿದ್ರಂತೆ.
ದರ್ಶನ್‌ರಲ್ಲಿ ಹುಟ್ಟಿದ್ದ ಸಿರಿವಂತರಾಗೋ ಆಸೆಗೆ ಈ ಕಾರಿನ ಕ್ರೇಜ್‌ ಮೊದಲ ಅಧ್ಯಾಯ ಅಂದ್ರೂ ತಪ್ಪಿಲ್ಲ. ಖುದ್ದು ದರ್ಶನ್ ಅವರೇ ಈ ಹಿಂದೊಂದು ಕಡೆ ಹೇಳಿಕೊಂಡಿರುವಂತೆ ಕಾಸ್ಚ್ಲಿ ಕಾರುಗಳನ್ನು ತಂದು ತಮ್ಮ ಮನೆ ಮುಂದೆ ನಿಲ್ಲಿಸಿಕೊಳ್ಬೇಕು ಎಂಬ ಕನಸು ಕಂಡಿದ್ರಂತೆ. ಕನಸು ಕಂಡಿದ್ದಷ್ಟೇ ಅಲ್ಲ ಆ ಕನಸ್ಸು ನನಸು ಮಾಡಿಕೊಂಡಿದ್ದಾರೆ ದರ್ಶನ್. ದರ್ಶನ್ ಬಳಿಯಿರೋ ಕಾರುಗಳ ರೇಟೆಷ್ಟು ಅಂತ ಕೇಳಿದ್ರೆ ನಿಜಕ್ಕೂ ದಂಗಾಗ್ತೀರ!

‘ಡಿ’ ಲಕ್ಷುರಿ’ಕಾರು’ಬಾರು!
1. ಜಾಗ್ವಾರ್ ಎಕ್ಸ್‌ಕೆಆರ್-ಎಸ್ – ಬೆಲೆ ₹1.30 ಕೋಟಿ
2. ಲ್ಯಾಂಬೋರ್ಗಿನಿ ಅವೆಂಟಡಾರ್ ಸ್ಪೈಡರ್‌ – ಬೆಲೆ ₹5 ಕೋಟಿ
3. ಲ್ಯಾಂಬೋರ್ಗಿನಿ ಉರುಸ್ – ಬೆಲೆ ₹4.18 ಕೋಟಿ
4. ಆಡಿ ಕ್ಯೂ7 – ಬೆಲೆ ₹90 ಲಕ್ಷದಿಂದ ₹1 ಕೋಟಿ
5. ಲ್ಯಾಂಡ್ ರೋವರ್ ಡಿಫೆಂಡರ್ – ಬೆಲೆ ₹1ರಿಂದ ₹3 ಕೋಟಿ
6. ಫೋರ್ಡ್ ಮಸ್ಟಾಂಗ್ – ಬೆಲೆ ₹80 ಲಕ್ಷದಿಂದ ₹1 ಕೋಟಿ
7. ಲ್ಯಾಂಡ್ ರೋವರ್ – ಬೆಲೆ ₹1.5 ಕೋಟಿಯಿಂದ ₹3 ಕೋಟಿ
8. ರೇಂಜ್ ರೋವರ್ ಆಟೋಬಯೋಗ್ರಫಿ – ಬೆಲೆ ₹2.7 ಕೋಟಿಯಿಂದ ₹3.5 ಕೋಟಿ

ದರ್ಶನ್ ಬಳಿಯಿರೋ ಲಕ್ಷುರಿ ಕಾರುಗಳು, ಅವುಗಳ ಬೆಲೆಯೆಷ್ಟು ಅನ್ನೋದನ್ನ ನೋಡಿದ್ರಾ. ಇಷ್ಟಕ್ಕೇ ಸುಸ್ತಾದ್ರೆ ಹೆಂಗೆ? ಇವುಗಳ ಜೊತೆಯಲ್ಲಿ ಪೊರ್ಷೆ ಕಂಪನಿಯ ಕಯೆನ್ನೆ, ಟೊಯ ಟೊಯೊಟಾ ವೆಲ್‌ಫೈರ್, ಮಿನಿ ಕೂಪರ್ ಕಂಟ್ರಿಮ್ಯಾನ್, ಟೊಯೊಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂ ಡಬ್ಲ್ಯೂ 5. ಹೀಗೆ, ಕಾಟೇರನ ಕೋಟೆಯಲ್ಲಿ ಕಾರುಗಳ ಸಾಮ್ರಾಜ್ಯವೇ ಇದೆ. ಅಲ್ಲಾ ಸ್ವಾಮಿ.. ಇಷ್ಟೊಂದು ಕಾರುಗಳನ್ನು ಇಟ್ಕೊಂಡು ದರ್ಶನ್ ಯಾವುದ್ರಲ್ಲಿ ಓಡಾಡ್ತಾರೆ. ಎಲ್ಲಾ ಕಾರಿನಲ್ಲೂ ಸಂಚರಿಸ್ತಾರಾ ಅಂದ್ರೆ ಉತ್ತರ.. ಇಲ್ಲ. ಯಾಕಂದ್ರೆ, ದರ್ಶನ್ ಬಹುತೇಕ ಈ ಕಾರುಗಳಲ್ಲಿ ಸಂಚರಿಸೋದಿಲ್ಲ. ಕಾರು ಓಡಿಸೋ ಮನಸ್ಸು ಬಂದಾಗ, ಲ್ಯಾಂಬೋರ್ಗಿನಿ ಬೇಡಿಯನ್ನ ಚಟ್ ಮಾಡೋ ಆಸೆ ಹುಟ್ಟಿದಾಗ, ಫ್ಯಾಮಿಲಿ ಫಂಕ್ಷನ್, ಸ್ನೇಹಿತರಕಾರ್ಯಕ್ರಮಗಳು, ಸಿನಿಮಾ ಸಮಾರಂಭಗಳಿಗಷ್ಟೇ ಈ ಕಾರುಗಳು ಸೀಮಿತ. ಮಿಕ್ಕಂತೆ ದರ್ಶನ್ ಹೆಚ್ಚಿನದಾಗಿ ಬಳಕೆೆ ಮಾಡೋ ಕಾರು ಅಂದ್ರೆ ಈ ಎಸ್‌ಯುವಿ!.

ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

ದಾಸನಿಗೂ ಬೈಕ್‌ಗಳಿಗೂ ಅದ್ಯಾವ ಜನ್ಮದ ನಂಟಿದ್ಯೋ ಗೊತ್ತಿಲ್ಲ. ಫ್ರೀ ಟೈಂ ಇದ್ದಾಗಲೆಲ್ಲಾ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ಗಳನ್ನ ಗುಡ್ಡೆ ಹಾಕ್ಕೊಂಡು ಸ್ನೇಹಿತರ ಜೊತೆ ಟ್ರಿಪ್ ಹೊರಟು ಬಿಡೋದು ದರ್ಶನ್ ಹವ್ಯಾಸ. ದರ್ಶನ್ ಮನೆ ಗ್ಯಾರೇಜ್‌ನಲ್ಲಿ ಕಾರುಗಳ ಸಂಖ್ಯೆಯೇ ಅಷ್ಟಿದೆ ಅಂದ್ಮೇಲೆ, ಬೈಕ್‌ಗಳಿಗೆ ಲೆಕ್ಕವೇ ಸಿಗೋಲ್ಲ ಅನ್ನಬಹುದು. ಅನ್ಬೋದು ಅಲ್ಲಾ ಅದೇ ಸತ್ಯ. ಯಾಕಂದ್ರೆ, ದರ್ಶನ್ ಬಳಿ ದಶಲಕ್ಷ ರೂಪಾಯಿಂದ ಹಿಡಿದು ಕೋಟಿ ರೂಪಾಯಿ ಬೆಲಬಾಲೋ ಬೈಕ್‌ಗಳೂ ಇವೆ.

ದರ್ಶನ್ ಈ ರೀತಿ ಬೆಲೆಬಾಳುವ ಬೈಕು, ಕಾರುಗಳನ್ನು ಮಕ್ಕಳ ಆಟದ ವಸ್ತುಗಳಂತೆ ಖರೀದಿಸಿ ತಂದು ಗ್ಯಾರೇಜ್‌ನಲ್ಲಿ ಇಟ್ಟುಕೊಳ್ಳೋ ಶೋಕಿ. ಅಲ್ಲಲ್ಲ ಕ್ರೇಜ್ ಹೊಂದಿದ್ದಾರೆ. ಹಾಗೆ, ನಾವು ಹೇಳಿ ಕಾರು, ಬೈಕುಗಳ ಲಿಸ್ಟ್‌ ಅನ್ನು ಹಾಗೆ ರಿವೈಂಡ್ ಮಾಡ್ಕೊಂಡು.. ದರ್ಶನ್ ತಮ್ಮ ಈ ಕ್ರೇಜ್‌ಗಾಗಿ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಅಂತಾ ಲೆಕ್ಕ ಹಾಕ್ಕೊಳಿ!

ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಹಮ್ಮರ್ ಖರೀದಿಸಿದ್ದೇ ದರ್ಶನ್​!
ಅಪ್ಪು ಬಳಿಕ ‘ಉರುಸ್’ ತಗೊಂಡ ಸೆಕೆಂಡ್ ಸ್ಟಾರ್ ‘ಕಾಟೇರ’!
ರಾಜ್‌ಕುಮಾರ್ ಪುತ್ರನ ಬಳಿಯಿರೋ ಕಾರು ನನ್ನ ಬಳಿಯೂ ಇದೆ. ದರ್ಶನ್ ಬಗೆಗಿನ ಸುದ್ದಿಗಳನ್ನ ಫಾಲೋ ಮಾಡೋರಿಗೆ ಈ ಡೈಲಾಗ್ ಚಿರಪರಿಚಿತ. ಹೌದು, ಯಾವುದೋ ವಿಚಾರವೊಂದರ ಬಗ್ಗೆ ಸ್ಪಷ್ಟನೆ ನೀಡುವಾಗ ದರ್ಶನ್ ಇಂಥಾದ್ದೊಂದು ಡೈಲಾಗ್ ಹೊಡೆದಿದ್ದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಆ ವಿಷ್ಯ ಬಿಡೋಣ. ಬಟ್, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಮೊದಲು ಖರೀದಿ ಮಾಡಿದ್ದು ಪುನೀತ್. ಆ ಬಳಿಕ ಉರುಸ್ ನಂದೇ ಕಣೋ ಅಂತ ಎಂದವರು ಬೇಱರೂ ಅಲ್ಲ ಇದೇ ದಿಲ್ದಾರ್ ಸ್ಟಾರ್ ದರ್ಶನ್.

ಸ್ಯಾಂಡಲ್‌ವುಡ್‌ನಲ್ಲಿ ಹಮ್ಮರ್ ಕಾರನ್ನು ಖರೀದಿ ಮಾಡಿದ ಮೊದಲ ಸ್ಟಾರ್ ಈ ದರ್ಶನ್. ದುಡಿದ ದುಡ್ಡನ್ನೆಲ್ಲಾ ಕಾರುಗಳ ಮೇಲೆಯೇ ಸುರಿತಿದ್ದಾರೇನೋ ಎಂಬಂತೆ ದಾಸ ಕಾರು ಕ್ರೇಜ್ ಇತ್ತು. ದರ್ಶನ್ ತಮ್ಮ ಲಕ್ಷುರಿ ಕಾರುಗಳನ್ನು ಏರಿ ಶರವೇಗದಲ್ಲಿ ನುಗ್ಗಿ ಬರ್ತಿದ್ರೆ ಅದನ್ನ ನೋಡೊಕಂತಲೇ ಸಾವಿರಾರು ಮಂದಿ ತುದಿಗಾಲಲ್ಲಿ ಕಾಯ್ತಿದ್ರು. ಎಲ್ಲರ ಮೊಬೈಲ್‌ಗಳ ಕ್ಯಾಮೆರಾಗಳ ಕಣ್ಣುಗಳು ತಂತಾನೆ ತೆರೆದುಕೊಳ್ತಿದ್ದವು. ಸಾವಿರಾರು ರೂಪಾಯಿಯ ಶರ್ಟು, ಪ್ಯಾಂಟು.. ಲಕ್ಷಾಂತರ ರೂಪಾಯಿ ಮೌಲ್ಯದ ಜಾಕೆಟ್ಟು. ರೇಟು ಕೇಳಿದ್ರೆ ಶಾಕ್ ಆಗುವಷ್ಟು ಬೆಲೆಬಾಳೋ ಶೂಗಳು.. ಹೀಗೆ, ದರ್ಶನ್ ಲೈಫ್‌ಸ್ಟೈಲ್ ನಿಜಕ್ಕೂ ದಂಗುಬಡಿಸುವಂತಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಪ್ಯಾಂಟ್​ ₹1 ಲಕ್ಷ.. ಜಾಕೆಟ್ ರೇಟ್​ ಲಕ್ಷ, ಲಕ್ಷ.. ದರ್ಶನ್ ದಿಲ್ದಾರ್ ಲೈಫ್‌ನ ಇನ್‌ಸೈಡ್‌ ಸ್ಟೋರಿ ಇಲ್ಲಿದೆ!

https://newsfirstlive.com/wp-content/uploads/2024/08/darshan-6-2.jpg

Load More