ಮಸಾಲೆ ಮುಕ್ತ, ಪೌಷ್ಠಿಕಾಂಶಯಕ್ತ ಆಹಾರ ಸೇವಿಸ್ತಾರೆ ಕೊಹ್ಲಿ
ವಿರಾಟ್ ಕೊಹ್ಲಿ ವಾರ್ಮಪ್ ರನ್ನಿಂಗ್ ಮೂಲಕ ವರ್ಕೌಟ್ ಶುರು
ಕಟ್ಟು ನಿಟ್ಟಾದ ದಿನಚರಿ ಫಾಲೋ ಮಾಡ್ತಾರೆ ಕ್ರಿಕೆಟರ್ ಕೊಹ್ಲಿ..!
ವಿರಾಟ್ ಕೊಹ್ಲಿ ಒಬ್ಬ ಫಿಟ್ನೆಸ್ ಫ್ರೀಕ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಜಿಮ್ ವರ್ಕೌಟ್, ಡಯಟ್ ವಿಷ್ಯದಲ್ಲಿ ಕಾಂಪ್ರಮೈಸ್ ಆಗೋ ಮಾತೆಯಿಲ್ಲ. ಹಾಗಾದ್ರೆ, ಕೊಹ್ಲಿಯ ವರ್ಕೌಟ್ ಹೇಗಿರುತ್ತೆ, ಡಯಟ್ ಪ್ಲಾನ್ಸ್ ಏನು, ಅವರು ತಿನ್ನುವ ಆಹಾರ ಏನೇನು..?
ಹಾರ್ಡ್ವರ್ಕ್ ಈ ಪದಕ್ಕೆ ಇನ್ನೊಂದು ಹೆಸರು ಕಿಂಗ್ ಕೊಹ್ಲಿ. ಆಟದ ವಿಚಾರದಲ್ಲಿ ಕಾಂಪ್ರಮೈಸೇ ಆಗದ ವಿರಾಟ್, ಫಿಟ್ನೆಸ್ ವಿಚಾರದಲ್ಲೂ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಕಾಂಪ್ರಮೈಸ್ ಆಗೋ ಮಾತೇ ಇಲ್ಲ. ಸದ್ಯ ಕೆರಿಬಿಯನ್ ನಾಡಲ್ಲಿ ಬೀಡು ಬಿಟ್ಟಿರೋ ಕಿಂಗ್, ಸರಣಿ ಆರಂಭಕ್ಕೂ ಮುನ್ನ high intensity ವರ್ಕೌಟ್ ನಡೆಸ್ತಿದ್ದಾರೆ.
ವರ್ಕೌಟ್ನಲ್ಲಿ ವಿರಾಟ್ ಕೊಹ್ಲಿ ನೋ ಕಾಂಪ್ರಮೈಸ್..!
ಪ್ರತಿ ಕ್ರೀಡಾಳುವಿನ ಲಾಂಗ್ ಟೈಮ್ ಸಕ್ಸಸ್ ಸಿಕ್ರೇಟ್ ಫಿಟ್ನೆಸ್. ಮಾನಸಿಕವಾಗಿ, ದೈಹಿಕವಾಗಿ ಸೃದೃಢವಾಗಿದ್ದಲ್ಲಿ ಮಾತ್ರವೇ ಓರ್ವ ಆಟಗಾರ ಸಕ್ಸಸ್ ಕಾಣೋದಲ್ಲದೇ, ಕನ್ಸಿಸ್ಟೆಂಟ್ ಆಗಿ ಆ ಯಶಸ್ಸಿನ ಹಾದಿಯಲ್ಲಿ ಮುಂದುವರೆಸೋಕೆ ಸಾಧ್ಯ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿರಾಟ್ ಕೊಹ್ಲಿ. ಕಟ್ಟು ನಿಟ್ಟಾದ ದಿನಚರಿಯನ್ನ ರೂಪಿಸಿಕೊಂಡಿರೋ ಕಿಂಗ್ ಕೊಹ್ಲಿ, ವಾರದ 5 ದಿನ ವರ್ಕೌಟ್ ಮಿಸ್ಸೇ ಮಾಡಲ್ಲ.
ಕೊಹ್ಲಿಯ ವರ್ಕೌಟ್ ಪ್ಲಾನ್
ವಾರ್ಮಪ್ ರನ್ನಿಂಗ್ ಮೂಲಕ ವರ್ಕೌಟ್ ಆರಂಭಿಸುವ ವಿರಾಟ್ ದೇಹ ಬಿಸಿ ಏರಿದ ಬಳಿಕ ವೇಟ್‌ಲಿಫ್ಟಿಂಗ್, ಪವರ್ ಸ್ನ್ಯಾಚ್, ಪವರ್ ಕ್ಲೀನ್, ಸ್ಟಾರ್ಟರ್ ಲೆವೆಲ್ನಂತಹ ವರ್ಕೌಟ್ ನಡೆಸ್ತಾರೆ. ಆ ಬಳಿಕ ಬ್ಯಾಂಡೆಡ್ ಸ್ಕ್ವಾಟ್ಸ್, ಫ್ಲಾಟ್ ಬೆಂಚ್ ಪ್ರೆಸ್, ಸಿಟ್ಟೆಡ್ ಲೆಗ್ ಎಕ್ಸ್‌ಟೆಂಕ್ಷನ್ ನಂಥಹ ವಿವಿಧ ರೀತಿಯ ವರ್ಕೌಟ್ಗಳನ್ನ ಮಿಸ್ ಮಾಡದೆ ಮಾಡ್ತಾರೆ.
ವರ್ಕೌಟ್ನಲ್ಲೇ ಅಲ್ಲ. ಡಯಟ್ನಲ್ಲೂ ಕೊಹ್ಲಿ ಕಟ್ಟುನಿಟ್ಟು..!
ಕಟ್ಟುನಿಟ್ಟಿನ ವ್ಯಾಯಾಮ ಮಾಡೋ ಕೊಹ್ಲಿ, ದಿನನಿತ್ಯ ಸೇವಿಸುವ ಆಹಾರ ಪದ್ದತಿಯಲ್ಲೂ ಕಟ್ಟುನಿಟ್ಟು. ಇದಕ್ಕಾಗಿ ಕೊಹ್ಲಿ ಕಟ್ಟು ನಿಟ್ಟಿನ ಆಹಾರ ಪದ್ದತಿಯನ್ನ ಅಳವಡಿಸಿಕೊಂಡಿದ್ದಾರೆ. ಮಸಾಲೆ ಮುಕ್ತ, ಸಂಪೂರ್ಣ ಪೌಷ್ಠಿಕಾಂಶಯಕ್ತ ಆಹಾರವನ್ನೇ ಕೊಹ್ಲಿ ಸೇವಿಸ್ತಾರೆ. ತಮ್ಮ ವೇಳಾಪಟ್ಟಿಯಲ್ಲಿ ಇರುದನ್ನು ಬಿಟ್ಟು ಇತರ ಯಾವುದೇ ಆಹಾರ ಸೇವಿಸಲ್ಲ.
ಕೊಹ್ಲಿಯ ಡಯಟ್ ಪ್ಲಾನ್
ಇದಿಷ್ಟೇ ಅಲ್ಲ, ದಿನಕ್ಕೆ ಮೂರರಿಂದ ಮೂರರಿಂದ 4 ಗ್ರೀನ್ ಟೀ ವಿರಾಟ್ ಕೊಹ್ಲಿ, ಫಿಟ್ನೆಸ್ ಹಿಂದಿನ ಸಿಕ್ರೇಟ್ ಆಗಿದೆ. ಕಳೆದ 8 ವರ್ಷಗಳಿಂದ ಮಾಡಿಕೊಂಡು ಬರ್ತಿರೋ ಈ ಸ್ಟ್ರಿಕ್ಟ್ ವರ್ಕೌಟ್ ಆ್ಯಂಡ್ ಡಯಟ್ ಪ್ಲಾನೇ ಕಿಂಗ್ ಕೊಹ್ಲಿಯ ಸಕ್ಸಸ್ಗೆ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಅಷ್ಟೇ ಅಲ್ಲ, ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯಲ್ಲಿದ್ದ ಕಮಿಟ್ಮೆಂಟೇ ಇಂದು ವಿಶ್ವದ ಫಿಟೆಸ್ಟ್ ಕ್ರಿಕೆಟ್ ಎನಿಸಿಕೊಳ್ಳಲು ಕಾರಣವಾಗಿದೆ.
ಕ್ರಿಕೆಟ್ ಕರಿಯರ್ನ ಆರಂಭದಲ್ಲಿ ಫಿಟ್ನೆಸ್ನಿಂದ ದೂರ ಉಳಿದಿದ್ದ ವಿರಾಟ್, ಕಳೆದ 8 ವರ್ಷದಿಂದ ಫಿಟ್ನೆಸ್ ಕ್ರಾಂತಿಯೇ ಮಾಡಿದ್ರು. ತಾವೊಂದೆ ಅಲ್ಲ, ತಂಡದ ಇತರ ಆಟಗಾರರಿಗೂ ಫಿಟ್ನೆಸ್ನ ಪಾಠ ಮಾಡ್ತಿದ್ದಾರೆ. ಟೀಮ್ ಇಂಡಿಯಾದ ನಾಯಕನಾದ ಮೇಲಂತೂ ತಂಡದಲ್ಲಿ ಫಿಟ್ನೆಸ್ ಕಲ್ಚರ್ ಬೆಳೆಸಿ ಅದನ್ನ ಕಂಪಲ್ಸರಿ ಕೂಡ ಮಾಡಿದ್ರು. ಸದ್ಯ ಟೀಮ್ ಇಂಡಿಯಾದ ಆಟಗಾರರು ಫಿಟ್ & ಫೈನ್ ಆಗಿರೋದ್ರ ರೂವಾರಿ ಒನ್ಸ್ ಅಗೇನ್ ಕೊಹ್ಲಿನೇ.
ಫಿಟ್ನೆಸ್ ಕಲ್ಚರ್ಗೆ ಅಡಿಕ್ಟ್ ಆದಮೇಲೆ ಕೊಹ್ಲಿ ಮಾಡದಿರುವ ಸಾಧನೆ ಇಲ್ಲ. ಅಸಾಧ್ಯ ಅಂದಿದ್ದನ್ನೂ ಸಾಧಿಸಿ ತೋರಿಸಿರುವ ವಿರಾಟ್, ಇದೀಗ ವಿಂಡೀಸ್ ಸರಣಿಗೂ ಮುನ್ನ ಮತ್ತೆ ಜಿಮ್ನಲ್ಲಿ ಬೆವರಿಳಿಸಿ ಯುದ್ಧಕ್ಕೆ ಸಜ್ಜಾಗಿದ್ದಾರೆ. ರಣಾಂಗಣದಲ್ಲಿ ಕೊಹ್ಲಿ ಆಟ ಹೇಗಿರುತ್ತೆ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Look for excuses or look to get better. pic.twitter.com/qbTmcNlGfR
— Virat Kohli (@imVkohli) June 19, 2023
Everyday should be a leg day 🦵. 8 years and counting. 🙌 pic.twitter.com/MgQK7LZHzI
— Virat Kohli (@imVkohli) July 8, 2023